Janataa24 NEWS DESK
ತುರುವೇಕೆರೆ ತಾಲೂಕಿನ ಹಾಲಿ ಶಾಸಕರಾದ ಎಂಟಿ ಕೃಷ್ಣಪ್ಪನವರ 73ನೇ ಹುಟ್ಟುಹಬ್ಬವನ್ನು ಇಂದು ತಾಲೂಕಿನ ಕಾರ್ಯಕರ್ತರು ಬಹಳ ಅದ್ದೂರಿಯಾಗಿ ಆಚರಿಸಿದರು.

ಇದೇ ವೇಳೆ ಮಾತನಾಡಿದ ಶಾಸಕರು ನಾನು ತುರುವೇಕೆರೆ ಕ್ಷೇತ್ರದಲ್ಲಿ ಸತತ ಮೂರು ಬಾರಿ ಗೆದ್ದಿದ್ದೇನೆ.

ಕಳೆದ ಒಂದು ಬಾರಿ ಬಹಳ ಕಡಿಮೆ ಅಂತರದಿಂದ ಸೋತಿದ್ದು ಈ ಬಾರಿ ನನಗೆ ಅತಿಹೆಚ್ಚಿನ ಮತಗಳನ್ನು ಕೊಟ್ಟು ನನ್ನ ಗೆಲುವಿಗೆ ಕಾರಣರಾಗಿದ್ದೀರಾ, ಇದು ನನ್ನ ಗೆಲುವಲ್ಲ ಇದು ನಿಮ್ಮ ಗೆಲುವು, ಹಾಗಾಗಿ ಯಾವುದೇ ಕಾರಣಕ್ಕೂ ನಮ್ಮ ತಾಲೂಕಿನಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ಮಾಡುವುದೇ ನನ್ನ ಗುರಿಯಾಗಿದೆ ಎಂದರು.
ಜೊತೆಗೆ ನಮ್ಮ ತಾಲೂಕಿನ ದಬ್ಬೇಘಟ್ಟ ಹೋಬಳಿಯಲ್ಲಿ ಈ ಬಾರಿ ಅತಿ ಹೆಚ್ಚಿನ ಮತವನ್ನು ಕೊಟ್ಟು ನನ್ನ ಗೆಲುವಿಗೆ ನೀವು ಕೂಡ ಪಾತ್ರರಾಗಿದ್ದು ನಿಮಗೆ ನನ್ನ ಹೃತ್ಪೂರ್ವಕ ವಂದನೆಗಳನ್ನ ಅರ್ಪಿಸುತ್ತೇನೆ.
ಜೊತೆಗೆ ತಾಲೂಕಿನ ಎಲ್ಲಾ ಹೋಬಳಿಯ ಕಾರ್ಯಕರ್ತರು ನನ್ನ ಗೆಲುವಿಗೆ ಶ್ರಮಿಸಿ ಹಗಲು ರಾತ್ರಿ ಎನ್ನದೆ ನನ್ನ ಗೆಲುವಿಗೆ ನೀವು ಕೂಡ ಕಾರಣರಾಗಿದ್ದೀರಾ ,ನಿಮಗೂ ಕೂಡ ಅಭಿನಂದನೆಯನ್ನು ಸಲ್ಲಿಸುತ್ತೇನೆ.

ಜೊತೆಗೆ ಈ ನನ್ನ ಹುಟ್ಟುಹಬ್ಬವನ್ನು ಬಹಳ ಸರಳವಾಗಿ ಆಚರಿಸಿಕೊಳ್ಳಬೇಕೆಂದು ಕೊಂಡಿದ್ದೆ ಆದರೆ ನಮ್ಮ ತಾಲೂಕಿನ ಗುತ್ತಿಗೆದಾರರ ಮಿತ್ರರು ಈ ಹುಟ್ಟುಹಬ್ಬವನ್ನು ಬಹಳ ಅದ್ದೂರಿಯಾಗಿ ಆಚರಿಸುತ್ತಿದ್ದಾರೆ ಅವರಿಗೂ ಕೂಡ ನನ್ನ ಅಭಿನಂದನೆಗಳು ಎಂದರು.
ಇದೇ ಸಂದರ್ಭದಲ್ಲಿ ನೂರಾರು ಕಾರ್ಯಕರ್ತರು ಗುತ್ತಿಗೆದಾರರು ಹಾಜರಿದ್ದು ಶಾಸಕರ ಹುಟ್ಟುಹಬ್ಬವನ್ನು ಬಹಳ ಸಂತೋಷವಾಗಿ ಆಚರಿಸಿದರು.
ಇದೇ ವೇಳೆ ಮುಖಂಡರಾದ ವೆಂಕಟಪುರ ಯೋಗೀಶ್, ಎಡಗಿಹಳ್ಳಿ ವಿಶ್ವನಾಥ್, ದೇವರಾಜು ,ಕಲ್ಲು ಬೋರನಹಳ್ಳಿ ಜಯರಾಮಯ್ಯ, ಲೋಕೇಶ್ ಬಾಬು, ತಾವರೆಕೆರೆ ಕೆಂಪೇಗೌಡ, ಸ್ವರವನಹಳ್ಳಿ ಸ್ವಾಮಿ ,ಇನ್ನೂ ನೂರಾರು ಗುತ್ತಿಗೆದಾರರು ಜೊತೆಗೆ ಕಾರ್ಯಕರ್ತರು ಈ ಹುಟ್ಟು ಹಬ್ಬದಲ್ಲಿ ಪಾಲ್ಗೊಂಡಿದ್ದರು.
ವರದಿ
ತುರುವೇಕೆರೆ: ಮಂಜುನಾಥ್ ಕೆ ಎ