Document

ಮಧುಗಿರಿ ಕಾಂಗ್ರೆಸ್ ಕಚೇರಿಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ರವರ ಜನ್ಮದಿನಾಚರಣೆ ಆಚರಿಸಲಾಯಿತು

Janataa24 NEWS DESK

ಮಧುಗಿರಿ ಕಾಂಗ್ರೆಸ್ ಕಚೇರಿಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ರವರ ಜನ್ಮದಿನಾಚರಣೆ ಆಚರಿಸಲಾಯಿತು.

VideoCapture 20231002 210225





ಮಧುಗಿರಿ: ಅಹಿಂಸೆಯ ಹಾದಿಯಲ್ಲಿ ಕ್ರಮಿಸಿ ಸದಾ ಭಾರತೀಯರ ಮನದಲ್ಲಿ ಹಚ್ಚ ಹಸಿರಾಗಿದ್ದಾರೆ ಮಹಾತ್ಮ ಗಾಂಧೀಜಿ ಎಂದು ಕೆಪಿಸಿಸಿ ಸದಸ್ಯರಾದ ಮಿಡಿಗೇಶಿ ಮಲ್ಲಣ್ಣ ತಿಳಿಸಿದರು.


ಪಟ್ಟಣದ ಪಾವಗಡ ವೃತ್ತ ಬಳಿ ಇರುವ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಮಹಾತ್ಮ ಗಾಂಧೀಜಿಯವರ 154ನೇ ಜನ್ಮ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ದಿನ ಶಾಂತಿದೂತರಾದ ಗಾಂಧೀಜಿಯವರ ಹಾಗೂ ರಾಷ್ಟ್ರ ಕಂಡಂತಹ ಹಾಗೂ ಬ್ರಷ್ಟಾಚಾರ ರಹಿತ ಲಾಲ್ ಬಹದ್ದೂರ್ ಶಾಸ್ತ್ರಿ ರವರ ಜನ್ಮ ದಿನಾಚರಣೆಯನ್ನು ತಾಲೂಕ ಕಾಂಗ್ರೆಸ್, ಸಹಕಾರ ಸಚಿವರಾದ ಕೆ ಎನ್ ರಾಜಣ್ಣ ಹಾಗೂ ವಿಧಾನಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ನೇತೃತ್ವದಲ್ಲಿ ಆಚರಣೆ ಮಾಡಲಾಯಿತು,
ಸ್ವಾತಂತ್ರ್ಯಕ್ಕಾಗಿ ದಿಟ್ಟ ಹೋರಾಟ ನಡೆಸಿದ ಗಾಂಧೀಜಿಯವರ ಸತ್ಯ ಅಹಿಂಸೆಯ ಸಿದ್ಧಾಂತ ಬೋಧನೆಗಳನ್ನು ಇಡೀ ದೇಶವೇ ಅನುಸರಿಸುತ್ತಿದೆ. ಅವರ ಆಲೋಚನೆಗಳು ಸದಾ ಜನರ ಹೃದಯದಲ್ಲಿ ನೆಲೆಸಿದೆ. ಇಂತಹ ಪುಣ್ಯ ಪುರುಷನ ಜನ್ಮ ದಿನವನ್ನು ಅಕ್ಟೋಬರ್ 2ರಂದು ಆಚರಿಸಲಾಗುತ್ತದೆ ಎಂದರು.



ಮುಖಂಡರಾದ ಗಂಗಣಿ ಮಾತನಾಡಿ, ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಈ ಇಬ್ಬರು ಮಹಾ ನಾಯಕರಿಂದ ದೇಶಕ್ಕೆ ಸ್ವಾತಂತ್ರ್ಯತೆ ಲಭಿಸಿದೆ, ಗಾಂಧೀಜಿಯವರು ಕಂಡಂತಹ ಕನಸು ಸರ್ವರಿಗೂ ಸಮಪಾಲು ಸರ್ವರಿಗೂ ಸಮಾಭಾಳು ಭಾರತ ದೇಶ ರಾಮ ರಾಜ್ಯ ಆಗಬೇಕು ಸರ್ವರೂ ಸುಖಕರವಾಗಿರಬೇಕು ಎಂದು ಗಾಂಧೀಜಿಯವರು ಕಂಡಂತಹ ಕನಸುಗಳನ್ನು ನನಸಾಗಿಸುವ ಉದ್ದೇಶದಲ್ಲಿ ನಮ್ಮ ಕಾಂಗ್ರೆಸ್ ಸರಕಾರ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

