Document

ಹಳ್ಳಿಯ ಶಾಲೆಯಿಂದ ಬಂದಂತಹ ಮಕ್ಕಳು ವಿದೇಶದಲ್ಲಿ ಮುಂಚೂಣಿಯಲ್ಲಿದ್ದಾರೆ: ಹಳ್ಳಿಕಾರ್ ಶ್ರೀ

Janataa24 NEWS DESK

IMG 20231003 WA0003

ತುರುವೇಕೆರೆ: ಜಿಲ್ಲಾ ಮಟ್ಟದ ಸ್ಪರ್ಧೆಗಳುಈ ಶಾಲೆಯ ಆವರಣದಲ್ಲಿ ನೆಡೆಯುವಂತಾಗಬೇಕು ಇದಕ್ಕೆ ನಾನು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡುತ್ತೇನೆ.




ಇದರಿಂದ ಸುತ್ತಮುತ್ತಲಿನ ಗ್ರಾಮದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಮಾಜಿ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಮುರಳೀಧರ ಹಾಲಪ್ಪ ಅಭಿಪ್ರಾಯಪಟ್ಟರು.

IMG 20231003 WA0002




ತಾಲ್ಲೂಕಿನ ದಬ್ಬೇಘಟ್ಟ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹಾಗೂ ಮಾಜಿ ಪ್ರಧಾನಿಗಳಾದ ಲಾಲ್ ಬಹದ್ದೂರ್ ಶಾಸ್ತ್ರಿರವರ ಜನ್ಮ ಜಯಂತಿಯ ಪ್ರಯುಕ್ತ ಶಾಲೆಯ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ

ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪನವರು ಮಾತನಾಡಿ ಮಹಾತ್ಮ ಗಾಂಧಿ ಯವರ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮ ದಿನ ಶುಭಾಶಯಗಳನ್ನು ಕೋರಿ



ನಿಮ್ಮ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ಬೇಕಾಗಿದೆ ಅದರಲ್ಲಿ ಮಕ್ಕಳ ಕ್ರೀಡೆಗಳಿಗೆ ಅನುಕೂಲವಾಗುವಂತಹ ಕೆಲಸಗಳು ನೆಡೆಯಬೇಕು.



ಜಿಲ್ಲಾ ಮಟ್ಟದ ಸ್ಪರ್ಧೆಗಳು ಈ ಶಾಲೆಯ ಆವರಣದಲ್ಲಿ ನೆಡೆಯುವಂತಾಗಬೇಕು ಇದಕ್ಕೆ ನಾನು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡುತ್ತೇನೆ

ಇದರಿಂದ ಸುತ್ತಮುತ್ತಲಿನ ಗ್ರಾಮದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ.

IMG 20231003 WA0000



ಪೂಜ್ಯ ಹಳ್ಳಿಕಾರ್ ಮಠದ ಸ್ವಾಮೀಜಿಯವರು ಇಲ್ಲಿ ಉಪಸ್ಥಿತರಿದ್ದಾರೆ ಅವರ ಸರಳತೆಯನ್ನು ನೀವು ಅಳವಡಿಸಿಕೊಳ್ಳಿ

ಅವರು ಸುಮಾರು 16 ವರ್ಷ ಆಸ್ಟ್ರೇಲಿಯಾದಲ್ಲಿದ್ದರೂ ಕೂಡ ಅವರ ಸಂಸ್ಕಾರ ಬದಲಾಗಿಲ್ಲ ಎಂದು ವಿದ್ಯಾರ್ಥಿಗಳಿಗೆ ತಿಳಿಸಿ

ಇಲ್ಲಿಯ ಮಕ್ಕಳು ವಿದೇಶದಲ್ಲಿ ಕಲಿಯುವಂತಾಗಬೇಕು ಅದರಲ್ಲೂ ಹಳ್ಳಿಯ ಸ್ಕೂಲಿನಿಂದ ಬಂದಂತಹ ಮಕ್ಕಳು ವಿದೇಶದಲ್ಲಿ ಮುಂಚೂಣಿಯಲ್ಲಿದ್ದಾರೆ ಹಾಗೂ ನಮ್ಮ ಈ ಶಾಲೆಯ ಮಕ್ಕಳು ಐ.ಎ.ಎಸ್ ಐ. ಪಿ.ಎಸ್ ಮಾಡಬೇಕಾಗಿದೆ ಎಂದರು.




