Document

Dakshina kannada: ಚುನಾವಣೆ ವೇಳೆ ಕರಾವಳಿಯಲ್ಲಿ ಶಂಕಿತ ನಕ್ಸಲರ ಓಡಾಟ.

Janataa24 NEWS DESK

Dakshina kannada: ಚುನಾವಣೆ ವೇಳೆ ಕರಾವಳಿಯಲ್ಲಿ ಶಂಕಿತ ನಕ್ಸಲರ ಓಡಾಟ.

Dakshina Kannada ANF
ದಕ್ಷಿಣ ಕನ್ನಡ : ಇನ್ನೇನು ಕೆಲವೇ ದಿನಗಳು ಲೋಕಸಭಾ ಚುನಾವಣೆಗೆ ಬಾಕಿ ಉಳಿದಿರುವಾಗ ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ(Karavali) ಭಾಗದಲ್ಲಿ ನಕ್ಸಲರ ಓಡಾಟ ಈ ಭಾಗದ ಜನರನ್ನು ಭೀತಿಗೊಳಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ಕೊಂಬಾರು ಬಳಿಯ ಚೇರು ಎಂಬ ಊರಿಗೆ ಗುರುವಾರ ಸಾಯಂಕಾಲ ಬಂದು
ಮನೆಯ ಬಳಿಗೆ ನಕ್ಸಲರು(Naxalites) ಬೇಟಿ ನೀಡಿ ಸುಮಾರು ಹೊತ್ತು ಸಮಯ ಉಳಿದು ನಂತರ ಮನೆಯೊಳಗೆ ಭೋಜನ ಮಾಡಿರುವ ಮಾಹಿತಿ ಮನೆಯವರಿಂದ ಸಿಕ್ಕಿದೆ.

 

ಚುನಾವಣೆ ವೇಳೆಯಲ್ಲಿ ಇಂತಹ ಶಂಕಿತ ಉಗ್ರರು ಪತ್ತೆಯಾಗಿರುವುದು ಹಲವಾರು ಕಾರಣಗಳಿಗೆ ಎಡೆಮಾಡಿಕೊಟ್ಟಿದೆ. ಈ ಶಂಕಿತ ನಕ್ಸಲರ ತಂಡದಲ್ಲಿ ಮೋಸ್ಟ್ ವಾಂಟೆಡ್ ವಿಕ್ರಂಗೌಡ , ಲತಾ ಇದ್ದರು ಎಂಬ ಸಂಶಯ ಮೂಡಿ ಬಂದಿದೆ.

ಈ ವಿಷಯ ತಲುಪುತ್ತಿದ್ದಂತೆ ನಕ್ಸಲರು ತಲುಪಿದ್ದ ಗ್ರಾಮದ ಮನೆ ಬಳಿ ನಕ್ಸಲ್ ನಿಗ್ರಹ ಪಡೆ (ANF) ಸಿಬ್ಬಂದಿ ಖುದ್ದು ಆಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ.

ಕಳೆದ ಗುರುವಾರ ಒಟ್ಟು ಆರು ಜನ ಗುಂಪು ಶಸ್ತ್ರಾಸ್ತ್ರಗಳೊಡನೆ ರಾತ್ರಿ 7 ಗಂಟೆಗೆ ಬಂದ ಸುಮಾರು 9 ಗಂಟೆವರೆಗೆ ನಕ್ಸಲರು ಚೆರು ಗ್ರಾಮದ ಮನೆಯಲ್ಲಿ ಉಳಿದುಕೊಂಡಿದ್ದಾರೆ. ನಂತರ ಅದೇ ಊರಿನ ಪಕ್ಕದಲ್ಲಿ ಇದ್ದ ಕಾಡಿನ ಪ್ರದೇಶಕ್ಕೆ ಹೋಗಿದ್ದಾರೆ ಎಂದು ನಿಗಾವಹಿಸಿ ಹೇಳಲಾಗಿದೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ

https://chat.whatsapp.com/Jf6jZ0gyQAEA5GBRpHnkrv

Subscribe YouTube

https://youtube.com/@janataa24?si=XsFcych2GMH0O6Gv

Tejasvi Surya: ಲಕ್ಷದಿಂದ ಕೋಟಿಗೆ ಜಿಗಿದ ತೇಜಸ್ವಿ ಸೂರ್ಯ ಆಸ್ತಿ.

 

Document

Leave a Reply

Your email address will not be published. Required fields are marked *