IMG 20231002 WA0030




ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಸಿದ್ದಾಪುರ ರಂಗಾ ಶಾಮಣ್ಣ ಮಾತನಾಡಿ, ಸಚಿವರಾದ ರಾಜಣ್ಣ, ಪರಿಷತ್ ಸದಸ್ಯರಾದ ರಾಜೇಂದ್ರ ರಾಜಣ್ಣ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಜಿ ಚಂದ್ರಶೇಖರ್ ರವರ ಆದೇಶದ ಮೇರೆಗೆ ಮಹಾತ್ಮ ಗಾಂಧಿ ಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ರವರ ಜನ್ಮದಿನಾಚರಣೆ ಆಚರಿಸುತ್ತಿದ್ದು,ಭಾರತೀಯರ ಮನಸ್ಸಿನಲ್ಲಿ ಅಚ್ಚಳಿಯದೇ ಸದಾ ಶಾಶ್ವತವಾಗಿರುವ ಹೆಸರು ಅಂದರೆ ಅದು ಎಂದೆಂಗಿಗೂ ಮಹತ್ಮಾರಾಗಿರುವ ಗಾಂಧೀಜಿ. ಗಾಂಧಿಯವರ ಬದುಕೊಂದು ಶಾಂತಿ- ಹೋರಾಟಗಳ ಮಹಾಗಾಥೆ. ಸತ್ಯಕ್ಕಾಗಿ ನಿರಂತರ ಅನ್ವೇಷಣೆ, ಪ್ರತಿಯೊಬ್ಬರು ಸಮಾನರು ಎಂಬ ನೆಲೆಯಲ್ಲಿ ವಸಾಹತುಶಾಹಿಯ ಎದುರು ಸ್ವಾತಂತ್ರ್ಯಕ್ಕಾಗಿ ದಿಟ್ಟ ಹೋರಾಟ ಇವುಗಳೆಲ್ಲ ರಾಷ್ಟ್ರಪಿತನನ್ನು ಜಾಗತಿಕ ನಾಯಕರಲ್ಲಿ ಮೊದಲಿನ ಸ್ಥಾನಕ್ಕೇರಿಸಿದೆ ಎಂದು ತಿಳಿಸಿದರು.

VideoCapture 20231002 205841



ಮುಖಂಡರಾದ ಎಸ್ ಬಿ ಟ ರಾಮಣ್ಣ ಮಾತನಾಡಿ,ಅಕ್ಟೋಬರ್ 2, 1869ರಲ್ಲಿ ಗುಜರಾತ್ ನ ಪೋರಬಂದರ್ ನಲ್ಲಿ ಗಾಂಧೀಜಿಯವರ ಜನನವಾಯ್ತು. ಇವರ ತಂದೆ ಕರಮಚಂದ್ ಗಾಂಧಿ, ತಾಯಿ ಪುತಲೀಬಾಯಿ. 13 ನೆಯ ವಯಸ್ಸಿನಲ್ಲಿ ಗಾಂಧೀಜಿ ಕಸ್ತೂರಿ ಬಾ ಅವರನ್ನು ವಿವಾಹವಾದರು. ಇವರಿಗೆ ನಾಲ್ಕು ಮಕ್ಕಳು ಜನಿಸಿದರು, ಹರಿಲಾಲ್ ಗಾಂಧಿ, ಮಣಿಲಾಲ್ ಗಾಂಧಿ , ರಾಮದಾಸ್ ಗಾಂಧಿ ಮತ್ತು ದೇವದಾಸ್ ಗಾಂಧಿ. ತನ್ನ 19 ನೇ ವಯಸ್ಸಿನಲ್ಲಿ ಗಾಂಧೀಜಿ ಲಂಡನ್ ನ ಯೂನಿವರ್ಸಿಟಿ ಕಾಲೇಜಿನಿಂದ ಕಾನೂನು ಪದವಿ ಪಡೆದರು, ತಮ್ಮ ಜೀವನದಲ್ಲಿ ಅಹಿಂಸವಾದಿ ನಡೆಯ ಮೂಲಕ ಭಾರತ ರಾಷ್ಟ್ರಕ್ಕೆ ಸ್ವಾತಂತ್ರ್ಯ ಕೊಡುಗೆಯನ್ನು ನೀಡಿದರು ಎಂದು ತಿಳಿಸಿದರು.

IMG 20231002 WA0034



ಈ ಸಂದರ್ಭದಲ್ಲಿ ನಗರ ಅಧ್ಯಕ್ಷರಾದ ಆದಿ ನಾರಾಯಣ್ ರೆಡ್ಡಿ, ಗ್ರಾಮಾಂತರ ಅಧ್ಯಕ್ಷರಾದ ಗೋಪಾಲಯ್ಯ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ರಂಗಶಾಮಣ್ಣ ,ನೀರಕಲ್ ನಾಗೇಶ್, ಬಗರ್ ಹುಕುಂ ಸದಸ್ಯೆ ಡಿ ಬಿ ಆಶಾ, ಪುರಸಭೆ ಸದಸ್ಯರಾದ ಅಲೀಮ್ ಉಮೇಶ್ ಮುಖಂಡರಾದ ಸಾಧಿಕ್, ಬಾಬಾ ಫಕ್ರುದ್ದೀನ್ ಶರೀಫ್, ಹರ್ಷದ ಹುಸೇನ್, ಮನ್ನು, ದಾದಾಪೀರ್, ಕುಮಾರ್ ಇನ್ನು ಹಲವು ಮುಖಂಡರು ಇದ್ದರು.

ವರದಿ

ಮಧುಗಿರಿ: ಅಬಿದ್

Document

Leave a Reply

Your email address will not be published. Required fields are marked *