Janataa24 NEWS DESK

“ಬಲಿಯಾಗದಿರು ಮನವೇ ಮೊಬೈಲ್ ಎಂಬ ಮಾಯೆಗೆ”ಎಂಬ ಸಂದೇಶ ಸಾರಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ.
ತುರುವೇಕೆರೆ: ಪಟ್ಟಣದ ಬಾಣಸಂದ್ರ ರಸ್ತೆಯಲ್ಲಿರುವ ಶ್ರೀ ಗುರು ಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ, ಇಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್ ವತಿಯಿಂದ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ, ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ತಾಲೂಕು ದಂಡಾಧಿಕಾರಿ ವೈ ಎಂ ರೇಣು ಕುಮಾರ್, ಜ್ಯೋತಿ ಬೆಳಗುವುದರ ಮೂಲಕ ಚಾಲನೆ ನೀಡಿದರು.

ಇದೇ ವೇಳೆ ಮಾತನಾಡಿದ ತಾಲೂಕು ದಂಡಾಧಿಕಾರಿ ಈ ಸಮಾಜಕ್ಕೆ ಮಹಿಳೆಯರು ಹೆಚ್ಚಿನ ಶಕ್ತಿಯಾಗಿ ಹೊರ ಹೊಮ್ಮಿದ್ದೀರಾ, ಇದಕ್ಕೆ ಕಾರಣ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಎಂದರೆ ತಪ್ಪಾಗಲಾರದು.
ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಶಿಸ್ತು ಬದ್ಧವಾಗಿ ಕುಳಿತು ಸಾವಧಾನದಿಂದ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಿರುವುದು ನೋಡಿದರೆ ಈ ಸಮಾಜಕ್ಕೆ ಮಹಿಳೆಯರ ಅಗತ್ಯ ಬಹು ಮುಖ್ಯ ಎಂದರು, ಈ ರೀತಿ ಮಹಿಳೆಯರನ್ನು ಒಗ್ಗೂಡಿಸಿ ಕರೆತರುವ ಪ್ರಯತ್ನ ಮಾಡಿರುವುದು ಈ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಗಿದೆ.

ಇನ್ನು ಬಹಳ ಮುಖ್ಯವಾದ ವಿಷಯ ಅಂದರೆ ಈ ಟ್ರಸ್ಟ್ ವತಿಯಿಂದ “ಬಲಿಯಾಗದಿರುವ ಮನವೇ ಮೊಬೈಲ್ ಎಂಬ ಮಾಯೆಗೆ” ಎಂಬ ವಿಷಯವನ್ನು ಚರ್ಚಿಸಿ ಅದರ ಬಗ್ಗೆ ಮಾಹಿತಿ ನೀಡುವ, ಈ ಕಾರ್ಯಕ್ರಮವಂತು ಬಹಳ ಅದ್ಭುತ ಎಂದು ಅವರ ಮಾತಿಗೆ ನಾಂದಿ ಹಾಡಿದರು.

ಇನ್ನು ಈ ಕಾರ್ಯಕ್ರಮದಲ್ಲಿ ಶ್ರೀಮತಿ ರೂಪಶ್ರೀ ಉಪನ್ಯಾಸಕರು, ಪ್ರೊಫೆಸರ್ ಬಸವರಾಜ್ ಜಿ ಉಪನ್ಯಾಸಕರು ರಾಜ್ಯಶಾಸ್ತ್ರ ವಿಭಾಗ ತುಮಕೂರು, ಶ್ರೀಮತಿ ದಯಾಶೀಲ ಜಿಲ್ಲಾ ನಿರ್ದೇಶಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಶ್ರೀಮತಿ ಶರೀತ ದೇವರ ಮನೆ ಪ್ರಾಂಶುಪಾಲರು ಗ್ಲೋಬಲ್ ಎಂಬೆಸಿ ಸ್ಕೂಲ್, ಶ್ರೀಮತಿ ಸಂಧ್ಯಾ ಶೆಟ್ಟಿ ಪ್ರಾದೇಶಿಕ ಯೋಜನಾಧಿಕಾರಿ, ಶ್ರೀಮತಿ ಅನಿತಾ ಶೆಟ್ಟಿ ಕ್ಷೇತ್ರ ಯೋಜನೆ ಅಧಿಕಾರಿ, ಯಶೋಧರ್, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಲಾವಣ್ಯ, ಹಾಗೂ ಎಲ್ಲಾ ಮೇಲ್ವಿಚಾರಕ ಶ್ರೇಣಿಯ ಸಿಬ್ಬಂದಿ ವರ್ಗ ಹಾಗೂ ಸೇವಾ ಪ್ರತಿನಿಧಿಗಳು ಈ ಸಂದರ್ಭದಲ್ಲಿ ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ವರದಿ
ತುರುವೇಕೆರೆ: ಮಂಜುನಾಥ್