Tururvekere, : ಬಾಣಸಂದ್ರ ಗ್ರಾಮ ಪಂಚಾಯತಿ ನೂತನ ಅಧ್ಯಕ್ಷೆಯಾಗಿ ಭವ್ಯಸುರೇಶ್ ಅವಿರೋಧ ಆಯ್ಕೆ.
Janataa24 NEWS DESK

Turuvekere: Bhavya Suresh was Unanimously Elected as the New Chairperson of Banasandra Gram Panchayat.
ತುರುವೇಕೆರೆ: ತಾಲೂಕಿನ ಬಾಣಸಂದ್ರ ಗ್ರಾಮ ಪಂಚಾಯಿತಿಯಲ್ಲಿ 18 ಸದಸ್ಯ ಬಲಹುಳ್ಳ ಪಂಚಾಯಿತಿಗೆ ಈ ಹಿಂದೆ ಅಧ್ಯಕ್ಷ ಸ್ಥಾನದಲ್ಲಿದ್ದ ಲಲಿತ ಎಂ, ಆರ್, ಅವರ ರಾಜೀನಾಮೆಯಿಂದ ಒಂದು ತಿಂಗಳು ಕಾಲ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಯಾರು ಸಹ ನಾಮಪತ್ರ ಸಲ್ಲಿಸದೆ, ಸದಸ್ಯೆಯಾದ ಭವ್ಯ ಸುರೇಶ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದು, ಚುನಾವಣಾ ಅಧಿಕಾರಿಯಾಗಿ(Election Officer) ಕಾರ್ಯನಿರ್ವಹಿಸಿದ ತಾಲೂಕು ದಂಡಾಧಿಕಾರಿ ವೈ ಎಂ ರೇಣು ಕುಮಾರ್(YM Renu Kumar) ಅವರು ಭವ್ಯಸುರೇಶ್ ಅವರನ್ನು ಅಧ್ಯಕ್ಷರಾಗಿ ಘೋಷಣೆ ಮಾಡಿ ಅವಿರೋಧವಾಗಿ ಆಯ್ಕೆ ಮಾಡಿದರು.
ಇದೇ ವೇಳೆ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಭವ್ಯ ಸುರೇಶ್ ಮಾತನಾಡಿ ನಾನು ಈ ಸ್ಥಾನವನ್ನು ಅಲಂಕರಿಸಲು ಬೆಂಬಲ ನೀಡಿದ ಎಲ್ಲಾ ಸರ್ವ ಸದಸ್ಯರಿಗೂ ಮತ್ತು ಮುಖ್ಯವಾಗಿ ಸಹೋದರ ಯೋಗೀಶ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಮುಂದುವರೆದು ಮಾತನಾಡಿದ ಅವರು ಬಾಣಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಗಳಿಗೂ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ನನ್ನ ಮುಖ್ಯ ಜವಾಬ್ದಾರಿಯಾಗಿದೆ, ಅದನ್ನು ಶ್ರದ್ದೆಯಿಂದ ಯಾವುದೇ ಗೊಂದಲಗಳಿಗೆ ಎಡೆ ಮಾಡಿಕೊಡದೆ ಕಾರ್ಯನಿರ್ವಹಿಸುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಅಧ್ಯಕ್ಷೆಯ ಸಹೋದರ ವೆಂಕಟಪುರ ಯೋಗೀಶ್ ಮಾತನಾಡಿ ಮೊದಲಿಗೆ ನನ್ನ ಸಹೋದರಿ ಈ ಅಧ್ಯಕ್ಷ ಸ್ಥಾನ ಅಲಂಕರಿಸಲು ಸರ್ವ ಸದಸ್ಯರು ಬೆಂಬಲವನ್ನ ನೀಡಿದ್ದು ಹಾಗೆ ನಮ್ಮ ತಾಲೂಕಿನ ಶಾಸಕರಾದ ಎಂ ಟಿ ಕೃಷ್ಣಪ್ಪನವರ ಬೆಂಬಲ ಹಾಗೂ ಆಶೀರ್ವಾದ ಕೂಡ ಇದ್ದು, ಅವರಿಗೆ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ, ನನ್ನ ಸಹೋದರಿ ಈಗಾಗಲೇ ಎಲ್ಎಲ್ ಬಿ ವ್ಯಾಸಂಗ ಮುಗಿಸಿದ್ದು ಜನಸಾಮಾನ್ಯರ ಕಷ್ಟ ಸುಖಗಳ ಹಾಗೂ ಹೋಗುಗಳ ಅರಿವು ಅವರಿಗಿದೆ, ಹಾಗಾಗಿ ಈ ಪಂಚಾಯಿತಿಯಲ್ಲಿ ನಿಷ್ಠೆಯಿಂದ, ಶ್ರದ್ಧೆಯಿಂದ, ಪ್ರತಿ ಗ್ರಾಮದ ಮೂಲಭೂತಸೌಕರ್ಯದ ಕಡೆ ಹೆಚ್ಚು ಗಮನ ಹರಿಸುತ್ತಾರೆ ಎಂದು ಸಂತಸ ವ್ಯಕ್ತಪಡಿಸಿದರು.
ವರದಿ: ಮಂಜುನಾಥ್ ಕೆ ಎ ತುರುವೇಕೆರೆ.
ಕೆಳಗಿನ #ಲಿಂಕ್ ಬಳಸಿ #ಜನತಾ24 #ವಾಟ್ಸಾಪ್_ಗ್ರೂಪ್ ಸೇರಿರಿ https://chat.whatsapp.com/Jf6jZ0gyQAEA5GBRpHnkrv
https://news.google.com/publications/CAAqBwgKMPHDwgswk9_ZAw?hl=en-IN&gl=IN&ceid=IN:en