Document

CN HALLI: ಧರ್ಮದ ಹೆಸರಿನಲ್ಲಿ ಶೋಷಣೆ, ಮರೆಯಾಗಿರುವುದು ಅನಿಷ್ಟ ಪದ್ಧತಿಗಳಲ್ಲ. ಮನುಷ್ಯನ ಮನುಷ್ಯತ್ವ.

Janataa24 NEWS DESK 

 

 

CN Halli: ನಮ್ಮ ಬದುಕು ಯಾರು ಕೇಳುವರಿಲ್ಲ…? ದೇವದಾಸಿ ತಾಯಂದಿರ ಕಣ್ಣೀರಿನ ಕಥೆ.

CN HALLI: ಧರ್ಮದ ಹೆಸರಿನಲ್ಲಿ ಶೋಷಣೆ, ಮರೆಯಾಗಿರುವುದು ಅನಿಷ್ಟ ಪದ್ಧತಿಗಳಲ್ಲ. ಮನುಷ್ಯನ ಮನುಷ್ಯತ್ವ.

 

ಚಿಕ್ಕನಾಯಕನಹಳ್ಳಿ: ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕು ಸೇರಿದಂತೆ ಹಲವಾರು ಹೋಬಳಿ ಮತ್ತು ಗ್ರಾಮಗಳಲ್ಲಿ ಇಂದಿಗೂ ದೇವದಾಸಿ ಪದ್ಧತಿ ಜೀವಂತವಾಗಿರುವುದು ಆಡಳಿತದ ವೈಫಲ್ಯ ಮತ್ತು ಅಮಾನವೀಯತೆಯ ಸ್ಥಿತಿಯನ್ನು ಬಿಂಬಿಸುತ್ತದೆ.

 

ಇದೊಂದು ದಾರುಣ ಸಂಗತಿ – ಮಕ್ಕಳಾಗಿದ್ದಾಗಲೇ ದೇವದಾಸಿ ಪದ್ಧತಿಗೆ ಒಳಪಟ್ಟ ಮಹಿಳೆಯರು ಇಂದು ತಮ್ಮ ಬದುಕಿನ ಕೊನೆಯ ಹಂತದಲ್ಲಿದ್ದರೂ ಸಹ, ಸರಕಾರದ ಸೌಲಭ್ಯಗಳಿಂದ, ಮೌಲಿಕ ಹಕ್ಕುಗಳಿಂದ ಹಾಗೂ ಸಮಾಜದ ಗೌರವದಿಂದ ವಂಚಿತರಾಗಿದ್ದಾರೆ.

 

ಧರ್ಮದ ಹೆಸರಿನಲ್ಲಿ ಶೋಷಣೆ, ದೇವರ ಹೆಸರಿನಲ್ಲಿ ದೌರ್ಜನ್ಯ ಇವು ಇನ್ನಷ್ಟು ದೇವದಾಸಿ ತಾಯಂದಿರ ಬದುಕನ್ನು ಕರಾಳಗೊಳಿಸಿವೆ. ಇಂತಹ ನೂರಾರು ಕುಟುಂಬಗಳು ಪಟ್ಟಣಗಳಲ್ಲಿ, ಹಳ್ಳಿಗಳ ಅಂಚಿನಲ್ಲಿ ಬದುಕಿನ ಸಂಗ್ರಾಮದಲ್ಲಿ ನವಿರಾಗಿ ನಲಿದಾಡುತ್ತಿವೆ. ಆದರೆ, ಈವರೆಗೆ ಸ್ಥಳೀಯ ಆಡಳಿತ, ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ ಮತ್ತು ಮಹಿಳಾ ಆಯೋಗ ಅವರ ನೋವಿಗೆ ಸ್ಪಂದಿಸಿಲ್ಲ.

 

ಅಧಿಕಾರಿಗಳ ನಿರ್ಲಕ್ಷ್ಯ, ಆಡಳಿತದ ಅಜಾಗರೂಕತೆ ದೇವದಾಸಿ ತಾಯಂದಿರ ಬದುಕನ್ನು ಇನ್ನಷ್ಟು ಕಷ್ಟಕ್ಕೆ ದೂಡಿದೆ.

 

ಸರ್ಕಾರ ದೇವದಾಸಿ ನಿರ್ಮೂಲನೆ ಕುರಿತು ಘೋಷಣೆಗಳನ್ನು ನೀಡಿದೆ , ಆದರೆ ಅದು ಶಾಸನದಲ್ಲಿ ಮಾತ್ರ ಇದ್ದು, ಹಳ್ಳಿಗಳ ಹತ್ತಿರದ ಸತ್ಯ ಇನ್ನೂ ಭೀಕರವಾಗಿದೆ. ಈ ತಾಯಂದಿರ ಬದುಕು ಮಾನವೀಯತೆಗಾಗಿ ಅಳುತ್ತಿದ್ದು, ಸರ್ಕಾರದ ಎಲ್ಲ ಸೌಲಭ್ಯಗಳು ಅವರಿಗೆ ತಲುಪುವಂತಾಗಬೇಕು.

