Janataa24 NEWS DESK
ಕುಷ್ಟಗಿ: ತಾಲೂಕಿನ ಕಳಮಳ್ಳಿ ತಾಂಡಾದಲ್ಲಿ ವಿದ್ಯುತ್ ತಂತಿ ರೂಪದಲ್ಲಿ ಜವರಾಯನ ಅಟ್ಟಹಾಸಕ್ಕೆ ಜಾನುವಾರುಗಳು ದುರ್ಮರಣ.

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಕಿಲಾರಹಟ್ಟಿ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಕಳಮಳ್ಳಿ ತಾಂಡಾ ದಲ್ಲಿ ವಿದ್ಯುತ್ ತಂತಿ ರೂಪದಲ್ಲಿ ಜವರಾಯ ಅಟ್ಟಹಾಸ ಮೆರೆದಿದ್ದು ಜವರಾಯನ ಅಟ್ಟಹಾಸ ಕ್ಕೆ ಮುಕ್ಕೋಟಿ ದೇವರುಗಳನ್ನು ಮಡಿಲಲ್ಲಿ ಹೊತ್ತ ಪುಣ್ಯ ಕೋಟಿ ಹಸುಗಳು, ಅಮಾಯಕ ಹಸುಗಳು ಬಲಿಯಾಗಿವೆ.

ಸಾಮಾನ್ಯವಾಗಿ ಹಳ್ಳಿಗಳಲ್ಲಿ ವಿದ್ಯುತ್ ಮುಖ್ಯ ತಂತಿ ಯ ಕೆಳಗಿನ ಜಾಗದಲ್ಲಿ ಅಥವಾ ವಿದ್ಯುತ್ ಕಂಬಗಳಿಗೆ ಜಾನುವಾರುಗಳನ್ನು ಕಟ್ಟುವುದು
ವಾಡಿಕೆಯಲ್ಲಿ ಇರುವಂತದ್ದು, ಆ ವಾಡಿಕೆಯೇ ಇಂದು ಅಮಾಯಕ ಜಾನುವಾರುಗಳ ಮರಣಕ್ಕೆ ಕಾರಣವಾಯಿತು ಎಂದರೆ ಎಂತಹ ದುರ್ದೈವದ ವಿಚಾರ.
ಇನ್ನು ವಿದ್ಯುತ್ ತಂತಿ ಹರಿದಿರುವ ವಿಚಾರಕ್ಕೆ ಬಂದರೆ ಇಲ್ಲಿನ ಹೆಸ್ಕಾಂ ಹಾಗೂ ಕೆ. ಇ. ಬಿ ಇಲಾಖೆಯವರ ಕಾರ್ಯಕ್ಷಮತೆಯಲ್ಲಿನ ನಿರ್ಲಕ್ಷತನವೂ ಕಾರಣವಿರಬಹುದಾ ಎಂಬುದು ತನಿಖೆಯಿಂದ ತಿಳಿದು ಬರಬೇಕಾಗಿದೆ.
ಇನ್ನು ಜಾನುವಾರುಗಳನ್ನು ಕಳೆದುಕೊಂಡ ಕಳಮಳ್ಳಿ ತಾಂಡಾದ ರೈತರ ಆಕ್ರಂದನ ಮುಗಿಲುಮುಟ್ಟಿತ್ತು.
ವರದಿ
ಕೊಪ್ಪಳ:- ರಾಜೇಶ್. ಎಸ್. ದೇಸಾಯಿ