Document

Turuvekere: ಸಾರ್ವಜನಿಕರಿಗೆ ಮಾರಕವಾಗಿದ್ದ ರಸ್ತೆ ಗುಂಡಿಗೆ, ಕೊನೆಗೂ ಮುಕ್ತಿ ಕೊಟ್ಟ ನೂತನ A E E ಅಧಿಕಾರಿ ಕಣ್ಮಣಿ ಟಿ.ಸಿ.

 

Janataa24 NEWS DESK 

 

Turuvekere: ಸಾರ್ವಜನಿಕರಿಗೆ ಮಾರಕವಾಗಿದ್ದ ರಸ್ತೆ ಗುಂಡಿಗೆ, ಕೊನೆಗೂ ಮುಕ್ತಿ ಕೊಟ್ಟ ನೂತನ A E E ಅಧಿಕಾರಿ ಕಣ್ಮಣಿ ಟಿ.ಸಿ.

 

ತುರುವೇಕೆರೆ: ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಬರುವ ದಬ್ಬೆಘಟ್ಟ ರಸ್ತೆಯಲ್ಲಿ ಸುಮಾರು ತಿಂಗಳುಗಳಿಂದ ರಸ್ತೆ ಗುಂಡಿ ಬಿದ್ದಿದ್ದು ಅದೆಷ್ಟು ಮಂದಿ ಇದೇ ಗುಂಡಿಯಲ್ಲಿ ಬಿದ್ದು ಗಾಯಗಳಾಗಿ ವಾಹನ ಸವಾರರಿಂದ ಸಾರ್ವಜನಿಕ ವಲಯದಿಂದ ಸಂಬಂಧ ಪಟ್ಟ ಇಲಾಖೆಗೆ ಇಡೀ ಶಾಪ ಹಾಕಿದ್ದರು ಇದರ ದುರಸ್ತಿಗೆ ಯಾರು ಸಹ ಮುಂದಾಗದೆ ಸಾರ್ವಜನಿಕರಿಂದ ವ್ಯಾಪಕವಾಗಿ ಸಂಬಂಧಪಟ್ಟ ಇಲಾಖೆ ವಿರುದ್ಧ ತಿರುಗಿ ಬಿದ್ದ ಪ್ರಸಂಗವು ನಡೆದು ಹೋಗಿತ್ತು ಆದರೂ ಪಟ್ಟಣ ಪಂಚಾಯಿತಿ ಮಾತ್ರ ತಲೆಕೆಡಿಸಿಕೊಳ್ಳದೆ ಅದರ ಪಾಡಿಗೆ ನಮಗೆ ಸಂಬಂಧಪಟ್ಟಿಲ್ಲವೇನೋ ಎಂಬಂತೆ ಕೈ ಚೆಲ್ಲಿ ಕುಳಿತಿತ್ತು,

Turuvekere: ಸಾರ್ವಜನಿಕರಿಗೆ ಮಾರಕವಾಗಿದ್ದ ರಸ್ತೆ ಗುಂಡಿಗೆ, ಕೊನೆಗೂ ಮುಕ್ತಿ ಕೊಟ್ಟ ನೂತನ A E E ಅಧಿಕಾರಿ ಕಣ್ಮಣಿ ಟಿ.ಸಿ.
ಇದರ ಮಾಹಿತಿ ಪಡೆದ ರಾಜ್ಯ ಮಾಹಿತಿ ಹಕ್ಕುಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ರಾಜ್ಯ ಕಾರ್ಯದರ್ಶಿ ರುದ್ರೇಶ್ ಹಾಗೂ ತಾಲೂಕು ಅಧ್ಯಕ್ಷರಾದ ದೊರೆಸ್ವಾಮಿ ಅವರು ಮೊನ್ನೆಯಷ್ಟೇ ನೂತನವಾಗಿ ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ಆಗಿ ಅಧಿಕಾರ ವಹಿಸಿಕೊಂಡ ಕಣ್ಮಣಿ ಟಿ.ಸಿ. ಅವರಿಗೆ ದೂರವಾಣಿ ಮೂಲಕ ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ಗುಂಡಿ ಬಿದ್ದ ರಸ್ತೆಯಿಂದಾಗುತ್ತಿರುವ ಸಮಸ್ಯೆಗಳನ್ನು ವಿವರವಾಗಿ ತಿಳಿಸಿದ್ದಾರೆ, ಒಂದೇ ದಿನಕ್ಕೆ ಕೂಡಲೇ ಇದಕ್ಕೆ ಸ್ಪಂದಿಸಿದ ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ಕಣ್ಮಣಿ ಟಿ.ಸಿ. ಅವರು ಕಾಮಗಾರಿಯನ್ನ ಕೈಗೆತ್ತಿಕೊಂಡು ಪ್ರಸ್ತುತ ಕಾಮಗಾರಿ ನಡೆಯುತ್ತಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಈ ರಸ್ತೆ ಸಾರ್ವಜನಿಕರಿಗೆ ವಾಹನ ಸವಾರರಿಗೆ ಸಂಚರಿಸಲು ಸಿದ್ದವಾಗಲಿದೆ, ಅಂತು ಇಂತು ಕೊನೆಗೂ ಗುಂಡಿ ಬಿದ್ದ ಈ ರಸ್ತೆಗೆ ಮುಕ್ತಿ ದೊರಕಿಸಿಕೊಡಲು ನೂತನ ಅಧಿಕಾರಿ ಕಣ್ಮಣಿ ಟಿ.ಸಿ. ಅವರೇ ಬರಬೇಕಾಯಿತು ಎಂಬುದು ದಿನನಿತ್ಯ ಸಂಚರಿಸುತ್ತಿದ್ದ ಅನೇಕ ಸಾರ್ವಜನಿಕರ ಬಾಯಲ್ಲಿ ಕೇಳಿ ಬರುತ್ತಿದ್ದು ಈ ನೂತನ ಅಧಿಕಾರಿಗೆ ಪ್ರಶಂಸೆಯ ಸುರಿಮಳೆಯೇ ಹರಿದು ಬರುತ್ತಿದೆ.

 

ವರದಿ: ಮಂಜುನಾಥ್ ಕೆ ಎ ತುರುವೇಕೆರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *