Document

ಕಳಪೆ ಗುಣಮಟ್ಟದ ಪೈಪ್ ಗಳನ್ನು ತಿರಸ್ಕರಿಸಿದ ರೈತರು.

Janataa24 NEWS DESK


IMG 20240207 WA0015


ಗುಬ್ಬಿ: ತಾಲೂಕಿನ ಕಡಬ ಹೋಬಳಿಯ ಕೃಷಿ ಇಲಾಖೆಯಲ್ಲಿ 2023-24ನೇ ಸಾಲಿನ ಸೂಕ್ಷ್ಮ ನೀರಾವರಿ ಘಟಕದ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ನೀಡಬೇಕಾಗಿದ್ದ
ಪೈಪ್ ಗಳಲ್ಲಿ ಕಳಪೆ ಗುಣಮಟ್ಟವಿದ್ದು ರೈತರು ಪೇಚೆಗೆ ಸಿಲುಕಿ ಸಂಬಂಧಪಟ್ಟ ಅಧಿಕಾರಿಗಳಿಗೆ ಇಡಿ ಶಾಪ ಹಾಕಿದ ಘಟನೆ ನಡೆಯಿತು.



ನೊಂದ ರೈತರು ಮಾತನಾಡಿ
ಕೃಷಿ ಇಲಾಖೆಯ ಬೇಜಾಬ್ದಾರಿತನದಿಂದ ಈ ಘಟನೆಯು ನಡೆದಿದೆ.

IMG 20240207 WA0014


ತೋಟದ ಕೆಲಸಗಳನ್ನು ಬಿಟ್ಟು ಪೈಪ್ ಗಳನ್ನು ತೆಗೆದುಕೊಂಡು ಹೋಗಲು ಬಾಡಿಗೆ ವಾಹನಗಳನ್ನು ತಂದಿದ್ದೇವೆ.
ಬಾಡಿಗೆಗೆ ಸುಖ ಸುಮ್ಮನೆ ಹಣ ನೀಡಬೇಕಿದೆ. ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ವಹಿಸದಿದ್ದರೆ ಈ ರೀತಿ ಸಂಭವಿಸುತ್ತದೆ
ಎಂದು ತಮ್ಮ ಅಳಲನ್ನು ತೋಡಿಕೊಂಡರು.



ಕಡಬ ಹೋಬಳಿಯಲ್ಲಿ 35 ಜನ ರೈತಪಲಾನುಭವಿಗಳಿದ್ದು ಇದೇ ಪ್ರಥಮ ಬಾರಿಗೆ ಮಹಾರಾಷ್ಟ್ರದ ಸೊಲ್ಲಾಪುರದ ಕೊತಾರಿ ಅಗ್ರಿಟೆಕ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ಕಳಪೆ ಗುಣಮಟ್ಟದ ಪೈಪ್ ಗಳನ್ನು ಸರಬರಾಜು ಮಾಡಿದೆ.
ಅತಿ ಶೀಘ್ರವಾಗಿ ಉತ್ತಮ ಗುಣಮಟ್ಟದ ಪೈಪ್ ಗಳನ್ನು ನೀಡುತ್ತೇವೆ.

IMG 20240207 WA0016



ಕಡಬ ಕೃಷಿ ಅಧಿಕಾರಿ

ಕಳಪೆ ಗುಣಮಟ್ಟದ ಪೈಪ್‌ಗಳನ್ನು ಸಂಬಂಧಪಟ್ಟ ಕಂಪನಿಗೆ ವಾಪಸ್ಸು ಕಳುಹಿಸುತ್ತೇವೆ. ಅತಿ ಶೀಘ್ರವಾಗಿ ಉತ್ತಮ ಗುಣಮಟ್ಟದ ಪೈಪ್ ಗಳನ್ನು ವಿತರಣೆ ಮಾಡಲಾಗುವುದು.
ಸಹಾಯಕ ಕೃಷಿ ನಿರ್ದೇಶಕರು ಗುಬ್ಬಿ.

ವರದಿ

ಗುಬ್ಬಿ: ಶ್ರೀಕಾಂತ್

Document

Leave a Reply

Your email address will not be published. Required fields are marked *