Janataa24 NEWS DESK
Gubbi: ಎಸ್ ಡಿ ದಿಲೀಪ್ ಕುಮಾರ್ ವಿರುದ್ಧ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಕೆ ಆರ್ ವೆಂಕಟೇಶ್ ತೀವ್ರ ವಾಗ್ದಾಳಿ.

ಗುಬ್ಬಿ: ಬಿಜೆಪಿ ಮುಖಂಡ ಎಸ್ ಡಿ ದಿಲೀಪ್ ಕುಮಾರ್ ಶಾಸಕರ ಪತ್ನಿ ಭಾರತಿ ಶ್ರೀನಿವಾಸ್ ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ದಿಲೀಪ್ ಕುಮಾರ್ ಒಬ್ಬ ಮೈನಿಂಗ್ ಕಳ್ಳ ಎಂದು ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ಕೆ ಆರ್ ವೆಂಕಟೇಶ್ ವಾಗ್ದಾಳಿ ನಡೆಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು
ಶಾಸಕರ ಪತ್ನಿಯನ್ನು ಅಮ್ಮ ಬ್ಯಾಂಕ್ ಎಂದು ಕರೆಯುತ್ತಿದ್ದಾರೆ. ಭಾರತಿ ಶ್ರೀನಿವಾಸ್ ಅವರು ಅವ್ಯವಹಾರ ನಡೆಸಿದರೆ ನಿಖರ ದಾಖಲೆಗಳನ್ನು ಎಸ್ ಡಿ ದಿಲೀಪ್ ಕುಮಾರ್ ಬಿಡುಗಡೆ ಮಾಡಲಿ. ಸುಖ ಸುಮ್ಮನೆ ಅಮ್ಮ ಬ್ಯಾಂಕ್ ಎಂದು ಆರೋಪ ಮಾಡುವುದು ಸರಿಯಲ್ಲ
ಬಿಜೆಪಿಯವರು ಹಿಂದೂ ಪರ ಎಂದು ವೇದಿಕೆಯಲ್ಲಿ ಹೇಳಿಕೊಳ್ಳುತ್ತರೆ ಆದರೆ ಹೆಣ್ಣುಮಕ್ಕಳ ಬಗ್ಗೆ ತೀವ್ರ ಹಗುರವಾಗಿ ಮಾತನಾಡುತ್ತಿದ್ದರು ಯಾರೊಬ್ಬರೂ ಈ ಬಗ್ಗೆ ಚಕಾರ ಎತ್ತುತ್ತಿಲ್ಲ . ಶಾಸಕರ ಅಭಿವೃದ್ಧಿ ಕೆಲಸಗಳ ಬಗ್ಗೆ ಮಾತನಾಡಲಿ ಆದರೆ ವೈಯಕ್ತಿಕವಾಗಿ ಅವರು ಕುಟುಂಬವನ್ನು ಗುರಿಯಾಗಿಸಿಕೊಳ್ಳುವುದು ವ್ಯಕ್ತಿಗೆ ಶೋಭೆ ತರುವುದಿಲ್ಲ.
ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಗೆ ನಮ್ಮ ವಿರೋಧವಿದೆ. ಫೆಬ್ರವರಿಯಲ್ಲಿ ನಡೆಯಲಿರುವ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತಿ ಚುನಾವಣೆ ಇರುವುದರಿಂದ ಓಟ್ ಬ್ಯಾಂಕ್ ಮಾಡಿಕೊಳ್ಳಲು ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಯನ್ನು ರಾಜಕೀಯವಾಗಿ ಎಳೆದು ತರುತ್ತಿದ್ದಾರೆ ಎಂದು ತಿಳಿಸಿದರು. ಶಾಸಕರು ಜನ ಆಶೀರ್ವಾದದೊಂದಿಗೆ ಆಯ್ಕೆಯಾಗಿ ಬಂದಿದ್ದಾರೆ. ರಾಜೀನಾಮೆ ಕೇಳಲು ದಿಲೀಪ್ ಕುಮಾರ್ ಗೆ ಯಾವ ನೈತಿಕತೆ ಇದೆ ಎಂದು ತೀವ್ರವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಮುಖಂಡ ಚಿಕ್ಕರಂಗೇಗೌಡ ಮಾತನಾಡಿ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ವಿರೋಧಿಸಿ ಎನ್,ಡಿ,ಎ,ವತಿಯಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಈ ಸಂಬಂಧ ಶಾಸಕರು ಪ್ರತಿಭಟನೆಯಲ್ಲಿ ಭಾಗವಹಿಸಿಲ್ಲ ಇದನ್ನು ಅರಿಯದ ಬಿಜೆಪಿ ಮುಖಂಡ ದಿಲೀಪ್ ಕುಮಾರ್ ಒಬ್ಬ ಮೂರ್ಖ ವ್ಯಕ್ತಿ ಯಾವುದೇ ಚುನಾವಣೆಯಲ್ಲಿ ಗೆಲ್ಲದ ರಾಜಕೀಯ ಅನುಭವವಿಲ್ಲದ ವ್ಯಕ್ತಿಗಳು ಈ ರೀತಿ ಹೇಳಿಕೆಗಳನ್ನು ನೀಡುವುದು ಅವರ ವ್ಯಕ್ತಿತ್ವ ತೋರುತ್ತದೆ ಎಂದು ವ್ಯಗ್ಯವಡಿದರು.
ಪತ್ರಿಕಾಗೋಷ್ಠಿಯಲ್ಲಿ ಪಪಂ ಅಧ್ಯಕ್ಷೆ ಮಂಗಳಮ್ಮ, ಕಾಂಗ್ರೆಸ್ ಮುಖಂಡರಾದ ಗುರುರೇಣುಕರಾದ್ಯ, ಕೆ ಆರ್ ತಾತಯ್ಯ, ಬಿದರೆ ಯತೀಶ್, ನರಸಿಂಹಮೂರ್ತಿ, ಕೋಡಿಯಾಲ ಮಹಾದೇವ, ಚೇಳೂರು ಶಿವನಂಜಪ್ಪ, ನಟರಾಜು,ಕುಮಾರ್, ಇತರರು ಹಾಜರಿದ್ದರು.
ವರದಿ: ಶ್ರೀಕಾಂತ್ ಗುಬ್ಬಿ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/
Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.