 

ಇದರ ಬಗ್ಗೆ ಮಾತಂಗ ಮುನಿ ಪರಿವಾರ ಸೇವಾ ಟ್ರಸ್ಟ್ (ರಿ), ನಿರಂತರ ಬಡವರ ಪರ ಕೆಲಸ ಮಾಡುತ್ತಿದ್ದು,ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಅನಾಭಿವೃದ್ಧಿ ಮತ್ತು ಬಡತನದ ಅಸಲೀಯತ್ತು, ಮತ್ತು ಸಮಾಜದ ಕರಳಾತೆಯನ್ನು ಬಿಚ್ಚಿಡುತ್ತಿದೆ.

 

CN HALLI: ಧರ್ಮದ ಹೆಸರಿನಲ್ಲಿ ಶೋಷಣೆ, ಮರೆಯಾಗಿರುವುದು ಅನಿಷ್ಟ ಪದ್ಧತಿಗಳಲ್ಲ. ಮನುಷ್ಯನ ಮನುಷ್ಯತ್ವ.

ಇಂತಾ ಅನಿಷ್ಠ ಪದ್ಧತಿ — ದೇವದಾಸಿ ಪದ್ಧತಿ — ನಮ್ ತಾಲ್ಲೂಕಿನಲ್ಲಿ ಇಂದಿಗೂ ಜೀವಂತವಾಗಿ ಅಸ್ತಿತ್ವದಲ್ಲಿದೆ ಎಂಬುದನ್ನು ನಾನೀಗತಾನೇ ತೀವ್ರವಾಗಿ ಅರಿತುಕೊಂಡೆ. ಈ ಪದ್ಧತಿ ಉತ್ತರ ಕರ್ನಾಟಕದ ಕೆಲವು ಭಾಗಗಳಿಗೆ ಮಾತ್ರ ಸೀಮಿತವಾಗಿದೆ ಎಂಬ ಯೋಚನೆಯಲ್ಲಿದ್ದ ನಾನು, ಇತ್ತೀಚೆಗೆ ಸಮಾನಮನಸ್ಕ ಗೆಳೆಯರೊಂದಿಗೆ ಗಣಿಭಾಧಿತ ಹಳ್ಳಿಗಳಲ್ಲಿ ಜನರ ಬದುಕು ಅರಿಯಲು ಹೋದಾಗ ಕಂಡುಬಂದ ಕಟು ವಾಸ್ತವವು ನನ್ನ ಮನಸ್ಸನ್ನು ತಿಳಿಗೊಳಿಸಿದರು, ಕಣ್ಣು ಕಟು ಸತ್ಯವ ಕಂಡು ಸುಮ್ಮನಾಗಲಿಲ್ಲ.

 

ದೇವದಾಸಿ ತಾಯಂದಿರ ಸ್ಥಿತಿಗತಿಗಳನ್ನು ಕಣ್ಣಾರೆ ಕಂಡು, ನನಗೆ ನಿಜಕ್ಕೂ ಒಂದು ರೀತಿಯ ಜಿಗುಪ್ಸೆ ಮತ್ತು ಅಸಹ್ಯವೂ ಉಂಟಾಯಿತು. ನಾವೆಲ್ಲಾ ನಾಗರಿಕರಾಗಿದ್ದರೂ, ಇನ್ನೂ ಮಹಿಳೆಯರ ಮಾನವೀಯ ಹಕ್ಕುಗಳು ಈ ಮಟ್ಟಕ್ಕೆ ಹಿಂಜರಿದ ಸ್ಥಿತಿಯಲ್ಲಿರುವುದನ್ನು ಮನುಷ್ಯತ್ವಕ್ಕೆ ಅವಮಾನವೇನೋ ಎನ್ನಿಸಿತು.

 

ಇಲ್ಲಿ ಆಡಳಿತವಿರುವವರೂ, ರಾಜಕಾರಣದವರು ಕೂಡ ತಮ್ಮ ಲಾಭ, ಸ್ಥಾನ, ಮತ ಮತ್ತು ಪ್ರಭಾವಕ್ಕಾಗಿ ಇಂತಹ ಅನಿಷ್ಠ ಪದ್ಧತಿಗಳನ್ನು ನಿಕೃಷ್ಟವಾಗಿ ಬಳಸಿಕೊಳ್ಳು ತ್ತಿದ್ದಾರೆ ಎಂಬುದು ವಿಷಾದಕರ.

