Gundlupete: ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ರವರ ಪ್ರತಿಮೆ ನಿರ್ಮಾಣಕ್ಕೆ ಚಾಲನೆ
ಗುಂಡ್ಲುಪೇಟೆ: ಕಾಂತರಾಜು
ಗುಂಡ್ಲುಪೇಟೆ: ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ರವರ ಪ್ರತಿಮೆ ನಿರ್ಮಾಣ ಕಾರ್ಯಕ್ಕೆ ತಾಲ್ಲೂಕಿನ ದಲಿತ ಮುಖಂಡರು ಜೊತೆಗೂಡಿ ನಾಮಫಲಕ ಬೋರ್ಡ್ ನೆಡುವ ಮೂಲಕ ಚಾಲನೆ ನೀಡಿದರು.

ಪಟ್ಟಣದ ಊಟಿ ಸರ್ಕಲ್ ಎಂದೇ ಪ್ರಸಿದ್ಧಿ ಪಡೆದಿರುವ ಹೃದಯ ಭಾಗದಲ್ಲಿ ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ರವರ ಪ್ರತಿಮೆ ನಿರ್ಮಾಣ ಮಾಡಲು ದಲಿತ ಸಂಘಟನೆಗಳ ಮುಖಂಡರು ಜೊತೆಗೂಡಿ ಅಂಬೇಡ್ಕರ್ ಅವರ ಭಾವಚಿತ್ರ ಇರುವ ನಾಮಫಲಕ ನೆಡುವ ಮೂಲಕ ಪ್ರತಿಮೆ ನಿರ್ಮಾಣ ಕಾರ್ಯಕ್ಕೆ ಅಡಿಪಾಯ ಹಾಕಿದ್ದರು.

ನಂತರ ಅಂಬೇಡ್ಕರ್ ಭವನದಲ್ಲಿ ನಡೆದ ಸಭೆಯಲ್ಲಿ ದಲಿತ ಸಮುದಾಯದ ಹಿರಿಯ ಮುಖಂಡರು ಮಾತನಾಡುತ್ತಾ ಬಹಳ ದಿನಗಳ ಕನಸು ನೆರವೇರಿದೆ ಇದು ಒಂದು ಐತಿಹಾಸಿಕ ದಿನ ಊಟಿ ಸರ್ಕಲ್ ಎಂದು ಕರೆಯುತ್ತಿದ್ದನ್ನು ಇನ್ನೂ ಮುಂದೆ ಅಂಬೇಡ್ಕರ್ ವೃತ್ತ ಎಂದು ಕರೆಯಲಾಗುತ್ತದೆ ಪ್ರತಿಮೆ ನಿರ್ಮಾಣ ಮಾಡಲು ಸರ್ವರೂ ಕೈ ಜೋಡಿಸಬೇಕು. ತಾಲ್ಲೂಕಿನಲ್ಲಿ ದಲಿತ ಸಮುದಾಯ ಎರಡನೇ ಸ್ಥಾನದಲ್ಲಿ ಇದ್ದು ಹೀಗೆಯೇ ಒಗ್ಗಟ್ಟು ಕಾಣಬೇಕು ಮತ್ತು ಪ್ರತಿ ಕ್ಷೇತ್ರದಲ್ಲೂ ಪ್ರಗತಿಯನ್ನು ಕಾಣುವ ದಿಕ್ಕಿನಲ್ಲಿ ಸಾಗಿದಾಗ ಮಾತ್ರ ಅಂಬೇಡ್ಕರ್ ಅವರ ಕನಸು ನೆನಸಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ಸುಭಾಷ್ ಮಾಡ್ರಹಳ್ಳಿ, ತಾಲ್ಲೂಕು ಅಧ್ಯಕ್ಷ ಆರ್.ಸೋಮಣ್ಣ, ದಲಿತ ಸಂಘರ್ಷ ಸಮಿತಿ ಮುಖಂಡರಾದ ಹುಣಸಿನಪುರ ನಂಜುಂಡಸ್ವಾಮಿ, ಮಾಡ್ರಹಳ್ಳಿ ರಂಗಸ್ವಾಮಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಟಿ.ನಾಗರಾಜು , ಹಂಗಳ ನಾಗರಾಜು, ಶಿವಬುದ್ಧಿ, ಗೋವಿಂದ ರಾಜು, ಹರಿಶ್ಚಂದ್ರ, ರೇವಣ್ಣ ಕಬ್ಬಹಳ್ಳಿ, ಪ್ರಕಾಶ್ ಮೂಡ್ನ ಕೂಡು, ಮಂಗಲ ನಾಗರಾಜು, ಡಾ.ನವೀನ್ ಮೌರ್ಯ, ಪುರಸಭಾ ಮಾಜಿ ಸದಸ್ಯರಾದ ಮಲ್ಲರಾಜು, ಮೋಹನ್ ,ಮುತ್ತಣ್ಣ , ಮಲ್ಲಿದಾಸ್ , ಪುಟ್ಟು ಚನ್ನವಡೆಯ್ಯನಪುರ, ಟಿ.ಮಹದೇವಸ್ವಾಮಿ, ನಾಗರಾಜು ಮದ್ಧಯ್ಯನಹುಂಡಿ ,ಮಹೇಶ್ ಕಿರಣ್, ಶಿವು ವೀರನಪುರ , ರವಿ ಬಲಚವಾಡಿ, ಶಿವಲಿಂಗು ಗುರುವಿನಪುರ, ದೀಪು ಗುಂಡ್ಲುಪೇಟೆ, ಜಯರಾಮ ಎಂ. ಗ್ರಾಮ ಪಂಚಾಯಿತಿ ಸದಸ್ಯ ಉಲ್ಲಾಸ್,ಹೆಚ್.ಎನ್. ಮಹೇಶ್ ಹೊರೆಯಿಲ, ಮಹೇಶ್ ರಾಘವಾಪುರ, ಮಲ್ಲೇಶ್ ವೀರನಪುರ,ಮತ್ತಿತರರು ಉಪಸ್ಥಿತರಿದ್ದರು.