Janataa24 NEWS DESK

ತುರುವೇಕೆರೆ: ಇದೇ ಮೊದಲು ತುರುವೇಕೆರೆ ತಾಲೂಕಿನ ಖಾಸಗಿ ಕಾರ್ಯಕ್ರಮ ಒಂದಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ಅವರು.

ತಾಲೂಕಿನ ಮುದಿಗೆರೆ ಗ್ರಾಮದಲ್ಲಿ ವೀರಭದ್ರೇಶ್ವರ ಮತ್ತು ಭದ್ರಕಾಳಮ್ಮ ನೂತನ ದೇವಾಲಯಗಳು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಲೋಕಾರ್ಪಣೆ ಗೊಳಿಸಿದರು ಇನ್ನು ಪ್ರತಿಷ್ಠಾಪನೆ ಮಾಡಲಾಗಿರುವ ದೇವರ ಮೂರ್ತಿಗಳನ್ನು ಉತ್ತರ ಕರ್ನಾಟಕ ಭಾಗದಿಂದ ತರಲಾಗಿದ್ದು ಎಂದು ಮುದುಗೆರೆ ಗ್ರಾಮದ ದೇವಸ್ಥಾನದ ಟ್ರಸ್ಟಿ ಎಂ ಜಿ ಕೆಂಪೇಗೌಡ ಅವರು ಮಾಹಿತಿ ನೀಡಿದರು.

ನೊಣವಿನಕೆರೆ ಮಠದ ಕರಿ ಋಷಭ ದೇಶಿ ಕೇಂದ್ರಿ ಶಿವಯೋಗಿಸ್ವರ ಸ್ವಾಮೀಜಿಗಳ ದಿವ್ಯ ಸಾನಿಧ್ಯ ವಹಿಸಿದ್ದು, ತುರುವೇಕೆರೆಯ ಮಾಜಿ ಶಾಸಕರಾದ ಎಂ ಡಿ ಲಕ್ಷ್ಮಿ ನಾರಾಯಣ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಈ ದೇವಾಲಯಗಳು ಕೇವಲ ಎರಡೇ ವರ್ಷದಲ್ಲಿ ಎರಡು ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಹೋಮ ಹವನಗಳಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ತುಮಕೂರು ಸಂಸದ ಜಿ ಎಸ್ ಬಸವರಾಜು, ನಿಕಟಪೂರ್ವ ಶಾಸಕ ಮಸಾಲ ಜಯರಾಮ್ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.
ವೇದಿಕೆ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಯೋಜನೆ ಕೆ ಜಿ ಗೆ 29 ರೂ ಗೆ ಸಿಗುವ ಅಕ್ಕಿಯನ್ನು ಉದ್ಘಾಟಿಸಿ ಫಲಾನುಭವಿಗಳಿಗೆ ವಿತರಿಸಿದ ಮಾಜಿ ಮುಖ್ಯಮಂತ್ರಿ,

ಇದೇ ಕಾರ್ಯಕ್ರಮದಲ್ಲಿ ಎಚ್ ಡಿ ರೇವಣ್ಣ, ತುರುವೇಕೆರೆ ಶಾಸಕ ಎಂ ಟಿ ಕೃಷ್ಣಪ್ಪ , ಜೆಡಿಎಸ್ ಮುಖಂಡ ರಮೇಶ್ ಗೌಡ , ಉಪಸ್ಥಿತರಿದ್ದರು ಇದೇ ವೇಳೆ ದೇವಸ್ಥಾನದ ಶಿಲ್ಪಿ ಅಜೀಮ್, ಚಿಕ್ಕಹಳ್ಳಿ ಅವರಿಗೆ ಸನ್ಮಾನಿಸಲಾಯಿತು.
ಮುದಿಗೆರೆ ಗ್ರಾಮದ ಬಿಜೆಪಿ ಮುಖಂಡ ಎಂ ಜಿ ಕೆಂಪೇಗೌಡ ಇವರ ನೇತೃತ್ವದಲ್ಲಿ ನಡೆದ ದೇವಾಲಯಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ, ದೇವಸ್ಥಾನದ ಕಮಿಟಿ ಅಧ್ಯಕ್ಷರಾದ ಎಂ ಬಿ ಚಿಕ್ಕವೀರಯ್ಯ,
ಎಂ ಶಿವಲಿಂಗೇಗೌಡ, ಎಂ ಸಿ ನಾರಾಯಣ್, ಗಿರೀಶ್, ಎಂಎಸ್ ಬಸವರಾಜ್, ಉಮೇಶ್, ಎಂಆರ್ ಶ್ರೀನಿವಾಸ್ ಗೌಡ, ಶ್ರೀಮತಿ ಭಾಗ್ಯಮ್ಮ ಬೈರಪ್ಪ, ಇನ್ನು ಅನೇಕ ಟ್ರಸ್ಟ್ ನ ಪದಾಧಿಕಾರಿಗಳು ಹಾಗೂ ಊರಿನ ಸುತ್ತಮುತ್ತ ಗ್ರಾಮಸ್ಥರು ಮತ್ತು ಭಕ್ತಾದಿಗಳು ಭಾಗಿಯಾಗಿದ್ದರು.
ವರದಿ: ಮಂಜುನಾಥ್ ಕೆ ಎ ತುರುವೇಕೆರೆ.