 

ಅಕ್ಷರ ಕಲಿತ ವಿದ್ಯಾವಂತರೆಂದು ಹೆಮ್ಮೆಪಡುವ ನಾವೂ, ಬದುಕಿನ ಜಂಜಾಟದಲ್ಲಿ ನಿಜವಾದ ಮೌಲ್ಯಗಳನ್ನೆಲ್ಲಾ ಕಟ್ಟಿ ಹಾಕಿ, ನಮ್ಮ ಸಂತೋಷದ ಗೂಟಕ್ಕೆ ನೇತಾಕೀರುವಂತಾಗಿದೆ. ಇದು ನಮ್ಮೊಳಗಿನ ಮಾನವೀಯತೆಯ ಹೀನಾಯ ಸಂಕೇತವಲ್ಲವೆ? ಎಂದು ಹೇಳಿದರು

– ಮಲ್ಲಿಕಾqರ್ಜುನ ಭಟ್ಟರಹಳ್ಳಿ

 

ಚಿಕ್ಕನಾಯಕನಹಳ್ಳಿ ಮಾತಂಗ ಮುನಿ ಪರಿವಾರ ಸೇವಾ ಟ್ರಸ್ಟ್ (ರಿ) ವತಿಯಿಂದ ಕಾರ್ಯದರ್ಶಿ ಶ್ರೀ ಚಿದಾನಂದ ಮೂರ್ತಿ ಹಾಗೂ ಸದಸ್ಯ ಗುರುಮೂರ್ತಿ ಅವರು ಜಿಲ್ಲಾಧಿಕಾರಿಗಳಿಗೆ ಮನವಿಮಾಡಿಕೊಳ್ಳುತ್ತಿದ್ದಾರೆ, ತಕ್ಷಣ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

 

1. ದೇವದಾಸಿ ತಾಯಂದಿರ ಪೋಷಣೆಗೆ ನಿರಂತರ ಮಾಸಿಕ ಭತ್ಯೆ.

ಜಿಲ್ಲಾಧಿಕಾರಿಗಳು ಮತ್ತು ಮಹಿಳಾ ಆಯೋಗ ಈ ಕುಟುಂಬಕ್ಕೆ ಬೇಟಿ ಕೊಟ್ಟುಸಾoತ್ವಾಐನ ಹೇಳುವ ಕೆಲಸ ಮಾಡಬೇಕು.

 

2. ದೇವದಾಸಿ ಮಹಿಳಾ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ಮತ್ತು ಸರ್ಕಾರಿ ಉದ್ಯೋಗ ನೀಡಬೇಕು.

 

3. ದೇವದಾಸಿ ಕುಟುಂಬಗಳ ಪುನರ್ವಸತಿ ಹಾಗೂ ಮನೆ ನಿರ್ಮಾಣ ಯೋಜನೆ.

 

4. ಮಹಿಳಾ ಆಯೋಗದ ಮತ್ತು ಜಿಲ್ಲಾಡಳಿತ ಮುಖಾಂತರ ಪ್ರತ್ಯೇಕ ಅಧ್ಯಯನ ಸಮಿತಿ ರಚನೆ.

5. ದೇವದಾಸಿ ಪದ್ಧತಿ ಉಳಿದಿರುವ ಗ್ರಾಮಗಳಲ್ಲಿ ಸಮಗ್ರ ಸಮೀಕ್ಷೆ.

 

 

 

ಇದು ಕೇವಲ ಕೆಲವು ಕುಟುಂಬಗಳ ಕಥೆ ಅಲ್ಲ – ಇದು ನೂರಾರು ದೇವದಾಸಿ ತಾಯಂದಿರ ಸಂಕಷ್ಟದ ಪ್ರತೀಕ.

ಅವರ ಕಣ್ಣೀರಿಗೆ ನ್ಯಾಯ ಬೇಕು , ಶೋಷಣೆಗೆ ಪರಿಹಾರ ಬೇಕು ಮತ್ತು ಬದುಕಿಗೆ ಮಾನವೀಯ ಗೌರವ ಬೇಕು ಎನ್ನುವುದು ಮಾತಂಗ ಮುನಿ ಪರಿವಾರ ಸೇವಾ ಟ್ರಸ್ಟ್ (ರಿ). ಚಿಕ್ಕನಾಯಕನಹಳ್ಳಿಯಲ್ಲಿ ಒತ್ತಾಯ.

 

 

ವರದಿ: ದೇವರಾಜ್ ಚಿಕ್ಕನಾಯಕನಹಳ್ಳಿ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *