Document

40% ಸರ್ಕಾರದಿಂದ ಬೇಸತ್ತ ಜನಸಾಮಾನ್ಯರು, ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ: ಕೆ ಎನ್ ರಾಜಣ್ಣ

Janataa24 NEWS DESK

videocapture 20230513 1938402709182387821456806

ಬಿಜೆಪಿಯ 40% ಸರ್ಕಾರದಿಂದ ಬೇಸತ್ತ ಜನಸಾಮಾನ್ಯರು, ಈ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿದ್ದಾರೆ: ಕೆ ಎನ್ ರಾಜಣ್ಣ

ಮಧುಗಿರಿ

images28729281629 1
ಕೆ.ಎನ್. ರಾಜಣ್ಣ/ KN Raajanna




ಮಧುಗಿರಿ: ಕರ್ನಾಟಕ ರಾಜ್ಯದಲ್ಲಿ ಬಿಜೆಪಿಯ ೪೦% ಸರ್ಕಾರದಿಂದ ಬೇಸತ್ತ ರಾಜ್ಯದ ಜನಸಾಮಾನ್ಯರು, ಈ ಬಾರಿಯ 2023 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ಆಶೀರ್ವದಿಸಿದ್ದಾರೆ ಎಂದು ಕೆ ಎನ್ ರಾಜಣ್ಣ ತಿಳಿಸಿದರು.

VideoCapture 20230513 193320


ನಂತರ ಮಾತನಾಡಿ, , ನಾನು ಮಧುಗಿರಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಕಂಡು 2013 ರಿಂದ 17ರ ಅವಧಿಯಲ್ಲಿ ಶಾಸಕನಾಗಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ್ದು ಎಲ್ಲರ ಕಣ್ಮುಂದೆ ಇದೆ ಆದರೆ ಕಳೆದ 2018 ರ ಚುನಾವಣೆಯಲ್ಲಿ ದುರಾದೃಷ್ಟಕರ ಕ್ಷೇತ್ರದ ಮಹಿಳೆಯರು ಅರಿಶಿಣ, ಕುಂಕುಮ, ಸೀರೆಯ ಅಮಿಶಕ್ಕೆ ಒಳಪಟ್ಟು ನನಗೆ ಕೈಕೊಟ್ಟ ಸಂದರ್ಭದಲ್ಲಿ ನಾನು ಸೋಲು ಕಂಡೆ, ಆದರೆ 2018ರ ಚುನಾವಣೆಯಲ್ಲಿ ಗೆದ್ದ ಶಾಸಕ ಕ್ಷೇತ್ರದ ಸರ್ವೋತ್ತಮುಖ ಅಭಿವೃದ್ಧಿಪಡಿಸಿಲ್ಲ ಇದನ್ನು ಮನಗಂಡ ಕ್ಷೇತ್ರದ ಜನಸಾಮಾನ್ಯರು ಈ ಬಾರಿ 2023ರ ಚುನಾವಣೆಯಲ್ಲಿ ನನಗೆ ಮತ್ತೊಮ್ಮೆ ಆಶೀರ್ವದಿಸಿ ಎದುರಾಳಿ ಯಾದ ಜೆ.ಡಿ.ಎಸ್ ಅಭ್ಯರ್ಥಿ ಎಂ ವಿ ವೀರಭದ್ರಯ್ಯ ವಿರುದ್ಧ 32,859 ಮತಗಳಿಂದ ಲೀಡ್ ಕೊಟ್ಟು ನನ್ನನ್ನು ಜಯಶೀಲರನ್ನಾಗಿ ಮಾಡಿದ್ದಾರೆ, ಈ ಬಾರಿಯ ಚುನಾವಣೆಯಲ್ಲಿ ಕ್ಷೇತ್ರ ಜನಸಾಮಾನ್ಯರು ಹಣ, ಅರಿಶಿನ, ಕುಂಕುಮ, ಬಳೆ, ಸೀರೆ ಎಂತಹ ಅಮಿಷಗಳಿಗೆ ಒಳಗಾಗದೆ ಅಭಿವೃದ್ಧಿಯತ್ತ ಕೈಜೋಡಿಸಿದ್ದಾರೆ ಇದು ತುಂಬಾನೇ ಸಂತೋಷದ ವಿಚಾರ ನಾನು ಕ್ಷೇತ್ರದ ಪ್ರತಿಯೊಬ್ಬ ಜನಸಾಮಾನ್ಯರ ಆಭಾರಿ ಯಾಗಿದ್ದು ಮಧುಗಿರಿಯ ಸರ್ವೋತ್ತಮುಖ ಅಭಿವೃದ್ಧಿಗಾಗಿ ಸದಾ ಕೆಲಸ ಮಾಡುವುದಾಗಿ ತಿಳಿಸಿದರು.

VideoCapture 20230513 193304


ಈ ಸಂದರ್ಭದಲ್ಲಿ ತುಮಕೂರು ಜಿಲ್ಲಾ ಎಂ ಎಲ್ ಸಿ ರಾಜೇಂದ್ರ ರಾಜಣ್ಣ ಶಾಂತಲಾ ರಾಜಣ್ಣ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಜೈ ರಾಜಣ್ಣ , ರಶ್ಮಿಕ, ಸುವರ್ಣಮ್ಮ, ಪುರಸಭೆ ಸದಸ್ಯರಾದ ಗಂಗಣಿ ,ಪ್ರಕಾಶ್ ,ಎಸ್ ಬಿ ಟಿ ರಾಮಣ್ಣ, ಲಾಲಪೇಟೆ ಮಂಜು, ರಾಮು, ಮಾಜಿ ಸದಸ್ಯರಾದ ಆಯುಬ್ , ಮುಖಂಡರಾದ ಬಾಬಾ ಫಕ್ರುದ್ದೀನ್, ವಸೀಮ್, ಜಮೀರ್, ದಾದಾಪೀರ್, ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಇದ್ದರು

VideoCapture 20230513 193307

ವರದಿ

ಮಧುಗಿರಿ: ಅಬಿದ್

Document

Leave a Reply

Your email address will not be published. Required fields are marked *