Document

Pavagada: ದಲಿತರನ್ನು ಕಡೆಗಣಿಸಿ ಬಗರ್ ಹುಕುಂ ಸಾಗುವಳಿ ಕಮಿಟಿ ರಚನೆ..!

Janataa24 NEWS DESK 

 

Pavagada: Formation of Bagar Hukum Cultivation Committee Ignored Dalits..!

Pavagada: Formation of Bagar Hukum Cultivation Committee ignoring Dalits..!
ಪಾವಗಡ: ಬಗರ್ ಹುಕುಂ ಸಾಗುವಳಿ ಕಮಿಟಿಯಲ್ಲಿ ದಲಿತರನ್ನು ಕಡೆಗಣಿಸಿ ಸಮಿತಿ ಮಾಡಲಾಗಿದೆ. ಎಂದು ಆಮ್ ಆದ್ಮಿ ಪಾರ್ಟಿಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎನ್.ರಾಮಾಂಜಿನಪ್ಪ ಆರೋಪಿಸಿದ್ದಾರೆ.

 

ಪಾವಗಡ ಪಟ್ಟಣದ ಆಮ್ ಆದ್ಮಿ ಪಕ್ಷದ ಕಚೇರಿಯಲ್ಲಿ ಪತ್ರಿಕ ಗೋಷ್ಠಿ ನಡೆಸಿ ಮಾತನಾಡಿದ ಅವರು ತಾಲ್ಲೂಕಿನ ಬಹುಸಂಖ್ಯಾತರು ದಲಿತ ಜನಸಂಖ್ಯೆ ಹೊಂದಿರುವ ತಾಲೂಕು ಇದಾಗಿದ್ದು ದಲಿತರನ್ನು ಕಡೆಗಣಿಸಿ ಸಮೀತಿ ಮಾಡಲಾಗಿದೆ.

 

ಸಾಗುವಳಿ ಮಾಡುತ್ತಿರುವ ಬಡ ರೈತರ ಜಮೀನುಗಳನ್ನು ಸಕ್ರಮಗೊಳಿಸಿ ಅತೀ ಜರೂರಾಗಿ ಸಾಗುವಳಿ ಚೀಟಿ ನೀಡಲು ಕೋರಿ ಮನವಿ.

 

ಸರ್ಕಾರ ಈಗಾಗಲೇ ತಾಲೂಕುವಾರು ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ರಚನೆಯಾಗಿ ಐದು ತಿಂಗಳಾದರು ತಹಶೀಲ್ದಾರ್ ಒಂದು ಸಭೆ ಮಾಡಿಲ್ಲ.

 

ತಾಲ್ಲೂಕಿನಲ್ಲಿ ನಂಜುಂಡಪ್ಪ ವರದಿ ಪ್ರಕಾರ ತುಮಕೂರು ಜಿಲ್ಲೆ, ಪಾವಗಡ ತಾಲ್ಲೂಕು ಅತೀ ಹಿಂದುಳಿದ ತಾಲ್ಲೂಕು ಆಗಿದ್ದು ಸತತ ಮಳೆ ಬೆಳೆ ಇಲ್ಲದೆ ಬರಪೀಡಿತ ಪ್ರದೇಶವೆಂದು ಘೋಷಣೆಯಾಗಿರುವ ನಮ್ಮ ತಾಲ್ಲೂಕಿನಲ್ಲಿ ಅತೀ ಹೆಚ್ಚಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದೂಳಿದ ವರ್ಗದ ಬಡವರೇ ಹೆಚ್ಚಾಗಿ ಇರುವಂತಹ ಪಾವಗಡ ತಾಲ್ಲೂಕಿನಲ್ಲಿ ಈಗಾಗಲೇ ಸುಮಾರು 25-30 ವರ್ಷಗಳಿಂದ ಬಡ ರೈತರು ತುಂಡು ಭೂಮಿಗಳಲ್ಲಿ ಬಗರ್‌ಹುಕುಂ ಸಾಗುವಳಿ ಮಾಡುತ್ತಾ ಅಕ್ರಮ ಸಾಗುವಳಿಯನ್ನು ಸಕ್ರಮ ಮಾಡಿ ಸಾಗುವಳಿ ಚೀಟಿ ನೀಡಲು ಕೋರಿ ಸರ್ಕಾರ ನಿಗದಿ ಪಡಿಸಿದ್ದ ಅವದಿಯಲ್ಲಿ ಅರ್ಜಿ ಸಲ್ಲಿಸಿರುವುದು ಸರಿಯಷ್ಟೆ.

