Janataa24 NEWS DESK

ನಮ್ಮ ಭಾರತ ಸಂವಿಧಾನ ಉಳಿಯಬೇಕಾದರೆ ಮನುವಾದಿ ಬಿಜೆಪಿ ಪಕ್ಷ ಅಳಿಯಲಿ ಸಂವಿಧಾನ ಉಳಿಯಲಿ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಕುಂದೂರು ತಿಮ್ಮಯ್ಯನವರು ತಿಳಿಸಿದರು.
ಗುಬ್ಬಿ : ಪಟ್ಟಣದ ಎಸ್ ಎಲ್ ವಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮುಂಬರುವ ದಿನಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು ಇದರ ಪೂರಕವಾಗಿ ರಾಜ್ಯದ 28 ಜಿಲ್ಲೆಯ ಜಿಲ್ಲಾ ಸಂಚಾಲಕರು ಹಾಗೂ ರಾಜ್ಯ ಸಂಚಾಲಕರ ನೇತೃತ್ವದಲ್ಲಿ ಒಂದು ಸಭೆ ನಡೆಸಿದ್ದೆವು ಆ ಸಭೆಯಲ್ಲಿ ಎಲ್ಲ ಜಿಲ್ಲಾ ಸಂಚಾಲಕರು ಭಾಗವಹಿಸಿದ್ದೆವು ಆ ಸಭೆಯಲ್ಲಿ ಒಂದು ನಿರ್ಣಯ ತೆಗೆದುಕೊಂಡಿದ್ದೇವೆ. ಪ್ರತಿ ಬಾರಿಯೂ ಚುನಾವಣಾ ಪೂರ್ವಭಾವಿ ಸಭೆ ನಡೆಸಿ ದಲಿತರಿಗೆ ಹೆಚ್ಚು ಮನ್ನಣೆ ನೀಡುವ ಪಕ್ಷಕ್ಕೆ ಬೆಂಬಲ ಸೂಚಿಸುತ್ತಾ ಬಂದಿದ್ದೇವೆ. ಅದೇ ರೀತಿ ಈ ಬಾರಿಯೂ ಕೂಡ ಹರಿಹರದಲ್ಲಿ ಪೂರ್ವಭಾವಿ ಸಭೆ ನಡೆಸಿದ್ದೇವೆ ದಲಿತರು ದಲಿತಪರ ನಿಲ್ಲುವ ಸರ್ಕಾರಕ್ಕೆ ಮತನೀಡಬೇಕು.
ಬಿಜೆಪಿ ಸರ್ಕಾರವು ರಾಜ್ಯದಲ್ಲಿ ಅಶಾಂತಿ ನಿರ್ಮಾಣ ಮಾಡಿದೆ ಮನುಷ್ಯ ಮನುಷ್ಯ ನಡುವೆ ಗೋಡೆ ನಿರ್ಮಾಣ ಮಾಡಿದೆ,
ಜಾತಿ ಜಾತಿಗಳ ನಡುವೆ ಗೋಡೆ ಕಟ್ಟಿದ್ದಾರೆ, ಧರ್ಮ ಧರ್ಮಗಳ ನಡುವೆ ವಿಷ ಬೀಜ ಬಿತ್ತಿದ್ದಾರೆ . ಕೋಮು ದಳ್ಳುರಿಗೆ ನುಕಿದ್ದಾರೆ
ಬಿಜೆಪಿ ಮನುವಾದಿ ಸರ್ಕಾರ ಬಂದ ಮೇಲೆ ದಲಿತರಿಗೆ ಗಂಡಾಂತರಗಳು ಎದ್ದು ಕಾಣುತ್ತಿವೆ.
ನಾವು ದಿನನಿತ್ಯ ಬಳಸುವ ವಸ್ತುಗಳ ದರದ ಬೆಲೆ ನೋಡಬಹುದು ದಲಿತ ವಿದ್ಯಾರ್ಥಿಗಳ ಅನುದಾನಕ್ಕೂ (ಸ್ಕಾಲರ್ಶಿಪ್ )ಗೂ ಕನ್ನಾಅಕಿ ದ್ದಾರೆ.
ಬಿ ಜೆ ಪಿಯ ಮನುವಾದಿ ಸಂಸದರು ಹಾಗೂ ರಾಜ್ಯದ ವಿಧಾನ ಸಭೆ ಸದಸ್ಯರು ನಾವು ಬಂದಿರುವ ಉದ್ದೇಶವೇ ಸಂವಿಧಾನವನ್ನು ಬದಲಾಯಿಸಲು ಎಂದು ನೇರವಾಗಿ ಮಾಧ್ಯಮಗಳಲ್ಲಿ ಬಿತ್ತರಿಸಿದ್ದಾರೆ. ಹಾಗೂ ದೆಹಲಿಯ ಜಂತರ್ ಮಂತರ್ ನಲ್ಲಿ ಮನುವಾದಿಗಳು ಸಂವಿಧಾನವನ್ನು ಸುಟ್ಟು ಹಾಕಿದ್ದಾರೆ ಈ ಕಾರಣದಿಂದಾಗಿ ದಲಿತ ಬಂದುಗಳೇ ನಮ್ಮ ಸಂವಿಧಾನವನ್ನು ರಕ್ಷಣೆ ಮಾಡುವ ಜವಾಬ್ದಾರಿಯು ಎಲ್ಲ ದಲಿತ ಜನಾಂಗದವರ ಆದ್ಯ ಕರ್ತವ್ಯ ವಾಗಿದೆ.

