Document

Gubbi: ಎನ್‌ಡಿಎ ಕಾರ್ಯಕರ್ತರಿಂದ ಕೈ,ಕಾರ್ಯಕರ್ತರಿಗೆ ಖಡಕ್ ಎಚ್ಚರಿಕೆ.

Janataa24 NEWS DESK 

 

Gubbi: ಎನ್‌ಡಿಎ ಕಾರ್ಯಕರ್ತರಿಂದ ಕೈ ಕಾರ್ಯಕರ್ತರಿಗೆ ಖಡಕ್ ಎಚ್ಚರಿಕೆ.

Gubbi: ಎನ್‌ಡಿಎ ಕಾರ್ಯಕರ್ತರಿಂದ ಕೈ,ಕಾರ್ಯಕರ್ತರಿಗೆ ಖಡಕ್ ಎಚ್ಚರಿಕೆ.

 

 

ಗುಬ್ಬಿ : ಬಿಜೆಪಿ ಮುಖಂಡ ಎಸ್ ಡಿ ದಿಲೀಪ್ ಕುಮಾರ್ ಬಗ್ಗೆ ಹಗುರವಾಗಿ ಮಾತನಾಡಿದರೆ ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ವೆಂಕಟೇಶ್ ಗೆ ನಮ್ಮ ಕಾರ್ಯಕರ್ತರೇ ಗೇರಾವ್ ಹಾಕುತ್ತಾರೆ ಎಂಬ ಎಚ್ಚರಿಕೆಯ ಸಂದೇಶವನ್ನು ನಾವು ನೀಡುತ್ತಿದ್ದೇವೆ ಎಂದು ಎನ್‌ಡಿಎ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

 

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಎನ್ ಡಿ ಎ ಮುಖಂಡರು ಪತ್ರಿಕಾಗೋಷ್ಠಿ ನಡೆಸಿ ಕಾಂಗ್ರೆಸ್ ಪಕ್ಷ ಹಾಗೂ ಕೆ ಆರ್ ವೆಂಕಟೇಶ್ ವಿರುದ್ಧ ತೀವ್ರಕಿಡಿ ಕಾರಿದರು.

 

ಬಿಜೆಪಿ ತಾಲ್ಲೂಕು ಅಧ್ಯಕ್ಷ ಅಧ್ಯಕ್ಷ ಪಂಚಾಕ್ಷರಿ ಮಾತನಾಡಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ಎನ್ ಡಿ ಎ ಕಾರ್ಯಕರ್ತರು ಯಾವುದೇ ರಾಜಕೀಯ ಬಳಸದೆ ಜಿಲ್ಲೆಯ ನೀರಾವರಿ ಉಳಿವಿಗಾಗಿ ಹೋರಾಟ ಮಾಡುತ್ತಿದ್ದಾರೆ. ಈ ಹೋರಾಟವನ್ನು ಹತ್ತಿಕ್ಕುವ, ಹಳ್ಳ ಹಿಡಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ಕೆ ಆರ್ ವೆಂಕಟೇಶ್ ಎನ್ ಡಿ ಎ ಪಕ್ಷದ ನಾಯಕರ ಮೇಲೆ ವೈಯಕ್ತಿಕವಾಗಿ ಟೀಕೆಯನ್ನು ಮಾಡುವುದು, ಏಕವಚನದಲ್ಲಿ ನಿಂದಿಸುವುದು ತರವಲ್ಲ ತಾಲೂಕಿನ ಶಾಸಕರು ಇದನ್ನು ತಿದ್ದುವ ಕೆಲಸ ಮಾಡಬೇಕು. ಶಾಸಕರು ಮಾತ್ರ ಪತ್ರಿಕೆಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ನಾನು ಎಕ್ಸ್ ಪ್ರೆಸ್ ಲಿಂಕ್ ವಿರೋಧಿ ಎಂದು ತಿಳಿಸಿದ್ದಾರೆ. ಎಕ್ಸ್ ಪ್ರೆಸ್ ಕೆನಾಲ್ ವಿರುದ್ಧ ಮಾನ್ಯ ಮುಖ್ಯಮಂತ್ರಿಗಳ ಬಳಿ ಅಥವಾ ಸಂಬಂಧ ಪಟ್ಟ ಸಚಿವರ ಬಳಿ ಈ ವಿಷಯದ ಬಗ್ಗೆ ಪ್ರಸ್ತಾಪ ಸಲ್ಲಿಸಿಲ್ಲ, ಸಲ್ಲಿಸಿದ್ದರೆ ತಮ್ಮ ಆಧಾರ ಸಹಿತ ದಾಖಲೆಗಳನ್ನು ಮಾಧ್ಯಮಗಳ ಮೂಲಕ ಬಿಡುಗಡೆ ಗೊಳಿಸಬೇಕು

ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಕೂಡಲೇ ನಿಲ್ಲಿಸಬೇಕು ಹಾಗೂ ತಮ್ಮ ಕಾರ್ಯಕರ್ತರ ವೈಯಕ್ತಿಕ ನಿಂದನೆ ಮಾಡುವುದನ್ನು ನಿಲ್ಲಿಸಬೇಕು ಎಂದ ಅವರು ತಾಲೂಕಿನ ಬಿಕ್ಕೆಗುಡ್ಡ ಹಾಗೂ ಹಾಗಲವಾಡಿಕೆರೆಗೆ ಹಣವನ್ನು ಯಾವಾಗ ಬಿಡುಗಡೆ ಮಾಡುತ್ತೀರಾ ಹೇಳಿ ಎಂದು ಶಾಸಕರನ್ನು ಪ್ರಶ್ನಿಸಿದರು.

 

ಕೆಎಂಎಫ್ ಮಾಜಿ ಅಧ್ಯಕ್ಷ ಚಂದ್ರಶೇಖರ್ ಮಾತನಾಡಿ ಕೆ ಆರ್ ವೆಂಕಟೇಶ್ ದಿಲೀಪ್ ಕುಮಾರ್ ಅವರನ್ನು ಮೈನಿಂಗ್ ಕಳ್ಳ ಎಂದು ಕರೆಯುತ್ತಿದ್ದಾರೆ. ನಿಜವಾದ ಮೈನಿಂಗ್ ಕಳ್ಳ ಯಾರು ಎಂದು ಇಂದು ಎಲ್ಲರಿಗೂ ತಿಳಿದಿದೆ. ಶಾಸಕರ ಪತ್ನಿ 20 ಕೋಟಿ ದಂಡ ಕಟ್ಟಿರುವುದು ಗೊತ್ತಿದೆ. ವ್ಯಕ್ತಿ ನಿಂದನೆ ಮಾಡುವುದು ನಿಮ್ಮ ಘನತೆಗೆ ಶೋಭೆ ತರುವುದಿಲ್ಲ. ತಾಲೂಕಿನಲ್ಲಿ ವೈಯಕ್ತಿಕ ಟೀಕೆ ಟಿಪ್ಪಣಿಗಳನ್ನು ಹೊರತುಪಡಿಸಿ ಹೇಮವತಿ ಎಕ್ಸ್ಪ್ರೆಸ್ ಕಾಮಗಾರಿ ಹೋರಾಟಕ್ಕೆ ಪಕ್ಷಾತೀತವಾಗಿ ಎಲ್ಲರೂ ಕೈಜೋಡಿಸಬೇಕು ಇಲ್ಲದಿದ್ದರೆ ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ತುಮಕೂರು ಜಿಲ್ಲೆಗೆ ಮರಣ ಶಾಸನವಾಗಲಿದೆ ಎಂದು ಕಿಡಿ ಕಾರಿದರು .

 

ಸಾಗರನಹಳ್ಳಿ ವಿಜಯಕುಮಾರ್ ಮಾತನಾಡಿ ಮುಂಬರುವ ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯ್ತಿ ಚುನಾವಣೆಗಾಗಿ ಬಿಜೆಪಿ ಮುಖಂಡರು ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಲ್ ಹೋರಾಟ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಹೇಳಿಕೆ ನೀಡಿದ್ದಾರೆ. ಇದು ಸತ್ಯಕ್ಕೆ ದೂರವಾದದ್ದು, ಎಕ್ಸ್ಪ್ರೆಸ್ ಕ್ಯಾನಲ್ ಹೋರಾಟ ಯಶಸ್ವಿಯಾಗುತ್ತಿರುವುದನ್ನು ತಿಳಿದು ಸುಳ್ಳು ಹೇಳುವ ಮೂಲಕ ಹೋರಾಟವನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ವೈಯಕ್ತಿಕ ನಿಂದನೆ ಮಾಡುವ ಮೂಲಕ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ವೈಯಕ್ತಿಕ ನಿಂದನೆ ಮಾಡುವುದು ಕಾಂಗ್ರೆಸ್ ನ ಸಂಸ್ಕೃತಿ ಎಂದು ವಾಗ್ದಾಳಿ ನಡೆಸಿದರು.

