Document

Turuvekere: ಗುಬ್ಬಿ ಶಾಸಕರಿಗೆ ತಾಕತ್ತಿನ ಸವಾಲು ಹಾಕಿದ ತುರುವೇಕೆರೆ ಜೆಡಿಎಸ್ ಮುಖಂಡ.

JDS  Leader From Turuvekere challenged The Gubbi MLA.

ತುರುವೇಕೆರೆ:

ಏನಿದು ಪ್ರಕರಣ.

ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ಕಾಮಗಾರಿಯ ವಿರುದ್ಧ ಈಗಾಗಲೇ ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್(Hemavathi Express Link Canal) ವಿರೋಧಿ ಹೋರಾಟ ಸಮಿತಿಯಿಂದ, ತುರುವೇಕೆರೆ ಶಾಸಕ ಎಂಟಿ ಕೃಷ್ಣಪ್ಪ (MT Krishnappa)ನೇತೃತ್ವದಲ್ಲಿ ಗುಬ್ಬಿ ತಾಲೂಕಿನ, ಡಿ ರಾಂಪುರದಲ್ಲಿ ಜಿಲ್ಲೆಯ ವಿವಿಧಪರ ಸಂಘಟನೆಗಳು, ಮಠಾಧೀಶರು, ರೈತ ಬಾಂಧವರು ,ಇನ್ನು ಅನೇಕ ತಾಲೂಕಿನ ಮುಖಂಡರು ತುಮಕೂರು ಜಿಲ್ಲೆಯ ನೀರನ್ನು ರಾಮನಗರ(Ramanagara) ಜಿಲ್ಲೆಗೆ ಕೊಂಡೊಯ್ಯಲು ಮಾಡಿದಂತ ಕಾಮಗಾರಿಯ ವಿರುದ್ಧ ಈಗಾಗಲೇ ಹೋರಾಟ ನಡೆಸಿದ್ದಾರೆ.

 

 

 

ಇದರ ಬೆನ್ನಲ್ಲೇ ಎರಡು ದಿನಗಳ ಹಿಂದಷ್ಟೇ ಗುಬ್ಬಿ ಶಾಸಕರಾದ ಶ್ರೀನಿವಾಸ್ ಅವರು ತುರುವೇಕೆರೆ ಶಾಸಕರ ವಿರುದ್ಧ ಮಾತನಾಡಿರುವ ಸಂಗತಿಗಳು ಈಗಾಗಲೇ ಮಾಧ್ಯಮದಲ್ಲಿ ಪ್ರಸಾರವಾಗಿದೆ, ಮಾಧ್ಯಮದ ಮುಂದೆ ಮಾತನಾಡುವಾಗ ಗುಬ್ಬಿ ಶಾಸಕ ಶ್ರೀನಿವಾಸ ಅವರು ತುರುವೇಕೆರೆ ಶಾಸಕ ಎಂ.ಟಿ,ಕೃಷ್ಣಪ್ಪನವರ ವಿರುದ್ಧ ನಿಮ್ಮಪ್ಪನಿಗೆ ನೀನು ಹುಟ್ಟಿದ್ರೆಮತ್ತು ಕೊರಳ ಪಟ್ಟಿ ಹಿಡಿಯುತ್ತೇನೆ,ಅನ್ನುವ ಪದ ಜೆಡಿಎಸ್ ಕಾರ್ಯಕರ್ತರನ್ನು ಕೆರಳಿಸಿದೆ.

 

ಇದರ ಬೆನ್ನಲ್ಲೇ ಭಾನುವಾರ ತುರುವೇಕೆರೆ ಜಾತ್ಯಾತೀತ ಜನತಾದಳದ ಕಚೇರಿಯಲ್ಲಿ  ಮಾಧ್ಯಮಗೋಷ್ಠಿ ನಡೆಸಿ, ಜೆಡಿಎಸ್ ಮುಖಂಡ ವೆಂಕಟಾಪುರ ಯೋಗೀಶ್ ಮಾತನಾಡಿ, ಗುಬ್ಬಿ ಶಾಸಕ ಶ್ರೀನಿವಾಸ್ ಅವರಿಗೆ ನಿನಗೆ ತಾಕತ್ತು ಇದ್ದರೆ ನೀನೇ ಸಮಯವನ್ನು ಗುರುತು ಮಾಡು, ಅವತ್ತು ನಾವೇ ಗುಬ್ಬಿಗೆ ಬರುತ್ತೇವೆ , ಆಗ ನಮ್ಮ ಶಾಸಕರ ಕೊರಳ ಪಟ್ಟಿ ಹಿಡಿದು ಮಾತನಾಡುತ್ತೀಯ, ನೀನು ಏನೇ ಮಾಡಿದರು ನಮ್ಮ ತುರುವೇಕೆರೆ ಶಾಸಕ ಎಂ ಟಿ ಕೃಷ್ಣಪ್ಪನವರ ಒಂದು ಕೂದಲನ್ನು ಸಹ ಅಲ್ಲಾಡಿಸಲು ಸಾಧ್ಯವಿಲ್ಲ ಎಂದು ಜೆಡಿಎಸ್ ಮುಖಂಡ ವೆಂಕಟಪುರ ಯೋಗೇಶ್ ಗುಬ್ಬಿ ಶಾಸಕ ಶ್ರೀನಿವಾಸ್ ಅವರಿಗೆ ತಾಕತ್ತಿನ ಸವಾಲ್ ಹಾಕಿದ್ದಾರೆ, ಜೊತೆಗೆ ನಮ್ಮ ಶಾಸಕರು ನಿಮ್ಮ ಬಗ್ಗೆ ನಿಮ್ಮ ಹೆಸರನ್ನು ಎತ್ತಿ ಎಲ್ಲಾದರೂ ಬೈದಿರುವ ಒಂದು ವಿಡಿಯೋ ತೋರಿಸು ಸಾಕು ನೋಡೋಣ, ಇನ್ನು ಮುಂದೆ ಏನಾದರೂ ನಮ್ಮ ಶಾಸಕರ ವಿರುದ್ಧ ಮಾತನಾಡಿದರೆ ಸರಿ ಇರುವುದಿಲ್ಲ ಎಂದು ಗುಬ್ಬಿ ಶಾಸಕರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

 

ಇದೇ ಸಂದರ್ಭದಲ್ಲಿ ತುರುವೇಕೆರೆ ಜೆಡಿಎಸ್ ಪಕ್ಷದ ಅಧ್ಯಕ್ಷ, ದೊಡ್ಡೇಗೌಡ, ರಾಮೇಗೌಡ, ತುರುವೇಕೆರೆ ಟೌನ್ ಬ್ಯಾಂಕ್ ನಿರ್ದೇಶಕ ಬಡಾವಣೆ ಶಿವರಾಜು, ತಿಮ್ಮೇಗೌಡ, ಮಾದಿಹಳ್ಳಿ ಕಾಂತಣ್ಣ, ಇನ್ನು ಅನೇಕರು ಉಪಸ್ಥಿತರಿದ್ದರು.

ವರದಿ: ಮಂಜುನಾಥ್ ಕೆ ಎ ತುರುವೇಕೆರೆ.

ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv

 

https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en

https://www.janataa24.com/turuvekere-tahsildar-responded-to-the-hunger/

 

https://www.janataa24.com/tumkur-animal-is-burnt-alive-by-a-thunderbolt/

 

Document

Leave a Reply

Your email address will not be published. Required fields are marked *