Janataa24 NEWS DESK

ಪಾವಗಡ: 500 ವರ್ಷದ ಇತಿಹಾಸವುಳ್ಳ ಸುಬ್ರಹ್ಮಣ್ಯ ದೇವಸ್ಥಾನದ ಜಾತ್ರಾ ಮಹೋತ್ಸವಕ್ಕೆ ಜನಸಾಗರವೇ ಹರಿದು ಬಂದಿತ್ತು.

ರಾಜ್ಯದ ಮೂಲೆ ಮೂಲೆಗಳಿಂದ ಭಕ್ತಾದಿಗಳು ಬಂದು ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.

ತಾಲೂಕಿನ ಐತಿಹಾಸಿಕ ನಾಗಲ ಮಡಿಕೆ ಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಜಾತ್ರೆ ಅದ್ದೂರಿಯಾಗಿ ನಡೆಯಿತು.
ಕಳೆದ ಐದಾರು ವರ್ಷಗಳಿಂದ ಕೋವಿಡಿ ಹಿನ್ನೆಲೆಯಲ್ಲಿ ಇಷ್ಟೊಂದು ಸಹಸ್ರಾರು ಸಂಖ್ಯೆಯಲ್ಲಿ ಜನರು ಸೇರದ್ದರು. ನಾಗಲಮಡಿಕೆ ಜಾತ್ರೆ ನಡೆದಿತ್ತು ಆದರೆ ಈ ಬಾರಿಯ ಜಾತ್ರೆಗೆ ಲಕ್ಷಾಂತರ ಜನ ಭಾಗವಹಿಸಿದ್ದು ವಿಶೇಷವಾಗಿದ.
12.20ಕ್ಕೆ ಸರಿಯಾಗಿ ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡಿದ ಸ್ಥಳೀಯ ಶಾಸಕ ಎಚ್.ವಿ ವೆಂಕಟೇಶ್ ಹಾಗೂ ತಹಸಿಲ್ದಾರ್ ಅವರದ್ ರಾಜ್ ರಥೋತ್ಸವಕ್ಕೆ ಚಾಲನೆ ನೀಡಿದ ನಂತರ ಭಕ್ತಾದಿಗಳು ರಥೋತ್ಸವಕ್ಕೆ ಹಣ್ಣು ಹೂ ಎಸೆಯುವ ಮೂಲಕ ತಮ್ಮ ಹರಕೆ ತೀರಿಸಿಕೊಂಡರು.

ಶಾಸಕ ಎಚ್‌ವಿ ವೆಂಕಟೇಶ್ ಮಾತನಾಡಿ ಇಷ್ಟೊಂದು ಜನರೇ ನೋಡಿ ಬಹಳ ಸಂತೋಷವಾಯಿತು ಇತಿಹಾಸವುಳ್ಳ ಈ ದೇವಸ್ಥಾನ ಅಭಿವೃದ್ಧಿಗೊಳ್ಳಲು ಇಲ್ಲಿನ ದೇವಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಂದ ಅಭಿವೃದ್ಧಿಗೊಳ್ಳಲು ವಿಫಲಗೊಂಡಿದೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಮೂಲಕ ತಿಳಿಸಿದ್ದೇನೆ. ಮುಂದಿನದಿನಗಳಲ್ಲಿ ಸರಿಪಡಿಸಿಕೊಂಡು ಹೋಗಿದ್ದಲ್ಲಿ ಅವರ ಮೇಲೆ ಕ್ರಮ ಕೈಗೊಳ್ಳು ಸೂಚಿಸಿದ್ದೇನೆ.

ಮುಂದಿನ ದಿನಗಳಲ್ಲಿ ದೇವಸ್ಥಾನ ಅಭಿವೃದ್ಧಿಗೊಳ್ಳಲು ಈಗಾಗಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಹಾಗೂ ಮುಜರಾಯಿ ಇಲಾಖೆ ಸಚಿವರಿಗೆ ಗಮನಕ್ಕೆ ತಂದಿದ್ದೇನೆ ಇನ್ನು ಕೆಲವೇ ದಿನಗಳಲ್ಲಿ ಮುಜರಾಯಿ ಸಚಿವರ ಬಳಿ ಮಾತನಾಡಿ ಮುಂದಿನ ವರ್ಷ ದೇವಾಲಯ ಅಭಿವೃದ್ಧಿ ಗೊಳಿಸಲು ಮುಂದಾಗುತ್ತೇನೆ ಎಂದರು.ಜಾತ್ರೆಯಲ್ಲಿ ಎಲ್ಲಿ ನೋಡಿದರೂ ಜನ ಜಂಗುಳಿ.

ಎಲ್ಲಿ ನೋಡಿದರು ಅಂಗಡಿ ಮಳಿಗೆಗಳ ಬಳಿ ಹೆಣ್ಣು ಮಕ್ಕಳು ಹೊಸ ಹೊಸ ಉಡುಪುಗಳನ್ನು ಧರಿಸಿ ಕುಟುಂಬದ ಜತೆ ಸಂತೋಷ ದಿಂದ ಕಾಲ ಕರೆಯುತ್ತಿದ್ದುದು ಕಂಡು ಬಂತು.ಖಾಸಗಿ ಹಾಗೂ ಸಾರಿಗೆ ಬಸ್ಸುಗಳ ಟಾಪ್ ಗಳ ಮೇಲೆ ಜನರು ಕುಳಿತು ಜಾತ್ರೆಗೆ ಬಂದಿದ್ದು ಕಂಡು ಬಂತು.ಹರಿಕೆ ಹೊತ್ತ ಭಕ್ತರಿಂದ ಅನ್ನ ಪ್ರಸಾದ್ ವಿನಿಮಯ ಮಾಡಲಾಗಿತ್ತು.
ವರದಿ: ಇಮ್ರಾನ್ ಉಲ್ಲಾ.ಪಾವಗಡ