Janataa24 NEWS DESK

ತುರುವೇಕೆರೆ : ವಿದ್ಯುತ್ ಸ್ಪರ್ಶಿಸಿ ಹಸು ದಾರುಣ ಸಾವನ್ನಪ್ಪಿರುವ ಘಟನೆ ತಾಲೂಕಿನ ಕೊಡಗಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂಳೆಕೆರೆ ಗ್ರಾಮದಲ್ಲಿ ನಡೆದಿದೆ.
ಇದೇ ಗ್ರಾಮದ ಶಾಂತಮ್ಮ ಎಂಬ ರೈತ ಮಹಿಳೆ ಎಂದಿನಂತೆ ತನ್ನ ಹಸುವನ್ನು ಮಧ್ಯಾಹ್ನ ಸುಮಾರು 3:30ರ ಸಮಯದಲ್ಲಿ ತಮ್ಮ ಗ್ರಾಮದ ಗೋಣಿ ತುಮಕೂರು ತುರುವೇಕೆರೆ ಮುಖ್ಯರಸ್ತೆಯಲ್ಲಿ ಮೇಯಿಸುತ್ತಿದ್ದು ಹಸು ಮೇವನ್ನು ಮೇಯುತ್ತಾ ರಸ್ತೆ ಪಕ್ಕದಲ್ಲಿ ಅಳವಡಿಸಿರುವ ಟಿ ಸಿ ಯ ಬಳಿಗೆ ಹೋಗಿದೆ ಈ ಟಿ ಸಿ ಯ ಕಂಬದಿಂದ ಹಸುವಿಗೆ ವಿದ್ಯುತ್ ಪ್ರವಹಿಸಿ ತಕ್ಷಣ ಹಸುವು ಒದ್ದಾಡಿ ಧಾರಣ ಸಾವನ್ನಪ್ಪಿದೆ .

ಅದೃಷ್ಟವಶಾತ್ ಈ ಹಸುವನ್ನು ಮೇಯಿಸುತ್ತಿದ್ದ ರೈತ ಶಾಂತಮ್ಮಳು ಆಶ್ಚರ್ಯ ರೀತಿಯಲ್ಲಿ ಪಾರಾಗಿದ್ದಾಳೆ .
ಇದೇ ದಾರಿಯಲ್ಲಿ ಕಾರ್ಯನಿಮಿತ್ತ ಹೋಗುತ್ತಿದ್ದ ಈ ಸಂಜೆ ಪತ್ರಿಕೆಯ ತಾಲೂಕು ವರದಿಗಾರರಾದ ಮನೋಹರ ಎಂಬುವರ ಸಮಯಪ್ರಜ್ಞೆಯಿಂದ ಈಕೆಯನ್ನು ಈ ಅನಾಹುತದಿಂದ ತಪ್ಪಿಸಿ ಕೂಡಲೇ ಬೆಸ್ಕಾಂ ಅಧಿಕಾರಿಗಳಿಗೆ ದೂರವಾಣಿ ಮುಖಾಂತರ ಕರೆ ಮಾಡಿ ಈ ಮಾರ್ಗದಲ್ಲಿ ಸರಬರಾಜಾಗುವ ವಿದ್ಯುತ್ ಕಟ್ ಮಾಡಿಸಿರುತ್ತಾರೆ ಇವರ ಈ ಸಮಯಪ್ರಜ್ಞೆಗೆ ದಾರಿಯಲ್ಲಿ ಹೋಗುತ್ತಿದ್ದ ಸಾರ್ವಜನಿಕರಿಂದ ಪ್ರಶಂಸೆಯು ವ್ಯಕ್ತವಾಗಿದ್ದು ಇನ್ನು ಮುಂದಾದರೂ ಬೆಸ್ಕಾಂ ಸಿಬ್ಬಂದಿ ಮತ್ತು ಅಧಿಕಾರಿಗಳು ಈ ಟಿಸಿಯ ಕಂಬದ ಬಗ್ಗೆ ಗಮನಹರಿಸಿ ಕಂಬಕ್ಕೆ ತಡೆಗೋಡೆಯನ್ನು ಹಾಕಿಸಿ ಅನಾಹುತಗಳನ್ನು ತಪ್ಪಿಸಬೇಕೆಂದು ಮಾಧ್ಯಮದ ಈ ಮಾಧ್ಯಮದ ಒತ್ತಾಯವಾಗಿದೆ

ಆದರೆ ಈ ಮಹಿಳೆಯು ತನ್ನ ಜೀವನವನ್ನು ನಿರ್ವಹಿಸಲು ಸಹಕಾರಿಯಾಗಿದ್ದ ಈ ಹಸುವಿನ ಸಾವಿನಿಂದ ಕಂಗೆಟ್ಟಿದ್ದಾಳೆ .
ಸಾವನ್ನಪ್ಪಿರುವ ಹಸುವು ಸುಮಾರು 45 ಸಾವಿರಗಳಿಂದ 50,000 ರೂಗಳ ಬೆಲೆಯುಳ್ಳದ್ದಾಗಿದೆ ಈ ಹಸುವಿನ ಸಾವಿಗೆ ಸರ್ಕಾರವು ಬಡ ರೈತ ಮಹಿಳೆಗೆ ಪರಿಹಾರವನ್ನು ನೀಡಬೇಕೆಂದು ಮಹಿಳೆಯು ಮಾಧ್ಯಮದ ಮುಂದೆ ಮನವಿ ಮಾಡುತಿದ್ದ ದೃಶ್ಯ ಮನ ಕಲಕುವಂತಿತ್ತು.
ವರದಿ
ತುರುವೇಕೆರೆ: ಮಂಜುನಾಥ್


