Janataa24 NEWS DESK
CISF: ಲೋಕಸಭಾ ಚುನಾವಣೆ ಹಿನ್ನೆಲೆ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಪೋರ್ಸ್ ನಿಂದ ಪಥಸಂಚಲನ

ತುರುವೇಕೆರೆ : ದೇಶದ ಎಲ್ಲೆಡೆ ನೀತಿ ಸಂಹಿತೆ ಜಾರಿಗೆಯಾಗಿದೆ.ಎರಡು ಹಂತದಲ್ಲಿ ನಮ್ಮ ಕರ್ನಾಟಕ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ. ಯಾವುದೇ ನಿರ್ಲಕ್ಷ್ಯ ವಹಿಸದೇ ಪೋಲಿಸ್ ಇಲಾಖೆ ಕಟ್ಟೆಚ್ಚರದಿಂದ ಕರ್ತವ್ಯ ನಿರ್ವಹಿಸಿತ್ತಿದೆ. ಸಮಾಜದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲಾ ಕಡೆಯೂ ಪೋಲಿಸ್ ಬಿಗಿ ಭದ್ರತೆ ಮಾಡಲಾಗಿದೆ. ಪೋಲಿಸ್ ಪೇದೆಗಳು ಚೆಕ್ ಪೋಸ್ಟ್ ನಲ್ಲಿ ಪ್ರತಿ ವಾಹನವನ್ನು ತಪಾಸಣೆ ಮಾಡಿತ್ತಿದ್ದಾರೆ ಎಲ್ಲೆಡೆ ಸಿಸಿ ಕ್ಯಾಮರಾದಂತೆ ಕಣ್ಣಾಯಿಸುತ್ತಿದ್ದಾರೆ.
ಲೋಕಸಭಾ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿದ್ದು, ಇಂದು ಮಾಯಸಂದ್ರ ಗ್ರಾಮ ಮತ್ತು ಟಿ ಬಿ ಕ್ರಾಸ್ ಗ್ರಾಮದಲ್ಲಿ ಇಂದು ಸುಮಾರು ನೂರಕ್ಕೂ ಹೆಚ್ಚು ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ನಡೆಸಿತು.
ಇನ್ನು ಈ ಪಥಸಂಚಲನ ತುರುವೇಕೆರೆ ಸಿಪಿಐ ಲೋಹಿತ್ ಅವರ ನೇತೃತ್ವದಲ್ಲಿ ನಡೆಯಿತು ಈ ಪಥ ಸಂಚಲನದಲ್ಲಿ ತುರುವೇಕೆರೆ ಪೊಲೀಸ್(Turuvekere Police) ಸಬ್ ಇನ್ಸ್ಪೆಕ್ಟರ್ ಸಂಗಮೇಶ್ ಮೇಟಿ, ಮಾಯಸಂದ್ರ ಔಟ್ ಪೋಸ್ಟ್ ದಫೇದಾರ ಧನಂಜಯ್, ಹಾಗೂ ತಾಲೂಕಿನ ಆರಕ್ಷಕ ಠಾಣೆಯ ಸಿಬ್ಬಂದಿಗಳು ಈ ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು.
ಮಾಯಸಂದ್ರ ಗ್ರಾಮದಲ್ಲಿ ಪ್ರಾರಂಭವಾದ ಈ ಪಥಸಂಚಲನ ಗ್ರಾಮದ ಮುಖ್ಯ ಬೀದಿಗಳಲ್ಲಿ ಸಂಚರಿಸಿ ನಂತರ ಟಿ ಬಿ ಕ್ರಾಸ್ ಗ್ರಾಮದಲ್ಲೂ ಸಹ ಇದೇ ರೀತಿ ಪ್ರಮುಖ ಮುಖ್ಯ ರಸ್ತೆಯಲ್ಲಿ ಪಥ ಸಂಚಲನ ನಡೆಸಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲರೂ ಕೂಡ ನಿರ್ಭೀತಿಯಿಂದ ಮತವನ್ನು ಚಲಾಯಿಸುವ ಕುರಿತು ಜಾಗೃತಿ ಮೂಡಿಸಲಾಯಿತು.
ವರದಿ: ಮಂಜುನಾಥ ತುರುವೇಕೆರೆ
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ
https://chat.whatsapp.com/Jf6jZ0gyQAEA5GBRpHnkrv
Subscribe YouTube
https://youtube.com/@janataa24?si=XsFcych2GMH0O6Gv
Ballari : ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಫಿಕ್ಸ್, ಅಧಿಕೃತ ಘೋಷಣೆಯೊಂದೆ ಬಾಕಿ.