ಮುಖಂಡ ಹಾಗೂ ಎ.ಐ.ಸಿ.ಸಿ ಸದಸ್ಯ ಸುಬ್ರಮಣಿ ಶ್ರೀಕಂಠೇಗೌಡ ಮಾತನಾಡಿ ಮಹಾತ್ಮ ಗಾಂಧಿ ಯವರ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮ ದಿನವನ್ನು ನಾವು ಆಚರಿಸುತ್ತಿದ್ದೇವೆ

ನಾವು ಅವರ ಆದರ್ಶ ಮತ್ತು ದೇಶಪ್ರೇಮವನ್ನು ಅಳವಡಿಸಿಕೊಳ್ಳಬೇಕು

ಈ ಸಂದರ್ಭದಲ್ಲಿ ಅವರುಗಳು ದೇಶವನ್ನು ಕಟ್ಟಲಿಕ್ಕೆ ಪಟ್ಟಂತಹ ಶ್ರಮ ಹಾಗೂ ಹೋರಾಟಗಳನ್ನು ನಾವು ನೆನೆಯಬೇಕಾಕಿದೆ

ಈ ನಿಟ್ಟಿನಲ್ಲಿ ಅವರ ಆದರ್ಶ ಹಾಗೂ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.



ಹಳ್ಳಿಕಾರ್ ಮಠದ ಶ್ರೀ ಕೃಷ್ಣ ಸ್ವಾಮೀಜಿ ಆಶೀರ್ವಚನ ನೀಡಿ

ಶಿಕ್ಷಕ ರಾದ ಸಿದ್ದಯ್ಯ ನವರು ಸ್ವಾಗತಿಸಿ ನಿರೂಪಣೆಯನ್ನು ನಿವೃತ್ತ ಶಿಕ್ಷಕರಾದ ಎಲ್.ಮಂಜಯ್ಯ ನವರು ಮಾಡಿದರು

ಇದೇ ಸಂದರ್ಭದಲ್ಲಿ ಶಾಲೆಯ ಪ್ರತಿಬಾವಂತ ಮಕ್ಕಳಿಗೆ ಪ್ರತಿಬಾ ಪುರಸ್ಕಾರ ಮಾಡಲಾಯಿತು.

IMG 20231003 WA0004



ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಪ್ರಭು, ಗ್ರಾಪಂ ಮಾಜಿ ಅಧ್ಯಕ್ಷ ರಾಜಣ್ಣ,ಲಕ್ಷ್ಮಣ್ ಗೌಡ, ಗುಡ್ಡೇನಹಳ್ಳಿ ಪ್ರಸನ್ನ ಕುಮಾರ್ , ಕೊಳಾಲ ನಾಗರಾಜ್, ಉಗ್ರೇಗೌಡ, ಮುತ್ತುಗದಹಳ್ಳಿ ಕೆಂಪರಾಜ್, ಐ. ಪಿ. ಎಸ್. ಶಾಲೆಯ ರುದ್ರಯ್ಯ ಹಿರೇಮಠ್, ಡಿ.ಪಿ ವೇಣುಗೋಪಾಲ್ ಟಿಎಚ್ ಗುರುದತ್ ಹಾಗೂ ಶಾಲೆಯ ಶಿಕ್ಷಕರು ಸಿಬ್ಬಂದಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ

ತುರುವೇಕೆರೆ: ಮಂಜುನಾಥ್

Document

Leave a Reply

Your email address will not be published. Required fields are marked *