Document

E-KATHA: ಇನ್ನು ಮುಂದೆ ಆಸ್ತಿ ನೊಂದಣಿಗೆ ಇ-ಖಾತೆ ಕಡ್ಡಾಯ

Janataa24 NEWS DESK

image editor output image 1768043338 17086957828522956472813342395856

ಸಾರ್ವಜನಿಕರಿಗೆ ಆಸ್ತಿ ನೊಂದಾಣಿ ಇನ್ನೊಷ್ಟು ಸರಳ ಮತ್ತು ಜನಸ್ನೇಹಿ ವ್ಯವಸ್ಥೆ ಜಾರಿಗೆ ಮಾಡಲು ಕಂದಾಯ ಇಲಾಖೆ ಮುಂದಾಗಿರುವುದು ಸ್ವಾಗತಾರ್ಹ.

ಉಪನೋಂದಣಿ ಕಚೇರಿಯಲ್ಲಿನ ನೋಂದಣಿ ಪ್ರಕ್ರಿಯೆಯಲ್ಲಿ ನಾಗರಿಕ ಸೇವೆಯನ್ನು ಮತ್ತಷ್ಟು ಸರಳ ಮತ್ತು ಜನಸ್ನೇಹಿಗೊಳಿಸುವ ಉದ್ದೇಶ ಮತ್ತು ಪೇಪರ್‌ ಖಾತೆಯನ್ನು ತೆಗೆದು ಕಡ್ಡಾಯವಾಗಿ ಇ-ಆಸ್ತಿ (E-KATHA)ಕಡ್ಡಾಯಗೊಳಿಸುವ ನೋಂದಣಿ (ಕರ್ನಾಟಕ ತಿದ್ದುಪಡಿ) ವಿಧೇಯಕವನ್ನು ಅಂಗೀಕರಿಸಲಾಯಿತು. 

ಬುಧವಾರ ಸದನದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ವಿಧೇಯಕದ ಮಹತ್ವದ ಕುರಿತು ಮಾಹಿತಿ ನೀಡಿದ ಬಳಿಕ ಧ್ವನಿ ಮತದ ಮೂಲಕ ಅಂಗೀಕಾರ ನೀಡಲಾಯಿತುವಿಧೇಯಕ ಬಗ್ಗೆ ವಿವರಣೆ ನೀಡಿದ ಸಚಿವರು, ನೋಂದಣಿ ಕಚೇರಿಗಳಲ್ಲಿ ಜನಸಂದಣಿಯನ್ನು ನಿಯಂತ್ರಿಸುವ ಸಲುವಾಗಿ ಎರಡು ಮಹತ್ವದ ತಿದ್ದುಪಡಿಗಳನ್ನು ತರಲಾಗಿದೆ. 

ಆಸ್ತಿ ಮಾರಾಟಗಾರರು ಹಾಗೂ ಖರೀದಿಸುವವರು ಇಬ್ಬರ ಉಪಸ್ಥಿತಿ ಇಲ್ಲದೆ ತಾವಿದ್ದ ಸ್ಥಳದಿಂದಲೇ ತಾಂತ್ರಿಕವಾಗಿ ಆಸ್ತಿ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ. ಅಲ್ಲದೇ, ಪೇಪರ್‌ ಖಾತೆಯನ್ನು ತೆಗೆದು ಕಡ್ಡಾಯವಾಗಿ ಇ-ಖಾತೆ(E-KATHA) ಕಡ್ಡಾಯಗೊಳಿಸಲು ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು. 

ಉಪ ನೋಂದಣಾಧಿಕಾರಿ ಕಚೇರಿಗೆ ಎರಡೂ ಕಡೆಯವರ ಉಪಸ್ಥಿತಿ ಅನಿವಾರ್ಯವಾಗಿದ್ದ ಕಾರಣ ಜನಸಂದಣಿ ಹೆಚ್ಚಾಗಿತ್ತು. ಎಲ್ಲರಿಗೂ ಮೂಲ ಸೌಲಭ್ಯಗಳನ್ನು ಕಲ್ಪಿಸುವುದು ಕಷ್ಟಕರವಾಗಿತ್ತು.ಹೀಗಾಗಿ ಜನಸಾಮಾನ್ಯರು ಅನಗತ್ಯವಾಗಿ ಉಪ ನೋಂದಣಾಧಿಕಾರಿ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ತಾಂತ್ರಿಕ ನೋಂದಣಿಗಾಗಿ ಕ್ರಮ ಕೈಗೊಳ್ಳಲಾಗಿದೆ. ಕೆಐಎಡಿಬಿ, ಕರ್ನಾಟಕ ವಸತಿ ನಿಗಮ ಮಂಡಳಿ , ಕೊಳಚೆ ನಿರ್ಮೂಲನ ಮಂಡಳಿ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಂತಹ ನಂಬಿಕಾರ್ಹ ಮೂಲಗಳ ಸಹಾಯದಿಂದ ನಾಗರಿಕರು ತಾಂತ್ರಿಕವಾಗಿಯೇ ಆಸ್ತಿ ನೋಂದಣಿ ಮಾಡಿಕೊಳ್ಳಬಹುದು. 

ಈ ಹೊಸ ಮಾದರಿ ಈಗಾಗಲೇ ಮಹಾರಾಷ್ಟ್ರದಲ್ಲಿ ಯಶಸ್ವಿಯಾಗಿದ್ದು, ಕರ್ನಾಟಕದಲ್ಲೂ ಸಹ ಜನರಿಗೆ ಉತ್ತಮ ಆಡಳಿತ ನೀಡಲು ಸಹಕಾರಿಯಾಗಲಿದೆ ಎಂದರು. ನಗರ ಪ್ರದೇಶದಲ್ಲಿ ಪೇಪರ್‌ ಖಾತಾ ಮೂಲಕ ನೊಂದಣಿ ನಡೆಸಲಾಗುತ್ತಿದೆ. ಇದರಿಂದ ಅಕ್ರಮಗಳು ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ವಿಧೇಯಕ ತರಲಾಗಿದೆ. 

ಇನ್ನು ಮುಂದೆ ಇ-ಆಸ್ತಿ ಮೂಲಕ ಖಾತೆ (E-KATHA)ಆಗಿದ್ದರೆ ಮಾತ್ರ ನೋಂದಣಿ ಪ್ರಕ್ರಿಯೆಗೆ ಚಾಲನೆ ಸಿಗಲಿದೆ ಎಂದು ತಿಳಿಸಿದರು. ಇದೇ ವೇಳೆ ರಾಜಸ್ವ ಸೋರಿಕೆಯನ್ನು ತಡೆಯಲು ಕರ್ನಾಟಕ ಸ್ಟಾಂಪು (ತಿದ್ದುಪಡಿ) ವಿಧೇಯಕ ಅಂಗೀಕರಿಸಲಾಯಿತು. 

https://www.janataa24.com/accident-three-people-including-a-child-died-in-a-terrible-road-accident/

https://youtube.com/@janataa24?si=XsFcych2GMH0O6Gv

Document

Leave a Reply

Your email address will not be published. Required fields are marked *