Document

KRS ಪಕ್ಷದ ರಾಜ್ಯ ಉಪಾಧ್ಯಕ್ಷ ಲಿಂಗೇಗೌಡ ದೆಹಲಿಗೆ ಪಾದಯಾತ್ರೆ ತೆರಳುವಾಗ ಸಾವು

Janataa24 NEWS DESK 

KRS ಪಕ್ಷದ ರಾಜ್ಯ ಉಪಾಧ್ಯಕ್ಷ ಲಿಂಗೇಗೌಡ ದೆಹಲಿಗೆ ಪಾದಯಾತ್ರೆ ತೆರಳುವಾಗ ಸಾವು.

ಮಹಿಳೆಯರ ಮೇಲಿನ ಅತ್ಯಾಚಾರ ಗಳಿಗೆ ಅಂತ್ಯ ಹಾಡುವ ನಿಟ್ಟಿನಲ್ಲಿ ಕಠಿಣ ಕಾನೂನು ಜಾರಿಗೊಳಿಸಬೇಕು ,ಅತ್ಯಾಚಾರ ಪ್ರಕರಣಗಳ ಶೀಘ್ರವಿಚಾರಣೆನಡೆಸಿ, ಗರಿಷ್ಠಪ್ರಮಾಣದ ಶಿಕ್ಷೆ ಖಾತರಿಪಡಿಸಬೇಕು ಎಂದು ಆಗ್ರಹಿಸಿ ಮಂಗಳೂರಿನಿಂದ ದೆಹಲಿವರೆಗೆ ಪಾದಯಾತ್ರೆ ಹಮ್ಮಿಕ್ಕೊಂಡು ಗುಜರಾತ್ ನ ಸೂರತ್ ಬಳಿ ಪಾದಯಾತ್ರೆ ಸಾಗುವಾ ವೇಳೆ ಅಪಘಾತ ಉಂಟಾಗಿ ಈ ಅಪಘಾತದಲ್ಲಿ ಕೆ ಆರ್ ಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಎಸ್ ಎಚ್ ಲಿಂಗೇಗೌಡ ಅವರು ಮರಣ ಹೊಂದಿದ್ದಾರೆ.

 

ಮಂಗಳೂರಿನಿಂದ ದೆಹಲಿ ತಲುಪಿ ರಾಷ್ಟ್ರಪತಿಗಳು ಹಾಗು ಪ್ರಧಾನ ಮಂತ್ರಿಯವರಿಗೆ ನೇರವಾಗಿ ಮನವಿ ಸಲ್ಲಿಸಿ ಮಹಿಳೆಯರ ಮೇಲಿನ ಅತ್ಯಾಚಾರ ತಡೆಯಲು ಕಠಿಣ ಕಾನೂನು ರೂಪಿಸಲು ಮನವಿ ಮಾಡುವುದು ತನ್ಮೂಲಕ ಮಹಿಳೆಯರ ಮೇಲಿನ ಅತ್ಯಾಚಾರಕ್ಕೆ ನಾಂದಿಹಾಡಬೇಕು ಎಂಬುವುದು ಈ ತಂಡದ ಉದ್ದೇಶವಾಗಿತ್ತು. ಆಕ್ಟೊಬರ್ ಹದಿನೇಳರಂದು ಮಂಗಳೂರಿನಲ್ಲಿ ಪಾದಯಾತ್ರೆ ಆರಂಭಿಸಿಹ ಈ ತಂಡ ಇಂದು ಐವತ್ತೈದನೆ ದಿನ ಗುಜರಾತಿನ ಸೂರತ್ ಹಾಗು ಆಹಮದಬಾದಿನ ನಡುವೆ ಪಾದಯಾತ್ರೆಸಾಗಿತ್ತು.
KRS ಪಕ್ಷದ ರಾಜ್ಯ ಉಪಾಧ್ಯಕ್ಷ ಲಿಂಗೇಗೌಡ ದೆಹಲಿಗೆ ಪಾದಯಾತ್ರೆ ತೆರಳುವಾಗ ಸಾವು

 

ಮೂಲತಃ ಕೆ ಆರ್ ಎಸ್ ಪಕ್ಷದ ಕಾರ್ಯಕರ್ತರಾದ ಮಂಗಳೂರಿನ ಪ್ರವೀಣ್ ನೇತೃತ್ವದಲ್ಲಿ ಮಂಗಳೂರಿನ ಮೂಸ ಷರಿಪ್ , ನೌಪುಲ್ ಅಬ್ಬಾಸ್, ಬಾಲಕೃಷ್ಣ, ಶುಕ್ರ ಆಹಮದ್, ಹಮ್ಝಾ ಅವರು ಪಾದಯಾತ್ರೆ ರೂಪಿಸಿದ್ದರು ಎಸ್ ಎಚ್ ಲಿಂಗೇಗೌಡರು ಇವರೊಟ್ಟಿಗೆ ಸೇರಿ ಪಾದಯಾತ್ರೆ ಮಾಡುವಾ ಸಂದರ್ಭದಲ್ಲಿ ವಾಹನ ಪಾದಯಾತ್ರಿಗಳ ಮೇಲೆ ಹರಿದ ಪರಿಣಾಮ ಈ ಅವಘಡ ಸಂಭವಿಸಿ ಎಸ್ ಎಚ್ ಲಿಂಗೇಗೌಡ ಮತ್ತು ಮತ್ತೊಬ್ಬ ಪಾದಯಾತ್ರಿ ಮಂಗಳೂರಿನ ಕುಂಜಿ ಮೂಸಾ ಎಂಬುವವರು ಮರಣ ಹೊಂದಿದ್ದಾರೆ.(ಏಜೆನ್ಸೀಸ್)

 

 

 

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/iasipskas-who-stood-as-the-godfather-of-the/

https://www.janataa24.com/miscreants-uprooted-40-coconut-trees-turuvekere/

Murudeshwara: ಮುರುಡೇಶ್ವರ ಸಮುದ್ರದಲ್ಲಿ ಈಜಲು ಹೋಗಿ ನಾಲ್ವರು ವಿದ್ಯಾರ್ಥಿನಿಯರು ಸಾವು.

Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.

Document

Leave a Reply

Your email address will not be published. Required fields are marked *