Document

ಮನೆ ಮನೆಗೆ ಕುಮಾರಣ್ಣನ ಪಂಚರತ್ನ ಯೋಜನೆ– ಮಾಜಿ ಶಾಸಕ ಎಂ ಟಿ ಕೃಷ್ಣಪ್ಪ

ಮನೆ ಮನೆಗೆ ಕುಮಾರಣ್ಣನ ಪಂಚರತ್ನ ಯೋಜನೆ– ಮಾಜಿ ಶಾಸಕ ಎಂ ಟಿ ಕೃಷ್ಣಪ್ಪ .

IMG 20230403 WA0016

ತುರುವೇಕೆರೆ ತಾಲೂಕಿನಲ್ಲಿ 2023ರ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಬಹುಮತ ಗಳಿಸುವ ದಿಕ್ಕಿನಲ್ಲಿ, ಶ್ರೀ ಕುಮಾರಣ್ಣನವರ ಮಿಷನ್ 123 ಅಂದರೆ ಜಾತ್ಯಾತೀತ ಜನತಾದಳ ಸರಕಾರ ರಚಿಸಿದ್ದಲ್ಲಿ ,
ಸಮಾಜದ ಎಲ್ಲಾ ವರ್ಗ ಮತ್ತು ಸಮುದಾಯದವರಿಗೆ ಏಳಿಗೆಗೆ ಜನತಾಪರ್ವ ಕಾರ್ಯಕ್ರಮದಡಿಯಲ್ಲಿ ರೂಪಿಸಿರುವ,

ಈ ಕೆಳಕಂಡ ಯೋಜನೆಗಳನ್ನು ಚಾಚು ತಪ್ಪದೇ ಜಾರಿಗೊಳಿಸಲಾಗುವುದು, ಎಂದು ಮಾಜಿ ಶಾಸಕ ಎಂ ಟಿ ಕೃಷ್ಣಪ್ಪ ಹೇಳಿದರು.

ಕನಸಿನ ಯೋಜನೆಗಳಾದ.

IMG 20230403 WA0015

ಸ್ತ್ರೀಶಕ್ತಿ ಮತ್ತು ಸ್ವಸಹಾಯ ಸಂಘಗಳ ಸಾಲ ಮನ್ನಾ.

ಕೊಬ್ಬರಿಯ ಕನಿಷ್ಠ ಬೆಲೆ 15000 ಗಳಿಗೆ ನಿಗದಿಪಡಿಸುವುದು.

ರೈತರಿಗಾಗಿ ಪ್ರತಿ ಎಕರೆಗೆ 10,000 ಸಹಾಯಧನ.

ಅಂಗವಿಕಲರ ,ವಿಧವೆಯರ ಮತ್ತು ವೃದ್ಧರ ಮಹಾಶಾಸನವನ್ನು 5,000 ಹೆಚ್ಚಳ .

ನಿರುದ್ಯೋಗಿ ವಿದ್ಯಾವಂತರಿಗೆ 4000.

ಮದುವೆ ಆಗದೆ ಇರುವ ರೈತರ ಮಕ್ಕಳಿಗೆ ಎರಡು ಲಕ್ಷ ಸಹಾಯಧನ.

ತಾಲೂಕಿನಲ್ಲಿ ಇಂಜಿನಿಯರಿಂಗ್ ಕಾಲೇಜು ಮಂಜೂರು ಮಾಡುವುದು .

ತುರುವೇಕೆರೆ ತಾಲೂಕನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡುವುದು.

ಚಂದ್ರಶೇಖರ ಪುರವನ್ನು ತಾಲೂಕು ಕೇಂದ್ರವನ್ನಾಗಿ ಮಾಡುವುದು.

IMG 20230403 WA0018

ಈ ಎಲ್ಲಾ ಯೋಜನೆಗಳನ್ನು ಜಾರಿಗೆ ತರುವುದೇ ನಮ್ಮ ಜಾತ್ಯಾತೀತ ಜನತಾದಳ ಪಕ್ಷದ ಶಪಥ ,ನೂರಕ್ಕೆ ನೂರು ಭಾಗ ಜಾರಿ ಮಾಡಿಯೇ ತೀರುತ್ತೇವೆ.

ಹಾಗಾಗಿ ಈ ಬಾರಿ ತಾಲೂಕಿನಲ್ಲಿ ಹೆಚ್ಚು ಮತಗಳ ಅಂತರದಿಂದ ನನ್ನನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.

Document

Leave a Reply

Your email address will not be published. Required fields are marked *