Document

Turuvekere: ಕೆಂಪೇಗೌಡ ಜಯಂತಿ ಪ್ರಯುಕ್ತ ಕೆಂಪೇಗೌಡ ಕಪ್ ಜೂನ್ 26ಕ್ಕೆ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿ.

Janataa24 NEWS DESK 

 

 

Turuvekere: ಕೆಂಪೇಗೌಡ ಜಯಂತಿ ಪ್ರಯುಕ್ತ ಕೆಂಪೇಗೌಡ ಕಪ್ ಜೂನ್ 26ಕ್ಕೆ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿ.

 

Turuvekere: ಕೆಂಪೇಗೌಡ ಜಯಂತಿ ಪ್ರಯುಕ್ತ ಕೆಂಪೇಗೌಡ ಕಪ್ ಜೂನ್ 26ಕ್ಕೆ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿ.

ತುರುವೇಕೆರೆ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭೀಮೋತ್ಸವ ಆಚರಣೆ ಸಮಿತಿ ಮತ್ತು ಒಕ್ಕಲಿಗರ ಸಂಘ, ತುರುವೇಕೆರೆ ತಾಲೂಕಿನ ಎಲ್ಲಾ ಸಮುದಾಯಗಳ ಸಂಘ ಸಂಸ್ಥೆಗಳು ಹಾಗೂ ಎಲ್ಲಾ ನಾಗರಿಕರ ಜೊತೆಗೂಡಿ ಕೆಂಪೇಗೌಡ ಜಯಂತಿ ಪ್ರಯುಕ್ತ ಕೆಪಿಎಲ್ ಮಾದರಿಯಲ್ಲಿ ಟಿಕೆಪಿಎಲ್ ಕೆಂಪೇಗೌಡ ಕಪ್ ಪಂದ್ಯಾವಳಿಯ ಆಯೋಜನೆಯ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.

ಇದೆ ವೇಳೆ ಒಕ್ಕಲಿಗ ಸಂಘದ ನಿರ್ದೇಶಕರಾದ ಬಡಗರಹಳ್ಳಿ ರಂಗಸ್ವಾಮಿ ಮಾತನಾಡಿ, ನಾಡಪ್ರಭು ಕೆಂಪೇಗೌಡ ಜಯಂತಿ ಪ್ರಯುಕ್ತ ತುರುವೇಕೆರೆಯಲ್ಲಿ ಕೆಂಪೇಗೌಡ ಕಪ್ ಪ್ರೊ ಕಬಡ್ಡಿ ಮಾದರಿಯಲ್ಲಿ ತಾಲೂಕು ಮಟ್ಟದ ಹೊನಲ ಬೆಳಕಿನ ಕಬ್ಬಡಿ ಪಂದ್ಯಾವಳಿಯನ್ನು 26- 6 -2025ನೇ ಗುರುವಾರದಂದು ಆಯೋಜನೆ ಮಾಡಲಾಗಿದ್ದು ಈ ಪಂದ್ಯಾವಳಿಗಳಿಗೆ ಆಟಗಾರರನ್ನು ಹರಾಜು ಪ್ರಕ್ರಿಯೆಯಲ್ಲಿ ಆಯ್ಕೆ ಮಾಡಲಾಗುವುದು ಇದು ಕೇವಲ ತುರುವೇಕೆರೆ ತಾಲೂಕಿನ ಆಟಗಾರರಿಗೆ ಮಾತ್ರ ಅವಕಾಶವಿದ್ದು ತುರುವೇಕೆರೆ ಪಟ್ಟಣದ ಜಿಜೆಸಿ ಕ್ರೀಡಾಂಗಣದಲ್ಲಿ ಪಂದ್ಯಾವಳಿಗಳು ನಡೆಯಲಿದ್ದು ಮೊದಲನೇ ಬಹುಮಾನ 25,000 ಮತ್ತು ಟ್ರೋಪಿಯೊಂದಿಗೆ ವಿಶೇಷವಾಗಿ ಟಗರು ಸಹ ಮೊದಲನೇ ಬಹುಮಾನವಾಗಿ ಸಿಗಲಿದೆ ಇನ್ನು ಎರಡನೇ ಬಹುಮಾನ 15000 ಹಾಗೂ ಟ್ರೋಪಿ ಮೂರನೇ ಮತ್ತು ನಾಲ್ಕನೇ ಬಹುಮಾನ 7,000 ಹಾಗೂ ಟ್ರೋಪಿ ಒಳಗೊಂಡಿದ್ದು, ದಿನಾಂಕ 15ನೇ ತಾರೀಕು ದಬ್ಬೇಘಟ್ಟ ರಸ್ತೆಯಲ್ಲಿರುವ ಬಿಜಿಎಸ್ ಸಮುದಾಯ ಭವನದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದ್ದು ಫ್ರಾಂಚೈಸಿಗಳು ಭಾಗವಹಿಸಬೇಕು, ಜೊತೆಗೆ ಪಂದ್ಯಾವಳಿಗೆ ನೂರು ರೂ,ಪಾವತಿ ಮಾಡಿ ಪ್ರವೇಶಾತಿ ಅರ್ಜಿಗಳ ಮೂಲಕ ನೋಂದಣಿ ಮಾಡಿಸಿ ಮತ್ತು ಪ್ರವೇಶಾತಿ ಶುಲ್ಕ 2,000 ರೂಗಳನ್ನು ನಿಗದಿ ಮಾಡಲಾಗಿದ್ದು ಶುಲ್ಕಪಾವತಿ ಮಾಡಿ ಆಟಗಾರರು ಭಾಗವಹಿಸಬಹುದು ಎಂದು ತಿಳಿಸಿದರು.

