Document

ಹೆದ್ದಾರಿ ಪ್ರಾಧಿಕಾರಕ್ಕೆ ಬಿಸಿ ಮುಟ್ಟಿಸಿದ ಹೈಕೋರ್ಟ್: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ

images281529
HonnasiriMahindrapost03 2
ಜಾಹೀರಾತು/Advertisement

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ (ಎನ್‌ಎಚ್ 275) ಆರಂಭವಾದ ಮೊದಲ ದಿನದಿಂದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಟೋಲ್ ಸಂಗ್ರಹಿಸಲು ಮುಂದಾಗಿದ್ದು, ಇದರಿಂದ ವಾಹನ ಚಾಲಕರಿಗೆ ಸಾಕಷ್ಟು ಸಮಸ್ಯೆ ಉಂಟಾಗಿದೆ.

ಈ ಕುರಿತು ಮಾಧ್ಯಮಗಳು ನಿರಂತರವಾಗಿ ವರದಿ ಬಿತ್ತರಿಸುತ್ತಿರುವ ಹಿನ್ನೆಲೆ ಕರ್ನಾಟಕ ಹೈಕೋರ್ಟ್ ಬುಧವಾರ ಸ್ವಯಂ ಪ್ರೇರಿತವಾಗಿ ವಿಚಾರಣೆ ನಡೆಸಲು ಮುಂದಾಗಿದೆ.ವಾಹನ ಚಾಲಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳ ಕುರಿತು ಮೂರು ವಾರಗಳಲ್ಲಿ ಪ್ರತಿಕ್ರಿಯೆ ನೀಡಬೇಕು ಎಂದು

images281429
HonnasiriMahindrapost03 1
ಜಾಹೀರಾತು/Advertisement

ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ನೇತೃತ್ವದ ವಿಭಾಗೀಯ ಪೀಠವು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಎಚ್‌ಎಐ) ಸೂಚನೆ ನೀಡಿದೆ.

ಬೆಂಗಳೂರಿನಿಂದ ಕನಕಪುರದವರೆಗಿನ NH-209 ರ ಅಗಲೀಕರಣ ಮತ್ತು ನಿರ್ವಹಣಾ ಕಾಮಗಾರಿಗಳಲ್ಲಿ ವಿಳಂಬ ಮತ್ತು ಸುರಕ್ಷತಾ ಕ್ರಮಗಳನ್ನು ಅನುಸರಿಸದಿರುವುದುರ ಕುರಿತಾದ PIL ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ

ಪೀಠವು ಈ ನಿರ್ದೇಶನಗಳನ್ನು ನೀಡಿದೆ.ಕಾಮಗಾರಿ ಇನ್ನೂ ಪೂರ್ಣಗೊಳ್ಳದೇ ತೆರಿಗೆ ಅಥವಾ ಟೋಲ್‌ ವಸೂಲಿ ಮಾಡುವುದು ನ್ಯಾಯಸಮ್ಮತವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಸುದ್ದಿಯನ್ನು ನ್ಯಾಯಾಲಯ ಉಲ್ಲೇಖಿಸಿದೆ. ತಾಂತ್ರಿಕ ದೋಷಗಳಿಂದಾಗಿ ಟೋಲ್ ಬಳಿಯಿರುವ ಸೆನ್ಸಾರ್‌ಗಳು ಕೆಲಸ ಮಾಡುತ್ತಿಲ್ಲ. ಬೂಮ್ ಬ್ಯಾರಿಯರ್‌ಗಳು ಕಾರಿನ ಗಾಜು, ಡಿಕ್ಕಿಗಳ ಮೇಲೆ ಬೀಳುತ್ತವೆ.ಇದರಿಂದ ಸರ್ಕಾರಿ ವಾಹನಗಳು ಜಖಂಗೊಂಡಿವೆ ಇದಕ್ಕೆ ದೋಷಪೂರಿತ ಕಾರ್ಯನಿರ್ವಹಣೆ ಅಥವಾ ಕಾರ್ಯವಿಧಾನವೇ ಕಾರಣ” ಎಂದು ಪೀಠವು ಹೇಳಿದೆ.

