Janataa24 NEWS DESK

ತುರುವೇಕೆರೆ: ತಾಲೂಕಿನ ಮಾದಪಟ್ಟದಲ್ಲಿ ಸೋಮವಾರ ಆಕಸ್ಮಿಕ ಬೆಂಕಿ ತಗುಲಿ ಇಂದ್ರಮ್ಮ ಎಂಬುವರ ವಾಸದ ಮನೆ ಸಂಪೂರ್ಣ ಸುಟ್ಟು ಕರಕಲಾಗಿ ಲಕ್ಷಾಂತರ ರೂ ಪ್ರಮಾಣದ ನಷ್ಟ ಸಂಭವಿಸಿದೆ.
ಬಡ ಕುಟುಂಬವಾಗಿರುವ ಇಂದ್ರಮ ಮತ್ತು ಮಗ ಇಬ್ಬರೇ ವಾಸವಾಗಿದ್ದು. ಸೋಮವಾರ ಬೆಳಿಗ್ಗೆ ಮಗನು ಕೆಲಸಕ್ಕೆ ತೆರಳಿದ್ದು.ಇಂದ್ರಮ ತೋಟದ ಕೆಲಸಕ್ಕೆ ತೆರಳಿದ್ದಾರೆ.

ಮಧ್ಯಾಹ್ನ ಆಕಸ್ಮಿಕವಾಗಿ ಬೆಂಕಿ ತಗುಲಿ ದಟ್ಟವಾದ ಹೋಗೆ ಆವರಿಸಿದೆ. ಮನೆ ಹೊತ್ತಿಕೊಂಡಿದ್ದನ್ನು ಗಮನಿಸಿದ ಅಕ್ಕ ಪಕ್ಕದ ಮನೆಯವರು ಹಾಗೂ ಗ್ರಾಮಸ್ಥರು ನೀರು ಹಾಕಿ ಬೆಂಕಿ ನಂದಿಸುವ ಕಾರ್ಯ ಕೈಗೊಂಡರೂ ಬೆಂಕಿಯ ಜ್ವಾಲೆ ಹೆಚ್ಚಾಗಿದ್ದರಿಂದ ಬೆಂಕಿ ನಂದಿಸಲು ಹರಸಾಹಸ ಪಡುವಂತಾಗಿತ್ತು.
ಗ್ರಾಮಸ್ಥರು ಹಾಗೂ ಅಗ್ನಿ ಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೆಂಕಿಯ ಕೆನ್ನಾಲಿಗೆಗೆ ಮನೆಯ ಅಟ್ಟದಲ್ಲಿದ್ದ ನಾಲ್ಕು ಸಾವಿರ ಕೊಬ್ಬರಿ, ಟಿವಿ, ಬಟ್ಟೆಬರೆ, ದಿನಸಿ ಸೇರಿ ಅಗತ್ಯ ವಸ್ತುಗಳು ಸುಟ್ಟು ಕರಕಲಾಗಿದ್ದು ಲಕ್ಷಾಂತರ ರೂಗಳ ನಷ್ಟವಾಗಿ ಇಂದ್ರಮ್ಮನ ಕುಟುಂಬ ಬೀದಿಗೆ ಬಿದ್ದಂತಾಗಿದೆ.

ಈ ಕುಟುಂಬ ಬಡಕುಟುಂಬವಾಗಿದ್ದು ತಾಲ್ಲೂಕು ಆಡಳಿತ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ವರದಿ
ತುರುವೇಕೆರೆ: ಮಂಜುನಾಥ್