Janataa24 NEWS DESK

ದಾವಣಗೆರೆ: ಅಬಕಾರಿ ಉಪ ಆಯುಕ್ತೆ ಸೇರಿದಂತೆ ಅಬಕಾರಿ ಇಲಾಖೆಯ ನಾಲ್ವರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಜಿಲ್ಲಾ ಅಬಕಾರಿ ಉಪ ಆಯುಕ್ತೆ ಸ್ವಪ್ನ, ಪ್ರಥಮ ದರ್ಜೆ ಸಹಾಯಕ ಅಶೋಕ ಎಚ್.ಎಂ., ಹರಿಹರ ಅಬಕಾರಿ ವಲಯ ಕಚೇರಿಯ ಅಬಕಾರಿ ನಿರೀಕ್ಷಕಿ ಶೀಲಾ, ದ್ವಿತೀಯ ದರ್ಜೆ ಸಹಾಯಕಿ ಶೈಲಶ್ರೀ ಅವರನ್ನು ಲೋಕಾಯುಕ್ತ ತಂಡ ವಶಕ್ಕೆ ಪಡೆದಿದೆ.
ಹರಿಹರದ ಅಮರಾವತಿ ಬಳಿ ಸಿಎಲ್- 7 ಮದ್ಯದ ಅಂಗಡಿ ಪರವಾನಗಿ ಮಾಡಿಕೊಡಲು ಡಿ.ಜಿ. ರಘುನಾಥ ಎಂಬುವರು ಅರ್ಜಿ ಸಲ್ಲಿಸಿದ್ದರು. ಅಧಿಕಾರಿಗಳು ಮೂರು ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ನಗರದ ದೇವರಾಜ ಅರಸು ಬಡಾವಣೆಯಲ್ಲಿ ಇರುವ ಅಬಕಾರಿ ಇಲಾಖೆ ಕಚೇರಿಯಲ್ಲಿ ಆರೋಪಿ ಅಶೋಕ ಎಚ್.ಎಂ. ಲಂಚ ಪಡೆಯುತ್ತಿರುವಾಗ ಲೋಕಾಯುಕ್ತ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರೆ ನೇತೃತ್ವದ ತಂಡ ನಡೆಸಿದ ಈ ದಾಳಿಯಲ್ಲಿ ಪೊಲೀಸ್ ನಿರೀಕ್ಷಕರಾದ ಪ್ರಭು ಬಿ. ಸೂರಿನ, ಮಧುಸೂಧನ್, ಎಚ್.ಎಸ್. ರಾಷ್ಟ್ರಪತಿ, ಹಾವೇರಿ ಪೊಲೀಸ್ ಇನ್‌ಸ್ಪೆಕ್ಟರ್ ಮಂಜುನಾಥ ಪಂಡಿತ್ ಅವರ ನೇತೃತ್ವದಲ್ಲಿ ಕಾನ್‌ಸ್ಟೆಬಲ್‌ಗಳಾದ ವೀರೇಶಯ್ಯ, ಆಂಜನೇಯ, ಜಂಷಿದಾ ಖಾನಂ, ಧನರಾಜ್, ಮಲ್ಲಿಕಾರ್ಜುನ, ಲಿಂಗೇಶ, ಬಸವರಾಜ, ಗಿರೀಶ್, ವಿನಾಯಕ, ಕೃಷ್ಣನಾಯ್ಕ, ಮೋಹನ್, ಕೋಟಿನಾಯ್ಕ, ಮಾಲತೇಶ ಅರಸೀಕೆರೆ, ಎಸ್.ಎಸ್.ಕಡಕೋಳ, ಮಹಾಂತೇಶ ಕಂಬಳಿ, ಮಹಾಂತೇಶ ಕಂಬಳಿ, ಲಕ್ಷ್ಮವ್ವ ಅನವೇರಿ, ಹರ್ಷಿಯಾ, ಸರೋಜಾ ಕಾರ್ಯಾಚರಣೆಯಲ್ಲಿದ್ದರು.