ಪಾವಗಡ: ಇಮ್ರಾನ್ ಉಲ್ಲಾ
ನಮ್ಮಗೆ ಸಿಕ್ಕಿರುವ ಪದವಿ ಇಂದು ಇರಬಹುದು ನಾಳೆ ಹೋಗಬಹುದು ನಾವು ಕರ್ತವ್ಯದಲ್ಲಿದ ವೇಳೆ ಸಾರ್ವಜನಿಕರಿಗೆ ಮಾಡಿದ ನಿಸ್ವಾರ್ಥ ಸೇವೆಯೇ ನಮ್ಮನ್ನು ಗುರುತಿಸುವುದು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಚಂದ್ರಶೇಖರ್ ನುಡಿದರು.

ಅವರ ಶುಕ್ರವಾರ ಪಾವಗಡ ಪಟ್ಟಣದ ಎಸ್ ಎಸ್ ಕೆ ಸಮುದಾಯ ಭವನದಲ್ಲಿ ಪಾವಗಡ ತಾಲ್ಲೂಕು ನಾಗರೀಕರು ಮತ್ತು ಸಂಘ ಸಂಸ್ಥೆಗಳು ಹಮ್ಮಿಕೊಂಡಿದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ಮಟ್ಕಾ,ಇಸ್ಪೀಟು, ಹಾಗೂ ಡ್ರಗ್ಸ್ ಮಾರಾಟಮಾಡಿ ಜೀವನ ನಡೆಸುವವರು ನರರಾಕ್ಷಸರು,ಜನರ ರಕ್ತ ಹೀರುವವರನ್ನು ನರರಾಕ್ಷಸರು ಎನ್ನದೇ ಮತ್ಯಾವ ಪದಗಳಿಂದ ಕರೆಯಬೇಕು ಎಂದು ಪಾವಗಡ ಮಟ್ಕಾದವರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು. ಪಾವಗಡದಲ್ಲಿ ಮಟ್ಕಾ,ಇಸ್ಪೀಟಿ ನಿಂದ ಹಲವಾರು ಕುಟಂಬಗಳು ನಾಶವಾಗಿವೆ,ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ,ಇಲ್ಲಿನ ಕುಟಂಬಗಳಲ್ಲಿ ಮಟ್ಕಾ ,ಇಸ್ಪೀಟಿನಿಂದ ಕಲಹಗಳಾಗಿವೆ ಈ ಬಗ್ಗೆ ನನಗೆ ಮಾಹಿತಿ ಇದೆ ಎಂದ ಚಂದ್ರಶೇಖರ್ ರವರು ಹಲವರಿಂದ ನನಗೆ ಈ ಬಗ್ಗೆ ಎಷ್ಟೇ ಬೆದರಿಕೆಗಳು ಬಂದರು ,ಹೊಂದಾಣಿಕೆ ಮಾಡಿಕೊಂಡು ಹೋಗುವಂತೆ ಹೇಳಿದರು. ಈ ಭಾಗದ ಜನರ ಹಿತದೃಷ್ಟಿಯಿಂದ ಸಮಾಜಘಾತುಕ ಶಕ್ತಿಗಳನ್ನು ಮಟ್ಟಹಾಕಲು ಶ್ರಮಿಸಿದ್ದೇನೆ ಮುಂದೆಯೂ ಇವರ ವಿರುದ್ಧ ನಮ್ಮ ಇಲಾಖೆ ಕಠಿಣ ಕ್ರಮಜರುಗಿಸುತ್ತದೆ ಎಂದು ಹೇಳಿದ ಚಂದ್ರಶೇಖರ್ ರವರು ನಾನು ಎಲೆ ಇದ್ದರು ಪಾವಗಡ ಜನತೆಯ ಪರ ಇರುತ್ತೇನೆ ದೈರ್ಯವಾಗಿರಿ ಎಂದು ಭರವಸೆ ನೀಡಿದರು.
ರಾಮಕೃಷ್ಣ ಆಶ್ರಮದ ಡಾ.ಜಪಾನಂದಸಾಮಿಜೀ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ
ವ್ಯಕ್ತಿಗೆ ನೇರ ನಡೆ, ನುಡಿ ಮುಖ್ಯ ಆ ದಿಸೆಯಲ್ಲಿ ಸಾಗಿದವರೇ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಚಂದ್ರಶೇಖರವರು, ಇಂದಿನ ಪಾವಗಡ ಯುವಜನರು ಅವರನ್ನು ಅನುಸರಿಸಿ ಅವರಂತೆ ಆಗಬೇಕು ಎಂದ ಸ್ವಾಮಿಜಿ ಇಂದಿನ ಯುವ ಪಿಳಿಗೆ ವಿವೇಕಾನಂದರ ತತ್ವ ಆದರ್ಶಗಳನ್ನು ಪಾಲಿಸಬೇಕು.ದೇಶದ ಬಗ್ಗೆ ಚಿಂತಸುವ ,ಪ್ರೀತಿಸುವ ಯವಜನರನ್ನು ರೂಪಿಸುವ ಹೊಣೆ ನಮ್ಮಲೆರ ಮೇಲೆ ಇದೆ. ಈ ದಿಸೆಯಲ್ಲಿ ಪಾವಗಡ ಸಂಘ ಸಂಸ್ಥೆಗಳು ಮತ್ತಷ್ಟು ಕಾರ್ಯಕ್ರಮ ರೂಪಿಸಬೇಕು ಎಂದರು.