HonnasiriMahindrapost03
ಜಾಹೀರಾತು/Advertisement
images281129

ಸುದ್ದಿ ವರದಿಗಳನ್ನು ಉಲ್ಲೇಖಿಸಿದ ಪೀಠವು, ”ಫಾಸ್ಟ್-ಟ್ಯಾಗ್ ಗುರುತಿಸುವಿಕೆಯಲ್ಲಿ ತಾಂತ್ರಿಕ ದೋಷಗಳಿಂದಾಗಿ ವಾಹನ ಸವಾರರು ದೀರ್ಘ ಸರತಿ ಸಾಲಿನಲ್ಲಿ ಕಾಯುವಂತಾಗಿದೆ. ಇವೆಲ್ಲವೂ ವಾಹನಗಳ ದಟ್ಟಣೆಗೆ ಕಾರಣವಾಯಿತು ಮತ್ತು ವಾಹನ ಚಾಲಕರು ಸರ್ವಿಸ್ ರಸ್ತೆಯನ್ನು ಬಳಸಲು ಒತ್ತಾಯಿಸಿರುವ” ಬಗ್ಗೆಯೂ ಪೀಠವು ಉಲ್ಲೇಖಿಸಿದೆ.

ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮಗಳು, 2008ಅನ್ನು ಉಲ್ಲೇಖಿಸಿದ ಪೀಠವು, ಎಲ್ಲಾ ನಿಯಮಗಳನ್ನು ಅನುಸರಿಸಲಾಗಿದೆಯೇ ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡಿತು. “ರಾಷ್ಟ್ರೀಯ ಹೆದ್ದಾರಿಗಳ (ದರಗಳು ಮತ್ತು ಸಂಗ್ರಹಣೆಯ ನಿರ್ಣಯ) ನಿಯಮಗಳು-2008ಕ್ಕಿಂತ ಇದು ಸ್ವಲ್ಪ ಭಿನ್ನವಾಗಿರಬಹುದು. ಆದರೆ ನಿಯಮ 3 ಶುಲ್ಕವನ್ನು ವಿಧಿಸುವುದನ್ನು ಉಲ್ಲೇಖಿಸುತ್ತದೆ. ಅಧಿಸೂಚನೆಯ ಪ್ರಕಟಣೆ ಮತ್ತು ಶುಲ್ಕದ ಅಧಿಸೂಚನೆ ಮತ್ತು ಸಂಗ್ರಹಣೆಯ ನಡುವಿನ ನಿಗದಿತ ಅವಧಿ ಸೇರಿದಂತೆ ವಿವಿಧ ಪೂರ್ವಾಪೇಕ್ಷಿತಗಳಿವೆ. ಆದರೆ ಈ ಅಂಶಗಳ ಬಗ್ಗೆ ಗಮನಹರಿಸದೆ ಪ್ರಯಾಣಿಕರಿಂದ ಟೋಲ್ ವಸೂಲಿ ಮಾಡಲಾಗುತ್ತಿದೆ ಎಂದು ಪೀಠ ಹೇಳಿದೆ.

bengaluru mysuru expressway2 1024x576 1


ಬೆಂಗಳೂರು-ಕನಕಪುರ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಈ ರಸ್ತೆಯ ವಿಸ್ತರಣೆಯನ್ನು ಪರಿಶೀಲಿಸಲು ನ್ಯಾಯಾಲಯದ ಆಯುಕ್ತರಾಗಿ ನ್ಯಾಯವಾದಿ ಶಿವಪ್ರಸಾದ್ ಶಾನನಗೌಡರನ್ನು ನೇಮಿಸಿತು.ತಾಂತ್ರಿಕ ಅಂಶಗಳ ಕುರಿತು ನ್ಯಾಯಾಲಯದ ಆಯುಕ್ತರಿಗೆ ಸಹಾಯ ಮಾಡಲು ಸಹಾಯಕ ಅಭಿಯಂತರರನ್ನು ನಿಯೋಜಿಸುವಂತೆ ರಾಮನಗರ ವಿಭಾಗದ ಲೋಕೋಪಯೋಗಿ ಇಲಾಖೆಗೆ ಸೂಚಿಸಲಾಗಿದೆ. ಕೆಲಸದ ಹಂತ, ಕೆಲಸದ ಗುಣಮಟ್ಟ ಮತ್ತು ಸುರಕ್ಷತಾ ಕ್ರಮಗಳ ಅನುಸರಣೆಯನ್ನು ಮೌಲ್ಯಮಾಪನ ಮಾಡಲು ಮತ್ತು ಮೂರು ವಾರಗಳಲ್ಲಿ ಅದರ ವರದಿ ನೀಡುವಂತೆ ನ್ಯಾಯಾಲಯವು ಆಯುಕ್ತರಿಗೆ ಸೂಚಿಸಿದೆ.

images281329
Document

Leave a Reply

Your email address will not be published. Required fields are marked *