Janataa24 NEWS DESK
ಅಕ್ರಮವಾಗಿ ಲಕ್ಷಾಂತರ ರೂ ಗೆ ಕೆರೆ ಮಣ್ಣು ಸಾಗಾಟ ಕ್ರಮ ಕೈಗೊಳ್ಳುವಂತೆ ಮಾರಶೆಟ್ಟಿ ಹಳ್ಳಿ ಗ್ರಾಮಸ್ಥರ ಆಗ್ರಹ.

ಗುಬ್ಬಿ :ತಾಲೋಕಿನ ಮಾರಶೆಟ್ಟಿ ಹಳ್ಳಿ ಗ್ರಾಮದ ಹೊಸಕೆರೆ ಎಂದು ಪ್ರಸಿದ್ಧಿ ಪಡೆದಿದ್ದ ಕೆರೆಯಲ್ಲಿ ಸರ್ಕಾರದ ಯಾವುದೇ ಊಳೆತ್ತುವ ಆದೇಶವಿಲ್ಲದಿದ್ದರೂ ಕೆಲವರು ತೋಟಕ್ಕೆ ಮಣ್ಣು ಹೊಡೆಯುವ ನೆಪದಲ್ಲಿ ಲಕ್ಷಾಂತರ ರೂ ಮಣ್ಣಿನ ಮಾರಾಟದಲ್ಲಿ ತೊಡಗಿದ್ದಾರೆ ಅವರ ವಿರುದ್ಧ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ರಾಷ್ಟ್ರೀಯ ಮಾನವ ಹಕ್ಕು ಮತ್ತು ಗ್ರಾಹಕರ ಸಂರಕ್ಷಣಾ ವೇದಿಕೆ ಆಯೋಗದ ತಾಲೂಕು ಅಧ್ಯಕ್ಷರಾದ ಮಾರಶೆಟ್ಟಿಹಳ್ಳಿ ಬಸವರಾಜ್ ಮಾತನಾಡಿ ಇದೇ ಗ್ರಾಮದ ಪರಮಶಿವಯ್ಯ ಎಂಬ ವ್ಯಕ್ತಿ ಟ್ರ್ಯಾಕ್ಟರ್ ಮತ್ತು ಜೆಸಿಪಿ ಮೂಲಕ ಸುಮಾರು ದಿನಗಳಿಂದ ತೋಟಕ್ಕೆ ಮಣ್ಣು ಹೊಡೆಯುವ ಕುಂಟು ನೆಪ ಹೇಳಿಕೊಂಡು ಕೆರೆಯ ಏರಿಯ ದಡವನ್ನು ಸಹ ಕಸಿಯುವ ಕೆಲಸವನ್ನು ಮಾಡಿದ್ದಾರೆ.
ಕೆರೆಯ ಏರಿಯ ದಡದ ಮಣ್ಣನ್ನು ತುಂಬಿದರೆ ಸಮಸ್ಯೆಯಾಗುತ್ತದೆ ಎಂದು ತಿಳಿಸಿದರೂ ಸಹ ಯಾರ ಮಾತಿಗೂ ಕಿವಿಗೊಡದೆ ಅಕ್ರಮವನ್ನು ಎಸೆಗಿದ್ದಾರೆ. ಕೆರೆಯ ಒಳಗೆ ಹೆಚ್ಚುವರಿ ವಿದ್ಯುತ್ (ಹೈ ವೋಲ್ಟೇಜ್ ) ಕಂಬವಿದ್ದು ಅದರ ಸುತ್ತಲೂ ಜೆಸಿಬಿಯಿಂದ ಬಗೆದು ಮಣ್ಣು ತುಂಬಿದ್ದಾರೆ. ಹೆಚ್ಚುವರಿ ವಿದ್ಯುತ್ ಕಂಬ ಅಪಾಯದ ಅಂಚಿನಲ್ಲಿದೆ ನೂರಾರು ರೈತರು ಪ್ರತಿನಿತ್ಯ ತಮ್ಮ ತೋಟದ ಕೆಲಸದಲ್ಲಿ ತೊಡಗುತ್ತಾರೆ. ಅಪಾಯದ ಅಂಚಿನಲ್ಲಿರುವ ವಿದ್ಯುತ್ ಕಂಬದಿಂದ ರೈತರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಕೆರೆ ನೀರು ಶೇಖರಣೆಯಿಂದ ಸಾರ್ವಜನಿಕರಿಗೆ ದನ ಕರುಗಳಿಗೆ ಅನುಕೂಲವಾಗುತಿತ್ತು ನೀರು ತುಂಬಿದ ಸಂದರ್ಭದಲ್ಲಿ ಕೆರೆಯ ದಂಡೆ ಒಡೆಯಬಹುದೆಂಬ ಭಯ ಸೃಷ್ಟಿಯಾಗಿದೆ. ಕೂಡಲೇ ಅಧಿಕಾರಿಗಳು ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೆರೆಯ ಪಕ್ಕದಲ್ಲಿ ಅನೇಕ ಮನೆಗಳಿದ್ದು ಮುಂದಾಗುವ ಅನಾಹುತಗಳನ್ನು ತಪ್ಪಿಸಬೇಕು ಎಂದು ಆಗ್ರಹಿಸಿದರು.
ವರದಿ
ಗುಬ್ಬಿ: ಶ್ರೀಕಾಂತ್