Document

ExpressLinkCanal:  ಪ್ರತಿಭಟನಾ ನಿರತ ರೈತರನ್ನು ಹತ್ತಿಕ್ಕುವ ಕೆಲಸ ಮಾಡಬೇಡಿ–ಬಿ,ವೈ ವಿಜಯೇಂದ್ರ

Janataa24 NEWS DESK 

 

 

ExpressLinkCanal:  ಪ್ರತಿಭಟನಾ ನಿರತ ರೈತರನ್ನು ಹತ್ತಿಕ್ಕುವ ಕೆಲಸ ಮಾಡಬೇಡಿ–ಬಿ,ವೈ ವಿಜಯೇಂದ್ರ.

ExpressLinkCanal:  ಪ್ರತಿಭಟನಾ ನಿರತ ರೈತರನ್ನು ಹತ್ತಿಕ್ಕುವ ಕೆಲಸ ಮಾಡಬೇಡಿ–ಬಿ,ವೈ ವಿಜಯೇಂದ್ರ
ಗುಬ್ಬಿ : ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕಾಮಗಾರಿಯು ಸಂಪೂರ್ಣ ಅವೈಜ್ಞಾನಿಕವಾಗಿದ್ದು ರಾಜ್ಯ ಸರ್ಕಾರವು ಅಹಂಕಾರದ ನಿರ್ಧಾರವನ್ನು ತೆಗೆದುಕೊಳ್ಳಬಾರದು ಸರ್ಕಾರವು ರೈತರ ವಿರುದ್ಧವಾಗಿ ನಡೆದರೆ ಹಾಗೂ ರೈತರ ತಾಳ್ಮೆ ಪರೀಕ್ಷೆ ಮಾಡಿದರೆ ಸರ್ಕಾರವು ಗ್ಯಾರಂಟಿ ಪತನವಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ,ವೈ ವಿಜಯೇಂದ್ರ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಕಿಡಿ ಕಾರಿದರು.

 

ತಾಲೂಕಿನ ಸುಂಕಪುರದಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಲ್ ಕಾಮಗಾರಿಯನ್ನು ವೀಕ್ಷಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದವರು ಹೇಮವತಿ ಎಕ್ಸ್ಪ್ರೆಸ್ ಲಿಂಕ್ ಕಾಮಗಾರಿಯು ಸಂಪೂರ್ಣ ಅವೈಜ್ಞಾನಿಕವಾಗಿ ಕೂಡಿದ್ದು ಈ ವಿಚಾರವಾಗಿ ರಾಜ್ಯ ಸರ್ಕಾರವು ಕೂಡಲೇ ಸರ್ವ ಪಕ್ಷಗಳ ಸಮನ್ವಯ ಸಭೆಯನ್ನು ಏರ್ಪಡಿಸಬೇಕು. ಹಾಗೂ ತುಮಕೂರು ಭಾಗದ ರೈತರ ಕಷ್ಟಕಾರ್ಪಣ್ಯಗಳನ್ನು ಆಲಿಸಬೇಕು ಉಪಮುಖ್ಯಮಂತ್ರಿಗಳು ಈ ಕಾಮಗಾರಿಯನ್ನು ತನ್ನ ಪ್ರತಿಷ್ಠೆಯಾಗಿ ತೆಗೆದುದುಕೊಂಡು ತುಮಕೂರು ರೈತರ ಜೀವನದ ಜೊತೆ ಚೆಲ್ಲಾಟವಾಡಬಾರದು.

ಹಾಗೂ ರಾಜ್ಯ ಸರ್ಕಾರವು ರೈತರ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಪೊಲೀಸರನ್ನು ಮುಂದಿಟ್ಟುಕೊಂಡು ರೈತರ ಮೇಲೆ ಇಲ್ಲ ಸಲ್ಲದ ಮೊಕದ್ದಮೆಗಳನ್ನು ಹೊಡುತ್ತಿದೆ ಹಾಗೂ ಮಠಾಧೀಶರ ಮೇಲೆ ಮೊಕದ್ದಮೆ ಹೊಡಿರುವುದು ಕರ್ನಾಟಕದ ಇತಿಹಾಸದಲ್ಲಿ ವಿಪರ್ಯಾಸ ಸಂಗತಿ ನಾವು ನೀರಾವರಿ ಹೋರಾಟದಲ್ಲಿ ರಾಜಕೀಯ ಲೇಪನ ಮಾಡುವುದಿಲ್ಲ ರೈತರ ಪರವಾಗಿ ಹೋರಾಟಕ್ಕೆ ಬರುತ್ತೇವೆ ಎಂದು ರಾಜ್ಯ ಸರ್ಕಾರದ ವಿರುದ್ಧ ತೀವ್ರಕಿಡಿ ಕಾರಿದರು .

