
Janataa24 NEWS DESK
ಪಾವಗಡ: ಮುಸ್ಲಿಂ ಮಹಿಳೆಯರು ಈ ಭಾರಿಯ ಚುನಾವಣೆಯಲ್ಲಿ ಎಚ್ಚರಿಕೆಯಿಂದ ಮತದಾನ ಮಾಡಲು ಮುಂದಾಗಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ಹೆಚ್.ವಿ.ವೆಂಕಟೇಶ್ ತಿಳಿಸಿದರು.
ಪಾವಗಡ ಪಟ್ಟಣದ ಸಾಯಿರಾಮ್ ಮಂಟಪದಲ್ಲಿ ಹಮ್ಮಿಕೊಂಡಿದ್ದ 15 ಮತ್ತು 20 ನೇ ವಾರ್ಡ್ ಗಳ ಮಹಿಳಾ ಕಾರ್ಯಕರ್ತರ ಸಭೆಯಲ್ಲಿ ಪಾವಗಡ ಕಾಂಗ್ರೆಸ್ ಅಭ್ಯರ್ಥಿ ಹೆಚ್.ವಿ ವೆಂಕಟೇಶ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು, ಕಾರ್ಯಕ್ರಮವನ್ನು ಉದ್ಘಾಟನೆಗೊಳಿಸಿ ಮಾತನಾಡಿದ ಅವರು ಜನರ ಅಭಿವೃದ್ಧಿ ವಿಚಾರದಲ್ಲಿ ನಾನು ಅಭಿವೃದ್ಧಿ ವಿಷಯಗಳನ್ನು ಹೊತ್ತು ನಿಮ್ಮ ಬಳಿ ಬಂದಿದ್ದೇನೆ ನಿಮ್ಮ ಆಶೀರ್ವಾದಕ್ಕಾಗಿ ನನಗೆ ಮತ ಹಾಕುವ ಮೂಲಕ ನಿಮ್ಮ ಆಸೆಗಳ ಈಡೇರಿಸುವ ಒಂದು ಸದಾ ಅವಕಾಶ ಕಲ್ಪಿಸಿ ಎಂದು ಮಹಿಳಾ ಕಾರ್ಯಕರ್ತರ ಬಳಿ ಮತಯಾಚನೆ ಮಾಡಿದರು.

ಈಗಾಗಲೇ ನಮ್ಮ ತಂದೆಯವರು ನಿಮ್ಮದೇ ಆಶೀರ್ವಾದದಿಂದ ನಾಲ್ಕು ಬಾರಿ ಶಾಸಕರಾಗಿ ಎರಡು ಬಾರಿ ಸಚಿವರಾಗಿ ತಮ್ಮ ಸೇವೆ ಮಾಡಿ, ಅನೇಕ ಅಭಿವೃದ್ಧಿ ಕೆಲಸಗಳು ಮಾಡಿ ನಿಮ್ಮ ಮತದಾನದಿಂದ ನಿಮ್ಮೆಲ್ಲರ ಸೇವೆ ಮಾಡಲು ಅನುವು ಮಾಡಿ ಕೊಟ್ಟಿದ್ದೀರಿ. ಈಗ ನನ್ನದೇ ಆದ ಬಹಳಷ್ಟು ಅಭಿವೃದ್ಧಿ ಕೆಲಸಗಳನ್ನು ಹೊತ್ತು ನಿಮ್ಮ ಮುಂದೆ ಬಂದಿದ್ದೇನೆ ಮೊದಲಿಗೆ ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಗಾರ್ಮೆಂಟ್ ವ್ಯವಸ್ಥೆ, ಉತ್ತಮ ವಿದ್ಯಾಭ್ಯಾಸಕ್ಕಾಗಿ ಡಿಪ್ಲೋಮಾ ಕಾಲೇಜು ವ್ಯವಸ್ಥೆ, ಇಂಜಿನಿಯರಿಂಗ್ ಕಾಲೇಜು ವ್ಯವಸ್ಥೆ ಮಾಡಬೇಕು ಎಂಬುದು ನನ್ನ ಆಸೆ. ಬಹಳಷ್ಟು ಜನ ಬಡವರಿಗೆ ಇಂದಿಗೂ ಮನೆಗಳ ವ್ಯವಸ್ಥೆಯಿಲ್ಲಾ ಅಂತವರಿಗೆ ಪಟ್ಟಣದ ಹೊರಭಾಗದಲ್ಲಿ 5 ಎಕರೆ ಜಮೀನು ಈಗಾಗಲೇ ಸರ್ಕಾರದಿಂದ ಪಡೆದು ಆ ಸ್ಥಳದಲ್ಲಿ ಸೂರಿಲ್ಲದವರಿಗೆ ಮನೆಗಳನ್ನು ಕಲ್ಪಿಸುವ ವ್ಯವಸ್ಥೆ ಮಾಡಬೇಕೆಂಬ ಛಲಆಸೆ ನನ್ನದು.
