Janataa24 NEWS DESK
Turuvekere: ಶಿವಮೊಗ್ಗದಲ್ಲಿ ಪ್ರೊಫೆಸರ್ ಬಿ, ಕೃಷ್ಣಪ್ಪ ಅವರ 87ನೇ ಜನ್ಮದಿನೋತ್ಸವ–ದಂಡಿನ ಶಿವರ ಕುಮಾರ್ ಆಹ್ವಾನ.

ತುರುವೇಕೆರೆ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊಫೆಸರ್ ಬಿ ಕೃಷ್ಣಪ್ಪ ಸ್ಥಾಪಿತ ೪೭-೭೪/೭೫(ರಿ) ತುರುವೇಕೆರೆ ತಾಲ್ಲೂಕು ಘಟಕ ವತಿಯಿಂದ ಜಿಲ್ಲಾ ಸಂಘಟನಾ ಸಂಚಾಲಕರಾದ ದಂಡಿನ ಶಿವರ ಕುಮಾರ್ ಹಾಗೂ ತಾಲೂಕು ಸಂಚಾಲಕರಾದ ಮಲ್ಲೂರು ತಿಮ್ಮೇಶ್ ಇವರ ನೇತೃತ್ವದಲ್ಲಿ ಪತ್ರಿಕಾ ಮಾಧ್ಯಮ ಗೋಷ್ಠಿ ನಡೆಸಲಾಯಿತು.
ಇದೇ ವೇಳೆ ದಂಡಿನ ಶಿವರ ಕುಮಾರ್ ಮಾತನಾಡಿ ಆತ್ಮೀಯ ಎಲ್ಲಾ ದ.ಸಂ.ಸ ಪದಾಧಿಕಾರಿಗಳೆ ದಿನಾಂಕ:09:06:2025 ನೇ ಸೋಮವಾರ ಶಿವಮೊಗ್ಗದಲ್ಲಿ ಪ್ರೊ .ಬಿ.ಕೃಷ್ಣಪ್ಪನವರ ಜನ್ಮ ದಿನ ಹಾಗೂ ಪದಾಧಿಕಾರಿಗಳ ಸಮಾವೇಶವನ್ನು ರಾಜ್ಯ ನೌಕರರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ತಪ್ಪದೆ ಈ ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲಾ ಡಿ ಎಸ್ಎಸ್ ಮುಖಂಡರು ಪದಾಧಿಕಾರಿಗಳು ಸಮುದಾಯದ ಬಂಧುಗಳು ಎಲ್ಲಾ ವರ್ಗದ ಸಹಯೋಗಿಗಳು ಪಾಲ್ಗೊಳ್ಳಬೇಕೆಂದು ಮಾಧ್ಯಮದ ಮುಖೇನ ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಇದೇ ಸಂದರ್ಭದಲ್ಲಿ ತಾಲೂಕು ಘಟಕದ ಬೋರಪ್ಪ ಖಜಾಂಚಿ, ರಾಮಕೃಷ್ಣಯ್ಯ ಹಿರಿಯ ಮುಖಂಡರು, ಶಿವಣ್ಣಮುತ್ತಗದಹಳ್ಳಿ, ನಂಜಪ್ಪ ಡಿ ಕಲ್ಕೆರೆ, ತಮ್ಮಯ್ಯ ಬಿ, ಪುರ. ರೂಪರಂಗಸ್ವಾಮಿ, ಇನ್ನು ಹಲವರು ಉಪಸ್ಥಿತರಿದ್ದರು.
ವರದಿ: ಮಂಜುನಾಥ್ ಕೆ ಎ ತುರುವೇಕೆರೆ .
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.