 

ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಮಾತನಾಡಿ ತುಮಕೂರು ಭಾಗದ ರೈತರ ಜೀವನಾಡಿಯಾಗಿರುವ ಹೇಮಾವತಿ ನೀರನ್ನು ಎಕ್ಸ್ ಪ್ರೆಸ್ ಲಿಂಕ್ ಅವೈಜ್ಞಾನಿಕ ಕಾಮಗಾರಿಯಾಮೂಲಕ ಬೇರೆಡೆಗೆ ತೆಗೆದುಕೊಂಡು ಹೋಗುವುದು ತರವಲ್ಲ ತುಮಕೂರು ಭಾಗದ ರೈತರ ಸಂಕಷ್ಟಗಳನ್ನು ರಾಜ್ಯ ಸರ್ಕಾರವು ಅರ್ಥಮಾಡಿಕೊಳ್ಳಬೇಕು ನಾವು ರೈತರ ಪರವಾಗಿ ನಿಲ್ಲುತ್ತೇವೆ. ರೈತರ ಜೊತೆ ಜೈಲ್ ಭಾರೊ ಚಳುವಳಿಗೂಸಿದ್ದ. ಕಾಮಗಾರಿ ಮುಂದುವರೆದರೆ ತೀವ್ರ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.

 

ಛಲವಾದಿ ನಾರಾಯಣಸ್ವಾಮಿ ಮಾತನಾಡಿ ರೈತರಿಗೆ ವಿರೋಧವಾದ ಲಿಂಕ್ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು ರಾಜ್ಯ ಸರ್ಕಾರವು ಎರಡು ಜಿಲ್ಲೆಯ ರೈತರನ್ನು ಹಾಗೂ ಸಮನ್ವಯ ಸಮಿತಿಯ ಮೂಲಕ ಸಭೆ ನಡೆಸಿ ತಾಂತ್ರಿಕ ಸಮಿತಿ ರಚಿಸಬೇಕು. ಇಲ್ಲಿ ಯಾವುದೇ ರಾಜಕೀಯ ಲೇಪನ ಮಾಡಬಾರದು ರೈತರ ಮೇಲೆ ಸರ್ವಾಧಿಕಾರವನ್ನು ತೋರದೆ ರೈತರಿಗೆ ಆಗುವ ಅನ್ಯಾಯಗಳನ್ನು ಸರಿಪಡಿಸಬೇಕುಎಂದು ತಿಳಿಸಿದರು.

 

ಈ ಸಂದರ್ಭದಲ್ಲಿ ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ, ಬಿಜೆಪಿ ಮುಖಂಡ ಎಸ್ ಡಿ ದಿಲೀಪ್ ಕುಮಾರ್, ಜೆಡಿಎಸ್ ಮುಖಂಡ ಬಿ,ಎಸ್ ನಾಗರಾಜು, ಹೆಬ್ಬಾಕ ರವಿಕುಮಾರ್ , ಚಂದ್ರಶೇಖರ್ ಬಾಬು, ಬಲರಾಮ್, ಕೃಷ್ಣಮೂರ್ತಿ, ಸೇರಿದಂತೆ ಸಹಸ್ರರು ರೈತರು ಆಜರಿದ್ದರು.

 

ವರದಿ:ಶ್ರೀಕಾಂತ್ ಗುಬ್ಬಿ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

 

 

https://youtube.com/@janataa24?si=XsFcych2GMH0O6Gv

 

 

https://www.janataa24.com/turuvekere-protesting-against-stone-mining/

 

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

 

Turuvekere: ಫಸಲಿಗೆ ಬಂದ 40 ತೆಂಗಿನ ಮರಗಳನ್ನ ಕಡಿದುರುಳಿಸಿದ ಕಿಡಿಗೇಡಿಗಳು.

 

 

Operation Sindor: POK ಪಾಕಿಸ್ತಾನದ 9 ಉಗ್ರ ನೆಲೆಗಳನ್ನು ನೆಲಸಮಗೊಳಿಸಿದ ಭಾರತ ಸೇನೆ.

 

Document

Leave a Reply

Your email address will not be published. Required fields are marked *