ಈಗಾಗಲೇ ಪಾವಗಡ ತಾಲೂಕಿನಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸಗಳನ್ನು ನಮ್ಮ ತಂದೆ ಮಾಡಿದ್ದಾರೆ ಬಡವರಿಗಾಗಿ ವೆಂಕಟರಮಣಪ್ಪ ಬಡಾವಣೆಯಲ್ಲಿ 495 ಮನೆಗಳು ನಿರ್ಮಾಣ, ಪಟ್ಟಣದ ಮಿನಿ ವಿಧಾನಸೌಧ, ನಾಗಲಮಡಿಕೆಯಲ್ಲಿ ಚೆಕ್ ಡ್ಯಾಮ್ ನಿರ್ಮಾಣ, ಮಕ್ಕಳಿಗೆ ಹಾಸ್ಟೆಲ್ ವ್ಯವಸ್ಥೆಗಳು, ಕಾಲೇಜುಗಳು ನಿರ್ಮಾಣ, 2ಕೆವಿ ವಿದ್ಯುತ್, ಸೋಲಾರ್ ಘಟಕ ನಿರ್ಮಾಣ ಇಂತಹ 10 ಹಲವು ಅಭಿವೃದ್ಧಿ ಕೆಲಸಗಳು ನಮ್ಮ ತಂದೆಯವರು ಮಾಡಿದ್ದಾರೆ. ನನಗೊಮ್ಮೆ ಅವಕಾಶ ಕೊಡಿ ಹೋದ ಬಾರಿ ಎರಡು ಸಾವಿರ ಅಂತರದಿಂದ ನಾನು ಸೋತಿದ್ದೆ ಈ ಬಾರಿ ನೇರವಾಗಿ ನಿಮ್ಮ ಬಳಿ ಬಂದಿದ್ದೇನೆ ಒಮ್ಮೆ ನನಗೆ ಅಧಿಕಾರ ಕೊಟ್ಟು ನಿಮ್ಮ ಸೇವೆ ಮಾಡಲು ಸಹಕರಿಸಿ.
ಈ ಹಿಂದೆ ಕೋವಿಡ್ ಬಂದಂತ ವೇಳೆಯಲ್ಲಿ ಬಹಳಷ್ಟು ಜನರ ಸೇವೆ ಮಾಡಿಕೊಂಡು ಬಂದಿದ್ದೇನೆ, ಜೆಸಿಬಿ ವ್ಯವಸ್ಥೆ, ಆಂಬುಲೆನ್ಸ್ ವ್ಯವಸ್ಥೆ, ಸಾವಿರಾರು ಜನಕ್ಕೆ ಉಪಹಾರ ವ್ಯವಸ್ಥೆ ಕಲ್ಪಸಲಾಗಿದೆ. ಪ್ರತಿದಿನ ನಮ್ಮ ಮನೆಯ ಬಳಿ 15 ರಿಂದ 20 ಜನ ತಮ್ಮ ಸಮಸ್ಯೆ ಹೇಳಿಕೊಂಡು ಬರುತ್ತಾರೆ ಅಂತವರಿಗೆ ನಾನು ಬರೆ ಕೈಯಲ್ಲಿ ಕಳಿಸದೆ ಸಹಾಯಧನ ನೀಡಿ ಕಳಿಸುತ್ತೇನೆ ಎಂದರು.

ಇದೇ ವೇಳೆ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ರೋಷನ್ ಆಲಿ ಮಾತನಾಡಿ ಮುಸ್ಲಿಂ ಸಮುದಾಯ ನೆಮ್ಮದಿಯಿಂದ ಜೀವನ ಕಳೆಯಲು ಎಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದರೆ ಮಾತ್ರವೇ ನೆಮ್ಮದಿಯಿಂದ ಜೀವನ ಕಳೆಯಬಹುದು, ಇಂದು ಬಿಜೆಪಿಯಿಂದ ಇಲ್ಲ ಸಲ್ಲದ ಕಿರುಕುಳಕ್ಕೆ ಬಲಿಯಾಗುತ್ತಿರುವ ಏಕೈಕ ಸಮುದಾಯವೆಂದರೆ ಅದು ಮುಸ್ಲಿಂ ಸಮುದಾಯ ಆದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ನೆಮ್ಮದಿಯ ಜೀವನಕ್ಕೆ ಎಂದರು.
ಈ ವೇಳೆ ಪುರಸಭಾ ಸದಸ್ಯರಾದ ರಾಜೇಶ್, ರವಿ, ಪ್ರಮೋದ್ ಕುಮಾರ್, ವಿಶ್ವನಾಥ್,
ಮಾಜಿ ಪುರಸಭೆ ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಮಹಿಳಾ ಉಪಾಧ್ಯಕ್ಷೆ ವೀಣಾ ಅಂಜನ್ ಕುಮಾರ್, ಸುಮಾ ಅನಿಲ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ರೋಷನ್ ಆಲಿ, ಟೌನ್ ಅಧ್ಯಕ್ಷ ರಿಜ್ವಾನ್ ಉಲ್ಲಾ, ಪುರಸಭೆ ಸದಸ್ಯ ಮಹಮ್ಮದ್ ಇಮ್ರಾನ್, ಆರ್.ಕೆ.ಜಾಮೀರ್, ಗುಟ್ಟಹಳ್ಳಿ ಟೀಪು ಮತ್ತು ಇದೇ ವೇಳೆ ಗಣ್ಯರು,15ನೆ, 20ನೇ ವಾರ್ಡ್ ಗಳ ಮಹಿಳಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ವರದಿ:ಇಮ್ರಾನ್ ಉಲ್ಲಾ–ಪಾವಗಡ