 

ಗ್ರಾಮ ಪಂಚಾಯತಿ ಸದಸ್ಯ ವಿದ್ಯಾ ಸಾಗರ್ ಮಾತನಾಡಿ ದಲಿತ ಮುಖಂಡ ಕೋಡಿಯಾಲ ಮಹಾದೇವ್ ರವರು ದಿಲೀಪ್ ಕುಮಾರ್ ಒಬ್ಬ ದಲಿತ ವಿರೋಧಿ ಎಂದು ಹೇಳಿಕೆಯನ್ನು ನೀಡಿರುವುದು ಸರಿಯಲ್ಲ ದಿಲೀಪ್ ಕುಮಾರ್ ರವರು ಒಬ್ಬ ದಲಿತ ಬಂಧುವಾಗಿದ್ದಾರೆ. ನಾನು ಕೂಡ ಒಬ್ಬ ದಲಿತ ಮುಖಂಡನಾಗಿದ್ದು ಅವರ ನಡೆ ನುಡಿಯನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ ದಲಿತರ ಮನೆಯಲ್ಲಿ ಊಟ ಮಾಡಿ ದಲಿತರ ಕೇರಿಯಲ್ಲಿ ಮಲಗುತ್ತಾರೆ. ಅಂತಹ ವ್ಯಕ್ತಿಯ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ.

ಕಾಂಗ್ರೆಸ್ ಅಧ್ಯಕ್ಷ ಕೆ ಆರ್ ವೆಂಕಟೇಶ್ ಒಬ್ಬ ನಿಜವಾದ ದಲಿತ ವಿರೋಧಿ. ಸುಮಾರು ದಿನಗಳ ಹಿಂದೆ ದಲಿತ ಪತ್ರಕರ್ತರ ಮೇಲೆ ಜಾತಿ ನಿಂದನೆ ಮಾಡಿ ಅವಮಾನಿಸಿರುವ ಆಡಿಯೋ ಸಹ ವೈರಲ್ ಆಗಿದೆ ತಾಲೂಕಿನ ಜನತೆಗೂ ಸಹ ಅದು ತಿಳಿದಿದೆ. ಪತ್ರಕರ್ತರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದಾಗ ನಾಲ್ಕು ತಿಂಗಳು ನಾಪತ್ತೆಯಾಗಿದ್ದರು ಈಗ ಹೇಳಿ ದಲಿತ ವಿರೋಧಿ ಯಾರು ಎಂದು ಕೆ ಆರ್ ವೆಂಕಟೇಶ್ ವಿರುದ್ಧ ಕಿಡಿ ಕಾರಿದರು.

 

ಸುದ್ದಿಗೋಷ್ಠಿಯಲ್ಲಿ ಎನ್ ಡಿ ಎ ಮುಖಂಡರಾದ ಸುರೇಶ್ ಗೌಡ, ಜಿ ಎನ್ ಅಣ್ಣಪ್ಪಸ್ವಾಮಿ, ಶಿವಕುಮಾರ್, ಕೃಷ್ಣಮೂರ್ತಿ, ನರಸಿಂಹಮೂರ್ತಿ, ಮೋಹನ್, ಪ್ರಮೋದ್, ಹೊನ್ನಪ್ಪ,ಯತೀಶ್ ಸೇರಿದಂತೆ ಇತರರು ಹಾಜರಿದ್ದರು.

ವರದಿ: ಶ್ರೀಕಾಂತ್ ಗುಬ್ಬಿ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/iasipskas-who-stood-as-the-godfather-of-the/

https://www.janataa24.com/miscreants-uprooted-40-coconut-trees-turuvekere/

KRS ಪಕ್ಷದ ರಾಜ್ಯ ಉಪಾಧ್ಯಕ್ಷ ಲಿಂಗೇಗೌಡ ದೆಹಲಿಗೆ ಪಾದಯಾತ್ರೆ ತೆರಳುವಾಗ ಸಾವು

Mandya: ಪತ್ನಿ ನೇಣಿಗೆ ಶರಣಾದದನ್ನು ಕಂಡು ಕೆರೆಗೆ ಹಾರಿ ಪ್ರಾಣ ಬಿಟ್ಟ ಪತಿ.

Document

Leave a Reply

Your email address will not be published. Required fields are marked *