Document

ಸಿಸಿ ರಸ್ತೆಗೆ ಅಡ್ಡಲಾಗಿ ನಿರ್ಮಿಸಿರುವ ಶೆಡ್ ಗಳ ತೆರವಿಗೆ ಒತ್ತಾಯಿಸಿ ತಾಲೂಕು ಕಾರ್ಯನಿರ್ವಹಣಾಧಿಕಾರಿಗೆ ಮನವಿ.

ತುರುವೇಕೆರೆ ತಾಲೂಕು.ಮಾಯಸಂದ್ರ ಹೋಬಳಿ .ವಡವನಘಟ್ಟ.ಪಂಚಾಯಿತಿಗೆ ಸೇರಿದ.ಮಲ್ಲದೇವನಹಳ್ಳಿ ಗ್ರಾಮಕ್ಕೆ .ಶಾಸಕರ ಅನುದಾನದಲ್ಲಿ .ಸಿಸಿ ರಸ್ತೆ ಮಂಜೂರು ಆಗಿದ್ದು.ಗುತ್ತಿಗೆದಾರರು ಕೆಲಸ ಮಾಡಲು ಬಂದಾಗ .ಸಿಸಿ ರಸ್ತೆ ಕಾಮಗಾರಿ ಮಾಡುವ ರಸ್ತೆಗೆ ಅಡ್ಡಲಾಗಿ ಅಕ್ರಮವಾಗಿ ಕೆಲವು ಬಲಾಡ್ಯರು ಕಾಯಿ ಶೆಡ್ ಗಳನ್ನು ನಿರ್ಮಿಸಿರುತ್ತಾರೆ .ಮತ್ತು ವ್ಯವಸ್ಥಿತವಾಗಿ ಸಿಸಿ ರಸ್ತೆಯನ್ನ ನಿರ್ಮಿಸಲು ಅಡ್ಡಿಯಾಗಿರುತ್ತದೆ.ಈ ಸಂಬಂಧ .ಗ್ರಾಮದ ಪಂಚಾಯಿತಿದಾರರು ಸೇರಿ.ಅಕ್ರಮವಾಗಿ ಶೇಡ್ ನಿರ್ಮಿಸಿರುವ ಮನೆಯ ಮಾಲೀಕರುಗಳನ್ನು ಕರೆಯಿಸಿ ಮಾತನಾಡಿದಾಗ.ಅಕ್ರಮವಾಗಿ ನಿರ್ಮಿಸಿರುವವರು ಒಪ್ಪಿಕೊಂಡು.ತೆರವುಗೊಳಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.ತದನಂತರ 15 ದಿನಗಳು ಕಳೆದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ.ಈ ಸಂಬಂಧ ವಡವನಗಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು.ಸಂಬಂಧಪಟ್ಟ ಮನೆಗಳ ಮಾಲೀಕರಿಗೆ ನೋಟಿಸ್ ನೀಡಿದ್ದು.ಅಕ್ರಮವಾಗಿ ನಿರ್ಮಿಸಿರುವವರು ನೋಟಿಸ್ ಗೂ ಜಗ್ಗದೆ .ಮನ್ನಣೆಯನ್ನು ನೀಡದೆ.ದರ್ಪ ತೋರಿರುತ್ತಾರೆ.ಈ ಸಂಬಂಧ.ತುರುವೇಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದು .ಠಾಣೆಯ ಮುಖ್ಯಸ್ಥರಾದ ಕೇಶವಮೂರ್ತಿ ರವರು ಸ್ಥಳಕ್ಕೆ ಭೇಟಿ ನೀಡಿ.ಅಕ್ರಮವಾಗಿ ಶೇಡ್ ನಿರ್ಮಿಸಿರುವವರನ್ನು ಕರೆದು ಸೂಕ್ತ ಕಾನೂನು ನಿರ್ದೇಶನ ಮತ್ತು ಮಾಹಿತಿಯನ್ನು ನೀಡಿದ ನಂತರ .ಅಕ್ರಮವಾಗಿ ಶೆಡ್ಗಳನ್ನು ನಿರ್ಮಿಸಿದವರು ನಾವು ಇದನ್ನ ತೆರವು ಮಾಡುತ್ತೇವೆ ಎಂದು ಒಪ್ಪಿಕೊಂಡಿದ್ದರು .ಮರಳಿ ಠಾಣೆಗೆ ಹೋಗುವಷ್ಟರಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಶಡ್ಡುಗಳನ್ನು.ತೆರವು ಮಾಡಿರುವುದಿಲ್ಲ.ಇದೇ ರಸ್ತೆಯು ಗ್ರಾಮಸ್ಥರುಗಳ ತಮ್ಮ ತಮ್ಮ ಜಮೀನುಗಳಿಗೆ ಜಾನುವಾರುಗಳನ್ನು ಹೊಡೆದುಕೊಂಡು ಹೋಗಬೇಕಾಗುವ ನಕಾಶೆ ರಸ್ತೆಯಾಗಿರುತ್ತದೆ.ಈ ಸಂಬಂಧ ರೋಸಿ ಹೋದ ಗ್ರಾಮಸ್ಥರುಗಳು.ಇಂದು ತುರುವೇಕೆರೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಾದ ಸತೀಶ್ ಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಗ್ರಾಮಸ್ಥರುಗಳಾದ ಲಕ್ಷ್ಮಣ.ತಿಮ್ಮಯ್ಯ.ಶ್ರೀನಿವಾಸ್.ಮಂಜು.ರಾಮಚಂದ್ರ.ಗಿರೀಶ್.ಲೋಕೇಶ್.ತಿಮ್ಮಪ್ಪ.ರಾಮಮೂರ್ತಿ.ರಾಜಣ್ಣ.ವೆಂಕಟರಾಮ್ .ನಾಗರಾಜ್.ಶಾರದಮ್ಮ.ಸಾವಿತ್ರಮ್ಮ.ರಾಧಮ್ಮ.ಹೊನ್ನಮ್ಮ .ಕಲಾವತಿ.ರಾಧಾ.ಹೇಮಲತಾ .ಕಾವ್ಯ .ಸುಂದರಮ್ಮ.ಲಕ್ಷ್ಮಮ್ಮ .ಗಂಗಮ್ಮ.ಪ್ರೇಮ .ಲತಾ.ಮುಂತಾದವರು ಉಪಸ್ಥಿತರಿದ್ದರು.

WhatsApp Image 2022 11 01 at 1.56.56 PM
Document

Leave a Reply

Your email address will not be published. Required fields are marked *