Gundlupete: ನಿರ್ವಹಣೆಯಿಂದ ದೂರ ಉಳಿದ ಗ್ರಾಮೀಣ ಭಾಗದ ರಸ್ತೆಗಳು: ಕಣ್ಮುಚ್ಚಿ ಕುಳಿತ ಅಧಿಕಾರಿಗಳು
ಗುಂಡ್ಲುಪೇಟೆ: ಕಾಂತರಾಜು
ಗುಂಡ್ಲುಪೇಟೆ: ಅಭಿವೃದ್ಧಿ ಕಾಣಬೇಕಿರುವ ಗ್ರಾಮೀಣ ಪ್ರದೇಶದ ರಸ್ತೆಗಳು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಕೆಲವು ಗ್ರಾಮೀಣ ಪ್ರದೇಶದ ರಸ್ತೆಗಳು ಹದಗೆಟ್ಟ ಕಾರಣ ಪ್ರತಿ ವಾಹನ ಸವಾರರಿಗೂ ತೊಂದರೆ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಪಡುಗೂರು ಗ್ರಾಮದಿಂದ ಹಳೆಹುಂಡಿ ಮಾರ್ಗವಾಗಿ ಗುಂಡ್ಲುಪೇಟೆ ತಲುಪುವ ವರೆಗೂ ಯಾವುದೇ ವಾಹನದಲ್ಲಿ ಹೋದರು ಹಳ್ಳ ದಿಣೆಗಳನ್ನು ಇಳಿಸಿ ಹೋಗುವುದು ತಪ್ಪಿಲ್ಲ ಆಧುನಿಕತೆಯ ಕಾಲದಲ್ಲೂ ಇದೆ ಪರಿಸ್ಥಿತಿಯೆ ಎಂಬ ಪ್ರಶ್ನೆ ಮೂಡುತ್ತಿರುವುದು ಸಹಜವಾಗಿಯೇ ಕಾಡುತ್ತಿದೆ.

ತೆರಕಣಾಂಬಿ ಕಡೆಯಿಂದ ಬೊಮ್ಮನಹಳ್ಳಿ ಕಡೆಗೆ ಹೋಗುವ ಮಾರ್ಗದಲ್ಲಿ ಕಂಪನ ಕಟ್ಟೆಯಿಂದ ಕಿಲಗೇರೆ ಗೇಟ್ ವರೆಗೂ ಹೆಚ್ಚು ಭಾರ ಹೊತ್ತ ಟಿಪ್ಪರ್ ಗಳ ಓಡಾಟಕ್ಕೆ ಚನ್ನಾಗಿರುವ ರಸ್ತೆ ಕೂಡ ಜೀವವನ್ನು ಕೈಯಲ್ಲಿ ಹಿಡಿದು ಹೋಗುವ ಸಮಸ್ಯೆ ಎದುರಾಗಿದೆ ಈ ರಸ್ತೆಯಲ್ಲಿ ಒಂದು ವಾಹನ ಎದುರು ಬಂದರೆ ಇನ್ನೊಂದು ವಾಹನ ಸರಾಗವಾಗಿ ಹೋಗಲಾರದೂ ಈ ರಸ್ತೆ ಇತ್ತಿಚೆಗೆ ಮೊದಲ ತರ ಇಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.. ಮತ್ತು ಮಳೆಗಾಲದಲ್ಲಿ ಇಲ್ಲಿನ ಸಮಸ್ಯೆ ಅನುಭವಿಸಿದವರಿಗೆ ಮಾತ್ರ ಗೊತ್ತು .
ಈ ರಸ್ತೆಯಲ್ಲಿ ಬರುವ ಗುಂಡಿಗಳನ್ನು ತಾತ್ಕಾಲಿಕ ವಾಗಿ ಮಣ್ಣಿನಲ್ಲಿ ಮುಂಚಿದರೂ. ಇದು ಶಾಶ್ವತ ವಲ್ಲ ಡಾಂಬರೀಕರಣ ಮಾಡಿ ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಿ ಅನುಕೂಲ ಕಲ್ಪಿಸುವ ವ್ಯವಸ್ಥೆ ಮಾಡಿ ಹೆಚ್ಚು ಭಾರ ಹೊರುವ ವಾಹನಗಳಿಗೆ ನಿಗದಿತ ಭಾರ ಹೊರುವಂತೆ ತಾಲ್ಲೂಕು ಆಡಳಿತ ಕ್ರಮ ಕೈಗೊಳ್ಳಬೇಕು ಎಂಬ ಮಾತು ಪ್ರತಿಯೊಬ್ಬರ ಕೂಗಾಗಿದೆ.

ಹಾಗೆಯೇ ಇನ್ನೂ ತೆರಕಣಾಂಬಿ ಯಿಂದ ಕಬ್ಬಹಳ್ಳಿ ಕಡೆಗೆ ಹೋಗುವ ಮಾರ್ಗದಲ್ಲಿ ಬರುವ ತೆರಕಣಾಂಬಿ ಹುಂಡಿ ವರೆಗೂ ಸಂಪೂರ್ಣವಾಗಿ ರಸ್ತೆ ಡಾಂಬರು ಕಾಣದಂತೆ ಮಾಯವಾಗಿ ಮಳೆಗಾಲದಲ್ಲಿ ಕೆಸರು ಗದ್ದೆಯಲ್ಲಿ ನಡೆದಾಡುವ ರೀತಿ ಕಾಣುವುದು ಕಣ್ಣಾರೆ ಕಂಡವರಿಗೆ ತಿಳಿಯುತ್ತದೆ ಇಲ್ಲಿನ ಪರಿಸ್ಥಿತಿ ವಾಹನ ಸವಾರರು ತಮ್ಮ ದಿನನಿತ್ಯದ ಕೆಲಸಗಳಿಗೆ ಎಷ್ಟೇ ಬೇಗ ಹೋಗಬೇಕು ಎಂದು ಬಂದರು ಹಳ್ಳ ದಿಣ್ಣೆಗಳ ಇಳಿದು ಹೋಗಲೇ ಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.