 

ಸಾಗುವಳಿ ಚೀಟಿ ನೀಡುವಂತೆ ಕೋರಿ ರೈತರ ಪರವಾಗಿ ಹಲವಾರು ಬಾರಿ ರೈತ ಸಂಘಟನೆಗಳು ಮತ್ತು ಇತರೆ ಸಂಘ ಸಂಸ್ಥೆಗಳು, ಇತರೇ ಪಕ್ಷಗಳು ತಾಲ್ಲೂಕು ಕಛೇರಿ ಕಂದಾಯ ಇಲಾಖೆ ಮುಂಭಾಗ ಹೋರಾಟಗಳನ್ನು ಮಾಡಿ ತಹಶೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮತ್ತು ಸಂಬಂದಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಉದಾಹರಣೆಗಳಿವೆ. ಆದರೂ ಸಹ ಬಗರ್‌ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ರಚನೆಯಾಗಿ ಸುಮಾರು 3 ತಿಂಗಳು ಕಳೆದರು ಸಹ ಇದುವರೆಗೆ ತಾಲ್ಲೂಕು ಆಡಳಿತ (ಕಂದಾಯ ಇಲಾಖೆ) ಯಾವುದೇ ಕ್ರಮ ಕೈಗೊಂಡು ಸಭೆ ಕರೆದಿರುವುದಿಲ್ಲ.

 

ಈಗಾಗಲೇ ತಾಲ್ಲೂಕಿನ ರಾಷ್ಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸೋಲಾರ್ ಪಾರ್ಕ ಸ್ಥಾಪನೆ ಮಾಡುತ್ತಿರುವುದು ಸಂತೋಷ ಮತ್ತು ಸ್ವಾಗತಾರ್ಹ.

 

ಆದರೆ ಕ್ಯಾಪ್ಪೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸೋಲಾರ್ ಪಾರ್ಕ್ ಮಾಡಲು ಉದ್ದೇಶಿಸಿ ರೈತರ ಜಮೀನುಗಳನ್ನು ಪಡೆಯುವ ಮುಂಚಿತವಾಗಿ ಬಗರ್‌ಹುಕುಂ ಸಾಗುವಳಿ ಮಾಡುತ್ತಿರುವ ರೈತರ ಕುಟುಂಬಗಳಿಗೆ ಸಾಗುವಳಿ ಚೀಟಿ ಮಂಜೂರು ಮಾಡಲು ಸೂಕ್ತ ಕ್ರಮ ಕೈಗೊಂಡು ರೈತರ ಹಿತರಕ್ಷಣೆ ಮಾಡಬೆಕಾಗಿರುತ್ತದೆ.ತಕ್ಷಣವೇ ದಲಿತರನ್ನು ಸಮಿತಿಯಲ್ಲಿ ಸೇರಿಸಿಕೊಳ್ಳಬೇಕು ಹಾಗೂ ತತ್ ಕ್ಷಣ ದಂಡಾಧಿಕಾರಿ ಸಭೆ ಕರೆಯಬೇಕು ಎಂದರು.

ವರದಿ: ರೆಹಮಾನ್ ಉಲ್ಲಾ ಪಾವಗಡ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://youtube.com/@janataa24?si=XsFcych2GMH0O6Gv

https://www.janataa24.com/iasipskas-who-stood-as-the-godfather-of-the/

https://www.janataa24.com/miscreants-uprooted-40-coconut-trees-turuvekere/

IAS,IPS,KAS, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಗಾಡ್ ಫಾದರ್ ಆಗಿ ನಿಂತ ಮೂರ್ತಿ ಸಿ ಎಸ್.

 

Document

Leave a Reply

Your email address will not be published. Required fields are marked *