 

ಅರ್ಜಿ ದೊರೆಯುವ ಸ್ಥಳ,

 

1,ಎಸ್ ಎಲ್ ಆರ್ ಮೊಬೈಲ್ ಸೆಂಟರ್, (ಅಪೋಲೋ ಫಾರ್ಮಸಿ ಹತ್ತಿರ)

2, ರಾಜು ಮೊಬೈಲ್ ಸರ್ವಿಸ್ ಸೆಂಟರ್ ಎಸ್ ಬಿ ಐ ಬ್ಯಾಂಕ್ ರಸ್ತೆ.

3, ಆದಿಶಕ್ತಿ ಮೊಬೈಲ್ ಸೆಂಟರ್ (ಕೆ ಎಸ್ ಆರ್ ಟಿ ಸಿ ಬಸ್ ಸ್ಟ್ಯಾಂಡ್ ಎದುರು) ಇಲ್ಲಿ ದೊರೆಯಲಿದೆ.

ಈ ಪತ್ರಿಕಾಗೋಷ್ಠಿಯಲ್ಲಿ ಸಿ ಎಸ್ ಮೂರ್ತಿ ನೆಮ್ಮದಿ ಗ್ರಾಮ, ಬಿ ಆರ್ ಕೃಷ್ಣಸ್ವಾಮಿ,ನವೀನ್ ಬಾಬು, ಬ್ಯಾಟರಂಗೇಗೌಡ ಅಲಿಯಾಸ್ ಪುಟ್ಟಣ್ಣ, ವಿ ಬಿ ಸುರೇಶ್, ಸುನಿಲ್ ಸಂಗ್ಲಾಪುರ, ವಾಸು ಸಂಗಲಾಪುರ, ಕನ್ನಡದ ಕಂದ ವೆಂಕಟೇಶ್,ಜಯ ಕರ್ನಾಟಕ ವೇದಿಕೆ ದಯಾನಂದ್, ಪ್ರಕಾಶ್, ಜಗದೀಶ್ ಅಲಿಯಾಸ್ ರಾಯಣ್ಣ, ಯೂಸಫ್, ನಂದೀಶ್ ಗೋಣಿ ತುಮಕೂರು, ಮಾಚನಹಳ್ಳಿಮಂಜುನಾಥ್, ಇನ್ನು ಹಲವರು ಉಪಸ್ಥಿತರಿದ್ದರು,

 

ವರದಿ:ಮಂಜುನಾಥ್ ಕೆ ಎ ತುರುವೇಕೆರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *