Document

Tumkur: ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡ ಪೋಷಕರು

Janataa24 NEWS DESK

Tumkur: ತಂಡಗ ಸರ್ಕಾರಿ ಶಾಲೆಯ ಶಿಕ್ಷಕರ ಕಳ್ಳಾಟ, ಪಾಠ ಮಾಡದ ಮೇಷ್ಟ್ರು ಮಕ್ಕಳ ಮನೆಗಳಿಗೆ ಉತ್ತರ ಪತ್ರಿಕೆ.

tumkur parents scolding teachers7815226285820148579
Tumkur: ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡ ಪೋಷಕರು



ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡ ಪೋಷಕರು. ಇದರ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಯ ಮುಂದಿನ ನಡೆಯೇನು.

tumkur parents scolding teachers 4090587909284492754



ತುರುವೇಕೆರೆ: ತಾಲೂಕಿನ ತಂಡಗ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡದ ಪರಿಣಾಮ, ಶಾಲೆಯಲ್ಲಿ ನಡೆದ ಪರೀಕ್ಷೆಯಲ್ಲಿ ತಾವೇ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಬರೆಸಿ, ಪರೀಕ್ಷಾ ಉತ್ತರ ಹಾಳೆಯನ್ನು ಮನೆಗೆ ಕಳಿಸಿ ಉತ್ತರ ಬರೆದುಕೊಂಡು ಬರಲು ಹೇಳಿದ ಶಿಕ್ಷಕರ(Teachers) ಬಗ್ಗೆ ಪೋಷಕರು ಶಾಲೆಯ ಬಳಿ ತರಾಟೆಗೆ ತೆಗೆದುಕೊಂಡ ಘಟನೆ ಸಮೀಪದ ತಂಡಗ ಗ್ರಾಮದಲ್ಲಿ ಮಂಗಳವಾರ ನಡೆದಿದೆ.



  ತಂಡಗದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಒಂದರಿಂದ ಏಳನೇ ತರಗತಿಯವರೆಗೆ ಕೇವಲ 42 ಮಕ್ಕಳು ಇವೆ. ನಾಲ್ಕು ಮಂದಿ ಶಿಕ್ಷಕರು ಇದ್ಧಾರೆ. ಆದರೂ ಸಹ ಇಲ್ಲಿಯ ಮಕ್ಕಳಿಗೆ ಸರಿಯಾಗಿ ವ್ಯಾಕರಣ, ಇಂಗ್ಲೀಷ್, ಗಣಿತ ಪಠ್ಯದಲ್ಲಿರುವ ಪಾಠಗಳನ್ನು ಸಂಪೂರ್ಣವಾಗಿ ಮಾಡದೆ, ಶಾಲೆಯ ಶಿಕ್ಷಕರು ಮಕ್ಕಳಿಗೆ ಪರೀಕ್ಷೆಯಲ್ಲಿ ಉತ್ತರವನ್ನು ಅವರೇ ಬರೆಸಿ ಮುಂದಿನ ತರಗತಿಗೆ ಕಳಿಸಲು ಸಿದ್ದತೆ ಮಾಡಿಕೊಂಡಿದ್ದಾರೆ.

tumkur parents scolding teacher1080540546163891639



ಸೋಮವಾರ ಶಾಲೆಯಲ್ಲಿ ನಾಲ್ಕನೇ ತರಗತಿಯ ಪರೀಕ್ಷೆ ಇತ್ತು. ಹಲವಾರು ಪಾಠಗಳು ಮಾಡದ ಹಿನ್ನೆಲೆಯಲ್ಲಿ ಮನೆಗೇ ಉತ್ತರ ಪತ್ರಿಕೆಯನ್ನು ಕಳಿಸಿ ಮನೆಯಲ್ಲಿ ಉತ್ತರ ಬರೆದುಕೊಂಡು ಬರಲು ಶಿಕ್ಷಕರು ಹೇಳಿದ್ದಾರೆ. ಮಕ್ಕಳು ಪ್ರಶ್ನಾವಳಿ ಹಾಳೆಯ ಜೊತೆ ಉತ್ತರ ಪತ್ರಿಕೆಯನ್ನೂ ಮನೆಗೆ ತಂದಾಗ ಪೋಷಕರು(Parwnts) ಮಕ್ಕಳನ್ನು ವಿಚಾರಣೆ ಮಾಡಿದಾಗಲೇ ಶಿಕ್ಷಕರ(Teachers) ಬಂಡವಾಳ ಬಯಲಾಯಿತು ಎಂದು ಪೋಷಕರು ಆರೋಪಿಸಿದ್ದಾರೆ.



 ಸುಮಾರು 150 ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ನಮ್ಮೂರಲ್ಲಿ ಸರ್ಕಾರಿ ಶಾಲೆ(Government School)ಯನ್ನು ಕಳೆದುಕೊಳ್ಳಬಾರದೆಂಬ ಕಾರಣಕ್ಕೆ ಊರಿನವರ ಮನವೊಲಿಸಿ ಈ ಶಾಲೆಗೆ ಮಕ್ಕಳನ್ನು ಸೇರಿಸಿದೆವು. ಈಗ ಈ ಶಿಕ್ಷಕರುಗಳು ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದಾರೆಂದು ಆರೋಪಿಸಿ ಗ್ರಾಮಸ್ಥರು(Villagers) ಮತ್ತು ಮಕ್ಕಳ ಪೋಷಕರು ಶಾಲೆಯ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

tumkur parents scolding teachers643942553313579313



ಮಕ್ಕಳನ್ನು ಮುಂದಿಟ್ಟುಕೊಂಡೇ ಪೋಷಕರು ಮಕ್ಕಳ ಸಾಮಥ್ರ್ಯವನ್ನು ಶಿಕ್ಷಕರ ಮುಂದೆ ಅಳೆದರು. ನಿಮ್ಮ ಮಕ್ಕಳು ಮಾತ್ರ ವಿದ್ಯಾವಂತರಾಗಬೇಕು. ನಮ್ಮ ಮಕ್ಕಳು ಆಗಬಾರದಾ ಸರ್ಕಾರ ಲಕ್ಷಾಂತರ ರೂಪಾಯಿ ಸಂಬಳ ನೀಡಿದರೂ ಸಹ ನೀವು ಮಕ್ಕಳ ಬಗ್ಗೆ ಗಮನ ಕೊಡುವುದಿಲ್ಲವಲ್ಲಾ ನಿಮಗೆ ಆ ದೇವರು ಒಳ್ಳೆಯದು ಮಾಡೋಲ್ಲ. ಮಕ್ಕಳಿಗೆ ಮೋಸ ಮಾಡಲು ಮನಸ್ಸಾದರೂ ಹೇಗೆ ಬರುತ್ತೆ ಎಂದು ಮುಖ್ಯ ಶಿಕ್ಷಕ ನಂಜಾಮರಿ, ಸಹ ಶಿಕ್ಷಕರಾದ ಸುರೇಶ್, ವಿಶ್ವನಾಥ್ ಮತ್ತು ರಮೇಶ್ ಗೆ, ತರಾಟೆ ತೆಗೆದುಕೊಂಡು ಇಲ್ಲಿಂದ ನಾಲ್ಕು ಶಿಕ್ಷಕರನ್ನು ಎತ್ತಂಗಡಿ ಮಾಡಿ ಬೇರೆ ಶಿಕ್ಷಕರನ್ನು ನೇಮಿಸಬೇಕು,
ತಪ್ಪಿದಲ್ಲಿ ನಮ್ಮ ಮಕ್ಕಳ ಟಿಸಿ ಕೊಟ್ಟುಬಿಡಿ ಎಂದು ಆಗ್ರಹಿಸಿದರು.


 
ಸ್ಥಳಕ್ಕೆ ಆಗಮಿಸಿದ ಬಿಆರ್ಸಿ ವೀಣಾ ನಾಲ್ವರು ಶಿಕ್ಷಕರನ್ನು ಪೋಷಕರ ಎದುರೇ ತರಾಟೆಗೆ ತೆಗದುಕೊಂಡರು. ಉತ್ತರ ಪತ್ರಿಕೆಯನ್ನು ಮನೆಗೆ ಕಳಿಸಿದ ಬಗ್ಗೆ ಮತ್ತು ಉತ್ತರವನ್ನು ತರಗತಿಯಲ್ಲಿ ಬರೆಸಿದ್ದ ಬಗ್ಗೆ ಮಕ್ಕಳಿಂದ ಮಾಹಿತಿ ಸಂಗ್ರಹಿಸಿದರು. ಪೋಷಕರು ಮತ್ತು ಸಾರ್ವಜನಿಕರು ನೀಡಿದ ದೂರಿನನ್ವಯ ನಾಲ್ಕು ಶಿಕ್ಷಕರನ್ನೂ ಬೇರೆ ಕಡೆ ವರ್ಗಾಯಿಸಲಾಗುವುದು ಎಂದು ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಿ ಸೂಕ್ತ ಕ್ರಮಕ್ಕೆ ಶಿಫಾರಸ್ಸು ಮಾಡುವುದಾಗಿ ಪೋಷಕರಿಗೆ ಭರವಸೆ ನೀಡಿದರು.



  ಪ್ರತಿಭಟನೆಯಲ್ಲಿ ಗುಡಿಗೌಡರಾದ ಸತೀಶ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರಮೇಶ್, ಸದಸ್ಯರಾದ ಚಂದ್ರಶೇಖರ್, ಬಸವರಾಜು, ಓಂಕಾರಾಚಾರ್, ಜಬಿಬುಲ್ಲಾ, ಸಂತೋಷ್, ಸಚಿನ್, ಗುರುಮೂತರ್ಿ, ಶಿವಕುಮಾರ್, ಯೋಗಾನಂದಮೂರ್ತಿ, ರಂಗಸ್ವಾಮಿ, ಮಂಗಳಗೌರಿ, ಆಶಾ ಸೇರಿದಂತೆ ಹಲವರು ಇದ್ದರು.

ವರದಿ: ಮಂಜುನಾಥ್ ತುರುವೇಕೆರೆ

https://www.janataa24.com/swami-japananda-swami-is-saving-life-by-giving-water-to-the-dumb-creatures/



ಕೆಳಗಿನ #ಲಿಂಕ್ ಬಳಸಿ #ಜನತಾ24   #ವಾಟ್ಸಾಪ್_ಗ್ರೂಪ್ ಸೇರಿರಿ

https://chat.whatsapp.com/Jf6jZ0gyQAEA5GBRpHnkrv

Subscribe YouTube
https://youtube.com/@janataa24?si=XsFcych2GMH0O6Gv

Document

Leave a Reply

Your email address will not be published. Required fields are marked *