Janataa24 NEWS DESK

ತುರುವೇಕೆರೆ: ಪಟ್ಟಣದ ದಬ್ಬೇಘಟ್ಟ ರಸ್ತೆಯಲ್ಲಿರುವ ಪ್ರಿಯಾ ಆಂಗ್ಲ ಶಾಲೆಯ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಸಿಂಚನ ಎಂ ಬಿ, 2023-24 ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ 607 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನದ ಕೀರ್ತಿ ತಂದುಕೊಟ್ಟಿದ್ದರು,
ಈಗ ಅದೇ ವಿದ್ಯಾರ್ಥಿನಿ ಸಿಂಚನ ಎಂ ಬಿ ಅವರ ಪೋಷಕರು ಉತ್ತರ ಪತ್ರಿಕೆಯನ್ನು ಮರು ಮೌಲ್ಯಮಾಪನ ಮಾಡಿಸಲಾಗಿ, ಮತ್ತೆ ವಿದ್ಯಾರ್ಥಿನಿಗೆ ಏಳು ಅಧಿಕ ಅಂಕ ಲಭಿಸಿದೆ, ಇದರಿಂದಾಗಿ ವಿದ್ಯಾರ್ಥಿನಿ ಸಿಂಚನ ಎಂ ಬಿ ಅವರಿಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯ ಮರು ಮೌಲ್ಯಮಾಪನ ಫಲಿತಾಂಶದಿಂದಾಗಿ ಏಳು ಅಂಕ ದೊರೆತು ತಾಲೂಕಿಗೆ ಪ್ರಥಮ ಸ್ಥಾನದಲ್ಲಿದ್ದಾರೆ,
ಇನ್ನು ಈ ಫಲಿತಾಂಶದಿಂದಾಗಿ ಪ್ರಿಯಾ ಆಂಗ್ಲ ಶಾಲೆಯ ವಿದ್ಯಾರ್ಥಿನಿ ಸಿಂಚನ ಎಂ ಬಿ, ರಾಜ್ಯಕ್ಕೆ 8ನೇ ಸ್ಥಾನ ತಂದುಕೊಟ್ಟಿದ್ದು ಪೋಷಕರು, ಮತ್ತು ಶಾಲೆ, ಹಾಗೂ ಶಿಕ್ಷಕ ವರ್ಗಕ್ಕೂ ಎಲ್ಲಿಲ್ಲದ ಸಡಗರ ಮನೆಮಾಡಿದ್ದು, ಅವರಿಗೆ ಅಭಿನಂದನೆಯನ್ನು ಕೂಡ ಸಲ್ಲಿಸಿದ್ದಾರೆ, ಒಟ್ಟಾರೆ ತುರುವೇಕೆರೆ ತಾಲೂಕಿನಲ್ಲೂ ವಿದ್ಯಾರ್ಥಿನಿಯರದ್ದೇ ಮೇಲುಗೈ ಎಂಬದು ಮತ್ತೊಮ್ಮೆ ಸಾಬೀತಾದಂತಾಗಿದೆ.