Janataa24 NEWS DESK
ಜೆಡಿಎಸ್ ಗೆಲುವು ಕಂಡ ಹಿನ್ನೆಲೆ ತುರುವೇಕೆರೆ ತಾಲೂಕಿನ ಕಾರ್ಯಕರ್ತರು ಪಟಾಕಿ ಸಿಡಿಸಿ ಕುಣಿದು ಕುಪ್ಪಳಿಸಿದರು.

ತುರುವೇಕೆರೆ, ತಾಲೂಕಿನ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿದ ಜೆಡಿಎಸ್ ಅಭ್ಯರ್ಥಿ ಎಂ ಟಿ ಕೃಷ್ಣಪ್ಪ ಅವರು ಸುಮಾರು 8 ರಿಂದ 10 ಸಾವಿರಗಳ ಮತಗಳ ಮುನ್ನಡೆಯಿಂದ ಗೆಲುವಿನ ನಗೆಯನ್ನು ಬೀರಿದ್ದು,
ತಾಲೂಕಿನಲ್ಲಿ ಜೆಡಿಎಸ್ ಕಾರ್ಯಕರ್ತರ ಸಂತಸ ಮುಗಿಲುಮುಟ್ಟಿದೆ,

ಇದೆ ವೇಳೆ ಕಾರ್ಯಕರ್ತರುಗಳು ಟಿಬಿ ಕ್ರಾಸ್ ಬಳಿಯಲ್ಲಿ ಪಟಾಕಿಗಳನ್ನು ಸಿಡಿಸಿ ಸಿಹಿಯನ್ನು ಹಂಚಿ, ತಮಟೆ ವಾದ್ಯಗಳೊಂದಿಗೆ ಕುಣಿದು ಕುಪ್ಪಳಿಸಿ ಸಂತಸ ವ್ಯಕ್ತಪಡಿಸಿದ್ದಾರೆ,

ವರದಿ
ತುರುವೇಕೆರೆ: ಮಂಜುನಾಥ್