Document

ಸಾಲಬಾದೆ ತಾಳಲಾರದೆ ರೈತ ನೇಣಿಗೆ ಶರಣು

ಗುಂಡ್ಲುಪೇಟೆ: ಕಾಂತರಾಜು



ಗುಂಡ್ಲುಪೇಟೆ ತಾಲೂಕಿನ ರಂಗೂಪುರ ಗ್ರಾಮದ ಮಹದೇವೇಗೌಡ ಎಂಬ ರೈತ ಸಾಲಬಾದೆ ತಾಳಲಾರದೆ ಜಮೀನಿನಲ್ಲೆ ಮರದ ರೆಂಬೆಗೆ ನೇಣಿಗೆ ಶರಣಾದ ಘಟನೆ ನಡೆದಿದೆ.

IMG 20230108 WA0017

ಸಣ್ಣ ಪ್ರತಿಫಲಾಪೇಕ್ಷೆಗೆ ಹಗಲಿರುಳು ದುಡಿಯುವ ರೈತರು ಇಂತಹ ದುಡುಕಿನ ನಿರ್ಧಾರ ತೆಗೆದುಕೊಂಡು ಆತ್ಮಸ್ಥೈರ್ಯ ಕಳೆದು ಕೊಳ್ಳಬಾರದು ಎಂದು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಕಡಬೂರು ಮಂಜುನಾಥ್ ಮನವಿ ಮಾಡಿದ್ದಾರೆ.
ಸಾವಿರಾರು ಕೋಟಿ ಬಂಡವಾಳಶಾಹಿಗಳ ಸಾಲ ಮನ್ನಾ ಮಾಡುವ ಸರ್ಕಾರ ಇಂತಹ ನೊಂದ ದುಡಿಯುವ ದೇಶಕ್ಕೆ ಅನ್ನ ಬೆಳೆದು ಕೊಡುವ ಜೀವಗಳ ಸಾಲ ಮನ್ನಾ ಮಾಡಿದರೆ ಅನ್ನದಾತನಿಗೆ ಗೌರವ ನೀಡಿದಂತಾಗುತ್ತದೆ. ನೊಂದ ಕುಟುಂಬದ ಸದಸ್ಯರಿಗೆ ಕೃಷಿ ಇಲಾಖೆಯ ಉಪ ನಿರ್ದೇಶಕರು ಹಾಗೂ ತಹಸಿಲ್ದಾರ್ ರವರು ಸಾಂತ್ವನ ಹೇಳಿ ರೈತ ಆತ್ಮಹತ್ಯೆ ಪರಿಹಾರ ನಿಧಿಯಿಂದ 5 ಲಕ್ಷ ರೂ ನೀಡುವುದಾಗಿ ತಿಳಿಸಿರುತ್ತಾರೆ. ಇಂತಹ ಘಟನೆಗಳು ಮತ್ತೆ ಎಲ್ಲೂ ಕೂಡ ಸಂಭವಿಸದಿರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತಾ ಜೀವ ಕಳೆದುಕೊಂಡ ರೈತನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಬೇಡಿಕೊಳ್ಳುತ್ತೇನೆ. ರೈತ ಹೋರಾಟದ ಮೂಲಕ ಬಂದ ನಾವು ಉಸಿರಿರುವ ವರೆಗೂ ರೈತ ಪರ ಜನಪರ ಹೋರಾಟಗಳಿಗೆ ಸದಾ ಸಿದ್ದರಿರುತ್ತೇವೆ ಏನೇ ಸಮಸ್ಯೆಗಳಿದರೂ ನಮ್ಮ ಗಮನಕ್ಕೆ ತಂದರೆ ಹೋರಾಟದ ಮೂಲಕ ಸಮಸ್ಯೆಗಳನ್ನು ಬಗ್ಗೆ ಹರಿಸುವ ಕೆಲಸ ಮಾಡುತ್ತೇವೆ ಆಡಳಿತ ವರ್ಗದ ಗಮನಕ್ಕೆ ತಂದು ರೈತ ಪರ ಜನಪರ ಕೆಲಸಗಳನ್ನು ಮಾಡಲು ನೆರವಾಗುತ್ತೆವೆ ಎಂದು ಭರವಸೆ ನೀಡಿದ್ದಾರೆ.

Document

Leave a Reply

Your email address will not be published. Required fields are marked *