Janataa24 NEWS DESK
Turuvekere: ಫಲಾನುಭವಿಗಳಿಗೆ ಸರ್ಕಾರದ ಸೌಲತ್ತುಗಳನ್ನು ದೊರಕಿಸಿಕೊಡಿ,ಸಹಕಾರ ಸಂಘಗಳ ಉಪ ನಿಬಂಧ ಅಧಿಕಾರಿ ಎಚ್ ಮೂರ್ತಿ ಸೂಚನೆ.

ತುರುವೇಕೆರೆ: ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಪಂಚಾಯಿತಿ ತುರುವೇಕೆರೆ ಹಾಗೂ ಸಹಕಾರ ಸಂಘಗಳ ಉಪ ನಿಬಂಧಕರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಸಲಾಯಿತು, ಇದೇ ವೇಳೆ ಎಚ್ ಮೂರ್ತಿ ಮಾತನಾಡಿ, ಸರ್ಕಾರ ಒಂದು ಆಶಾದಾಯಕ ಕಾರ್ಯಕ್ರಮ ರೂಪಿಸಿದ್ದು, ಅದನ್ನು ನಿಜವಾದ ಫಲನುಭವಿಗಳಿಗೆ ದೊರಕಿಸಿಕೊಟ್ಟಲ್ಲಿ ಅದರ ಫಲ ಶೃತಿ ನಿಮಗೆ ಸಿಗುತ್ತದೆ, ಹಾಡಿಗಳಲ್ಲಿ ಗುಡ್ಡಗಾಡು ಪ್ರದೇಶಗಳಲ್ಲಿ, ಬುಡಕಟ್ಟು ಸಮುದಾಯಗಳ ಹೆಣ್ಣು ಮಕ್ಕಳು ಈಗಲೂ ತಮ್ಮ ಜೀವನ ನಡೆಸಲು ಹರಸಾಹಸ ಪಡುತ್ತಾರೆ, ಹಳೆ ಸೀರೆಯನ್ನೇ ತೋಡುವ ಜನಾಂಗವನ್ನು ಕಣ್ಣಾರೆ ಕಂಡಿರುವ ಕಾರಣ ಅಂತಹ ಸಮುದಾಯಗಳಿಗೆ ಗೃಹಲಕ್ಷಿ ಯೋಜನೆ ಬಹಳ ಉಪಯೋಗವಾಗುತ್ತದೆ.
50, 100ಕ್ಕೆ ಕೆಲಸ ಮಾಡುವ ಈ ಸಮುದಾಯಗಳಿಗೆ 2,000 ಹಣ ಖಾತೆಗೆ ಬಂದಲ್ಲಿ ಅವರ ಖುಷಿಗೆ ಪಾರವೇ ಇಲ್ಲ ಎಂದರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಸವಿತಾ ಮಾತನಾಡಿ ಬಿಸಿ ಊಟ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆಯ ಮಕ್ಕಳಿಗೆ ಮೊಟ್ಟೆ, ಹಾಲು, ಬಾಳೆಹಣ್ಣು ಇದರ ಜೊತೆಗೆ ರಾಗಿ ಮಾಲ್ಟ್ ನೀಡುತ್ತಿರುವ ಕಾರಣ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರ ದೊರಕುತ್ತಿದೆ ಎಂದರು, ಇದರ ಜೊತೆಗೆ ದಿನನಿತ್ಯ ತರಕಾರಿ ಸೊಪ್ಪು ಖರೀದಿಸಲು ಶಾಲಾ ಮುಖ್ಯ ಶಿಕ್ಷಕರಿಗೆ ಜವಾಬ್ದಾರಿ ನೀಡಿದ್ದು ಅದರ ಖರ್ಚು ವೆಚ್ಚ ಮುಖ್ಯ ಶಿಕ್ಷಕರ ಖಾತೆಗೆ ವರ್ಗಾಯಿಸಲಾಗುತ್ತದೆ ಎಂದರು. ಈ ಸಭೆಯಲ್ಲಿ ಗೃಹಲಕ್ಷ್ಮಿ ಯೋಜನೆ ಬಗ್ಗೆ ಸಿಡಿಪಿಓ ಇಲಾಖೆ ಅಧಿಕಾರಿಗಳು ತಮ್ಮ ಸೇವಾ ಅವಧಿಯಲ್ಲಿ ಸ್ವಾರಸ್ಯಕರ ವಿಷಯಗಳನ್ನು ಹಂಚಿಕೊಂಡರು.
ಮುಂದುವರೆದು ಮಾತನಾಡಿದ ಉಪನಿಬಂಧಕ ಅಧಿಕಾರಿ ಎಚ್ ಮೂರ್ತಿ ಅವರು ಅಧಿಕಾರಿಗಳಿಗೆ ಈ ಸಭೆಯಲ್ಲಿ ಆರೋಗ್ಯ ಇಲಾಖೆ, PWD ಇಲಾಖೆ ಹಾಗೂ ರೇಷ್ಮೆ ಇಲಾಖೆ ಅಧಿಕಾರಿಗಳು ಗೈರು ಹಾಜರಿಗೆ ನೋಟೀಸ್ ನೀಡಲು ಸೂಚಿಸಿದರು. ಈ ಸಭೆಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳು, ವಿವಿಧ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು, ತಾಲ್ಲೂಕು ಪಂಚಾಯತಿ ವ್ಯವಸ್ಥಾಪಕರು, ನೌಕರರು ಭಾಗವಹಿಸಿದ್ದರು.
ವರದಿ: ಮಂಜುನಾಥ್ ಕೆ ಎ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/turuvekere-protesting-against-stone-mining/
IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.
Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.
Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.