Janataa24 NEWS DESK
Gubbi: ಪಂಚಾಯಿತಿ ವತಿಯಿಂದ ರಸ್ತೆ ಅಭಿವೃದ್ಧಿಗಾಗಿ 1.6 ಲಕ್ಷ ಅನುದಾನ ಬಿಡುಗಡೆ.
ಜನತಾ²⁴ ನ್ಯೂಸ್ ಫಲಶ್ರುತಿ.

ಗುಬ್ಬಿ : ತಾಲ್ಲೂಕಿನ ಕಡಬ ಹೋಬಳಿಯ ಮಾರಶೆಟ್ಟಿಹಳ್ಳಿ ಗ್ರಾಮದಲ್ಲಿ ಕಾಡುಗೂಲ್ಲ ಸಮುದಾಯದ ಜನರ ತೋಟದ ಮನೆಗಳಿಗೆ ಹೋಗುವ ರಸ್ತೆಗೆ ತಾವೇ ಸ್ವತಃ ಹಣ ಹಾಕಿಕೊಂಡು ರಸ್ತೆ ನಿರ್ಮಿಸಿಕೊಳ್ಳುತ್ತಿದ್ದಾರೆ ಎಂದು ಜನತಾ ನ್ಯೂಸ್ ನಲ್ಲಿ ಡಿಸೆಂಬರ್ 27 ರಂದು ವರದಿ ಮಾಡಲಾಗಿತ್ತು. ಈ ಬೆನ್ನಲ್ಲೇ ವರದಿಗೆ ಎಚ್ಚೆತ್ತ ಮಾರಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ಆಡಳಿತ 15ನೇ ಹಣಕಾಸು ಯೋಜನೆಯಲ್ಲಿ 1 ಲಕ್ಷದ 60 ಸಾವಿರ ರೂಪಾಯಿ ಅನುದಾನವನ್ನು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಕೂಡಲೇ ಮಂಜೂರು ಮಾಡಿದೆ.
ಸ್ಥಳೀಯ ನಿವಾಸಿ ರಾಜಣ್ಣ ಮಾತನಾಡಿ ರಸ್ತೆ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿಗೆ ಸತತ ಐದು ವರ್ಷಗಳಿಂದ ಮನವಿ ಸಲ್ಲಿಸಿದರೂ ಗ್ರಾಮ ಪಂಚಾಯಿತಿ ಇತ್ತ ಗಮನ ಹರಿಸಲಿಲ್ಲ, ತಮ್ಮ ತೋಟದ ಮನೆಳಿಗೆ ತೆರಳಲು ಇಲ್ಲಿನ ಜನರು ತಾವೇ ಸ್ವತಃ ಹಣ ಹಾಕಿಕೊಂಡು ರಸ್ತೆ ಅಭಿವೃದ್ಧಿ ಮಾಡಿಕೂಳ್ಳುತ್ತಿದ್ದರು. ಇದನ್ನ ಗಮನಿಸಿದ ಗ್ರಾಮ ಪಂಚಾಯಿತಿ ಆಡಳಿತ ಹಾಗೂ ಸದಸ್ಯರಾದ ಚಂದ್ರಣ್ಣನವರು ರಸ್ತೆ ಅಭಿವೃದ್ಧಿಗೆ 15ನೇ ಹಣಕಾಸು ಯೋಜನೆಯಲ್ಲಿ 1,60 ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಿಕೊಟ್ಟಿದ್ದಾರೆ ಗ್ರಾಮ ಪಂಚಾಯತಿ ಸದಸ್ಯ ಚಂದ್ರಶೇಖರ್ ಅವರಿಗೆ ಧನ್ಯವಾದಗಳು ಎಂದು ತಿಳಿಸಿದರು.
ಗ್ರಾಪಂ ಸದಸ್ಯ ಚಂದ್ರಶೇಖರ್ ಮಾತನಾಡಿ ಮಾರಶೆಟ್ಟಿಹಳ್ಳಿ ಗ್ರಾಮದ ಕಾಡುಗೂಲ್ಲ ಸಮುದಾಯದ 20 ಕುಟುಂಬಗಳು ವಾಸಿಸುವ ತೋಟದ ರಸ್ತೆ ಸ್ವತಃ ಅವರೆ ಹಣ ಹಾಕಿಕೊಂಡು ರಸ್ತೆ ಅಭಿವೃದ್ಧಿ ಮಾಡಿಕೂಳ್ಳುತ್ತಿದ್ದರು. ಈ ರಸ್ತೆ ಅಭಿವೃದ್ಧಿಗೆ ಗ್ರಾಮ ಪಂಚಾಯಿತಿ ವತಿಯಿಂದ 15 ನೇ ಹಣಕಾಸು ಯೋಜನೆಯಲ್ಲಿ 1 ಲಕ್ಷ 60 ಸಾವಿರ ಅನುದಾನ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಹಾಲಿಂಗಯ್ಯ, ಈರಣ್ಣ,ಉಮೇಶ್, ಅರುಣ್, ಶಿವಯ್ಯ, ಸೇರಿದಂತೆ ಇತರರು ಹಾಜರಿದ್ದರು.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en
https://youtube.com/@janataa24?si=XsFcych2GMH0O6Gv
https://www.janataa24.com/iasipskas-who-stood-as-the-godfather-of-the/
https://www.janataa24.com/miscreants-uprooted-40-coconut-trees-turuvekere/
Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.