ರಾಜ್ಯದ ಸಾಮರಸ್ಯವನ್ನು ಸಾರ್ವಭೌಮತ್ವವನ್ನು ಉಳಿಸಿಕೊಳ್ಳಬೇಕಾಗಿದೆ ಹಾಗಾಗಿ ಈ ರಾಜ್ಯದಲ್ಲಿ ಕೋಮುವಾದಿ ಪಕ್ಷ ಪುರೋಹಿತಶಾಹಿಪಕ್ಷ
ಮನುವಾದಿ ಪಕ್ಷ
ತೊಲಗಿಸಬೇಕು.
ಸಂವಿಧಾನ ಉಳಿಯಲಿ ಬಿಜೆಪಿ ಅಳಿಯಲಿ ಈ ದಲಿತ ಸಂಘರ್ಷ ಸಮಿತಿ ವಾಕ್ಯವನ್ನು ಪಾಲಿಸಬೇಕಾಗಿದೆ.
ನಮ್ಮ ಭಾರತ ದೇಶ ಉಳಿಯಬೇಕಾದರೆ ಆಯ ತಾಲೂಕಿನಲ್ಲಿ ಬಿಜೆಪಿ ಸೋಲಿಸುವ ಶಕ್ತಿಯು ಯಾವ ಪಕ್ಷಕ್ಕಿದೆಯೋ ಕಾಂಗ್ರೆಸ್ ಆಗಲಿ ಜೆಡಿಎಸ್ ಆಗಲಿ ಅಥವಾ ಯಾವುದೇ ಪಕ್ಷವಾದರೂ ಸರಿ ದಲಿತರು ನಿರ್ಧಾರ ತೆಗೆದುಕೊಂಡು ಮತ ನೀಡಬೇಕು.
ಇಡೀ ರಾಜ್ಯಾದ್ಯಂತ ಬಿಜೆಪಿ ಪಕ್ಷವನ್ನು ದಲಿತರು ಬೇರು ಸಮೇತ ಕಿತ್ತು ಹೊಗೆಯಬೇಕು.
ಜಿಲ್ಲಾ ಸಂಚಾಲಕರಾದ ನಾವು ಇದೇ ರೀತಿ ಎಲ್ಲ ತಾಲೂಕು ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳು ಕಾರ್ಯಕರ್ತರಲ್ಲಿ ಮಾತುಕತೆ ನಡೆಸಿದ್ದೇವೆ.

ದಲಿತ ಸಂಘರ್ಷ ಸಮಿತಿಯ ಸಂಘಟನೆಯ ಮುಖಂಡರು ಅವರ ಹಣ ಅಮಿಷಗಳಿಗೆ ಒಳಗಾಗಿ ಮನುವಾದಿ ಆರ್ ಎಸ್ ಎಸ್ ಬಿಜೆಪಿ ಪಕ್ಷಕ್ಕೆ ಬೆಂಬಲ ಸೂಚಿಸಿದರೆ ಅಂತಹ ಮುಖಂಡರನ್ನು ದಲಿತ ಸಂಘರ್ಷ ಸಮಿತಿ ಸಂಘಟನೆಯಿಂದ ಉಚ್ಚಾಟನೆ ಮಾಡುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಡಾ. ರಂಗಸ್ವಾಮಿ ,ನಾಗೇನಹಳ್ಳಿ ವಿರೂಪಾಕ್ಷಪ್ಪ, ಚೇಳೂರು ಶಿವನಂಜಪ್ಪ, ಕೋಡಿಯಾಲ ಮಹದೇವ್, ಪಣಿಂದ್ರ, ಬಸವರಾಜ್, ನೂರಾರು ಕಾರ್ಯಕರ್ತರು ಹಾಜರಿದ್ದರು.
ವರದಿ
ಗುಬ್ಬಿ: ಶ್ರೀಕಾಂತ್