ಪಾವಗಡ ಯುವಜನರು ಉತ್ತಮ ವಿದ್ಯಾಬ್ಯಾಸ ಪಡೆದು ಹೆಚ್ಚುವರಿ ಪೊಲೀಸ್ ಆಯುಕ್ತರಾದ ಚಂದ್ರಶೇಖರ್,ಉಪವಿಭಾಗಧಿಕಾರಿಯಾದ ರಘನಂದನ ರಂತೆ ಉನ್ನತ ಹುದ್ದೆಗಳನ್ನು ಪಡೆದು ಪಾವಗಡದ ಜನತೆಗೆ ಕೀರ್ತಿತರಬೇಕೆ ಎಂದು ಕರೆ ನೀಡಿದರು.
ಮಾಜಿ ಶಾಸಕ ಕೆ ಎಂ ತಿಮ್ಮರಾಯಪ್ಪ ಮಾತನಾಡಿ ಚಂದ್ರಶೇಖರ್ ರವರು ಬೆಂಗಳೂರು ಗ್ರಾಮಾಂತರ ಕೇಂದ್ರವಲಯ ಪೊಲೀಸ್ ಆಯುಕ್ತರಾದ ಕಾಲದಲ್ಲಿ ಪಕ್ಷಪಾತ ಇಲ್ಲದೆ ಕಾನೂನು ಸುವ್ಯವಸ್ಥೆಗೆ ಆದ್ಯತೆ ನೀಡುವಲಿ ಮೊದಲ ಆದ್ಯತೆ ನೀಡಿದರು ಅಲ್ಲದೇ ಪಾವಗಡ ಸೇರಿದಂತೆ ಬೆಂಗಳೂರು ಗ್ರಾಮಾಂತರ ವಲಯದಲ್ಲಿದ ಅಕ್ರಮ ಚಟುವಟಿಕೆಗಳಾದ ಮಟ್ಕಾ,ಇಸ್ಪೀಟಿನಂತಹ ಸಾಮಾಜಿಕ ಪಿಡುಗು ಸಂಪೂರ್ಣ ನಾಶವಾಗಲು ಪಣತೊಟ್ಟರು ಇವರ ಈ ಕಾರ್ಯವನ್ನು ಶ್ಲಾಘಿಸುತ್ತೇನೆ ಎಂದು ಹೇಳಿದರು.
ಈ ವೇಳೆ ಬೆಂಗಳೂರು ದಕ್ಷಿಣ ಉಪವಿಭಾಗಧಿಕಾರಿ ರಘನಂದನ್,ಮಧುಗಿರಿ ಡಿವೈಎಸ್ ಪಿ ವೆಂಕಟೇಶ್ ನಾಯ್ಡು ಸನ್ಮಾನ ಸ್ವೀಕರಿಸಿ ಮಾತನಾಡಿದರು.ಪಾವಗಡ ನಾಗರೀಕರ ಪರವಾಗಿ ಡಾ.ಜಿ ವೆಂಕಟರಾಮಯ್ಯ ಸಹ ಇದೇ ವೇಳೆ ಸನ್ಮಾನಿತರನ್ನು ಅಭಿನಂದಿಸಿ ಮಾತನಾಡಿದರು. ಸಿದ್ದಾರ್ಥ ನಿರ್ಮಾಣ ಸಂಸ್ಥೆಯ ವ್ಯವಸ್ಥಾಪಕರಾದ ಬತ್ತಿನೇನಿ ನಾಗೇಂದ್ರರಾವ್ (ನಾನಿ) ಕಂಚಿನ ನಂದಿವಿಗ್ರಹ ನೀಡಿ ಹೆಚ್ಚುವರಿ ಪೊಲೀಸ್ ಆಯುಕ್ತ ಚಂದ್ರಶೇಖರ್ ರವರನ್ನು ಸನ್ಮಾನಿಸಿದರು.
ಸನ್ಮಾನ ಸಮಾರಂಭದಲ್ಲಿ ನಿವೃತ್ತ ಜಿಲ್ಲಾಧಿಕಾರಿ ರಾಮಾಂಜಿನೇಯ್ಯ, ಜೆಡಿಎಸ್ ಜಿಲ್ಲಾಧ್ಯಕ್ಷ ಆರ್ ಸಿ ಅಂಜನಪ್ಪ, ಮಖಂಡರಾದ ಮಾನಂ ವೆಂಕಟಸ್ವಾಮಿ, ಮಾನ್ಯ ಶಶಿಕಿರಣ್, ರಾಮಾಂಜಿನರೆಡ್ಡಿ, ದೊಡ್ಡಹಳ್ಳಿ ಆಶೋಕ್ , ವೈದ್ಯರಾದ ಜಗದೀಶ್, ಚಕ್ರರೆಡ್ಡಿ, ಓಂಕಾರ ನಾಯಕ್ ಮತಿತ್ತರರು ಹಾಜರಿದರು.