Janataa24 NEWS DESK
ಪೋಲಿಸ್ ವೃತ್ತಿ ಜೀವನದಲ್ಲಿ ಪಾರದರ್ಶಕತೆ ಕಾಪಾಡಿಕೊಂಡು ಬಂದು ಇಂದು ವಯೋ ನಿವೃತ್ತಿ ಗೊಳ್ಳತ್ತಿದ್ದೆನೆ: ಪಿಎಸ್ಐ ಟಿ.ಎನ್.ಪಾಪಣ್ಣ ತಿಳಿಸಿದರು.

ಪಾವಗಡ: ಪಟ್ಟಣದ ಪೋಲಿಸ್ ಠಾಣೆಯಲ್ಲಿ ಕೇವಲ ನಾಲ್ಕು ತಿಂಗಳು ಪ್ರಾಮಾಣಿಕವಾಗಿ ಹಾಗೂ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿ ವಯೋ ನಿವೃತ್ತಿಗೊಳ್ಳುತ್ತಿರುವ ಪಿಎಸ್ಐ, ಟಿಎನ್. ಪಾಪಣ್ಣ ಅವರಿಗೆ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಇದೇ ವೇಳೆ ನಿವೃತ್ತಿಗೊಳ್ಳುತ್ತಿರುವ ಪಿಎಸ್ಐ ಟಿ.ಎಸ್.ಪಾಪಣ್ಣ ರವರು ಮಾತನಾಡು ನಲವತ್ತು ವರ್ಷಗಳ ಕಾಲ ಪೋಲಿಸ್ ಇಲಾಖೆ ಯಲ್ಲಿ ವಿವಿಧ ಜಿಲ್ಲೆಗಳಲ್ಲಿ ಕೆಲಸ ಮಾಡಿ ಇಂದು ಪಾವಗಡ ಠಾಣೆಯಲ್ಲಿ ನಿವೃತ್ತಿ ಹೊಂದಿದ್ದೆನೆ.

ವೃತ್ತಿ ಜೀವನದಲ್ಲಿ ಎಲ್ಲಿಯೂ ಸಹ ಹೊಂದಾಣಿಕೆ ಮಾಡಿಕೊಂಡಿರಲಿಲ್ಲ ಈ ಹಿಂದೆ ಕರ್ತವ್ಯ ಸಲ್ಲಿಸುತ್ತಿದ್ದ ಒಂದು ಕಡೆ ಮಾಧ್ಯಮ ವ್ಯಕ್ತಿಯ ವಿಚಾರವಾಗಿ ಕ್ರಮ ಕೈಗೊಂಡಿದ್ದೆ ಆದರೆ ಬಹಳಷ್ಟು ದೊಡ್ಡದಾದ ಒತ್ತಡಗಳು ನನ್ನ ಮೇಲೆ ಬಂದರೂ ಸಹ ಯಾವುದೇ ರೀತಿಯಲ್ಲಿ ಒಪ್ಪಂದ ಆಗದೆ ವೃತ್ತಿಗೆ ಗೌರವ ಸಲ್ಲಿಸುವ ರೀತಿಯಲ್ಲಿ ಕೆಲಸ ಮಾಡಿ ಹಿನ್ನೆಲೆಯಲ್ಲಿ ನ್ಯಾಯ ನನ್ನ ಕಡೆಯೇ ಆಯಿತು.

ಹಾಗಾಗಿ ನಾನು ಹೇಳುವುದೇನೆಂದರೆ ಇಲ್ಲಿರುವ ಸಿಬ್ಬಂದಿಗಳಿಗೆ ಕರ್ತವ್ಯದಲ್ಲಿ ನಿಷ್ಠೆ ನ್ಯಾಯ ಪ್ರಾಮಾಣಿಕ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿ ಉತ್ತಮ ಹೆಸರು ಪಡೆದುಕೊಳ್ಳಿ ಎಂದರು.
ನಾವು ಪ್ರಮಾಣಿಕ ರೀತಿಯಲ್ಲಿ ಕೆಲಸ ನಿರ್ವಹಿಸಿದಾಗ ಯಾವೊಂದು ಸಮಸ್ಯೆ ನಮ್ಮ ಮೇಲೆ ಬರಲು ಸಾಧ್ಯವಿಲ್ಲ .

ನಾನು ಹೋದ ಕಡೆಯಲ್ಲ ಪ್ರಮಾಣಿಕ ಕೆಲಸ ಮಾಡಿದ ಹಿನ್ನೆಲೆಯಲ್ಲಿ ಉತ್ತಮ ಸಹಕಾರ ಸಿಕ್ಕಿತು ಇಲ್ಲೂ ಸಹ ಜನರು ಮಾದ್ಯಮ ಮಿತ್ರರು ಉತ್ತಮ ಸಹಕಾರ ನೀಡಿದ್ದಾರೆ ಎಂದರು.
ನಂತರ ಸಿಪಿಐ ಸಾರಥಿ ಮಾತನಾಡಿ ನಮ್ಮ ಠಾಣೆಯ ಪಿಎಸ್ಐ ಟಿ.ಎನ್.ಪಾಪಣ್ಣ ವೃತ್ತಿಯಿಂದ ನಿವೃತ್ತರಾಗುತ್ತಿರುವ ಬೇಸರ ತಂದಿದೆ ಇಂತಹ ಅಧಿಕಾರಿಗಳು ಅವಶ್ಯಕತೆ ನಮ್ಮ ಠಾಣೆಗೆ ಬೇಕಾಗಿತ್ತು ಸಾರ್ವಜನಿಕರಲ್ಲಿ ಹೊಂದಾಣಿಕೆ ಮನೋಭಾವ ಮತ್ತು ಸಾರ್ವಜನಿಕರಲ್ಲಿ ಉತ್ತಮವಾದ ಒಡನಾಟ ಇತ್ತು.ಯಾವುದೇ ಸಂದರ್ಭದಲ್ಲಿ ವೃತ್ತಿಯಲ್ಲಿ ಮಾತ್ರ ಹೊಂದಾಣಿಕೆ ಮಾಡಿಕೊಳ್ಳದೆ ಪ್ರಮಾಣಿಕವಾಗಿ ಕೆಲಸ ಮಾಡುತ್ತಿದ್ದ ಅಂತ ವ್ಯಕ್ತಿಯನ್ನು ನಾವು ಇಂದು ಬೀಳ್ಕೊಡುಗೆ ನೀಡುತ್ತಿದ್ದೇವೆ. ಮುಂದಿನ ಜೀವನ ಇವರಿಗೆ ಉತ್ತಮ ಆರೋಗ್ಯ ಸಂಪತ್ತು ಕುಟುಂಬ ಜೊತೆಯಲ್ಲಿ ಶಾಂತಿ ನೆಮ್ಮದಿಯಿಂದ ಜೀವನ ಮಾಡಲಿ ಎಂಬುದಾಗಿ ಹಾರೈಸುತ್ತೇನೆ ಎಂದರು.
ಇದೇ ವೇಳೆ ಪಾವಗಡ ಠಾಣೆಯ ಸಿಪಿಐ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂತೋಷ ರವರಿಗೆ ಲೋಕ ಯುಕ್ತ ಇಲಾಖೆಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಇದೇ ಸಂದರ್ಭದಲ್ಲಿ ಬೀಳ್ಕೊಡುಗೆ ಹಮ್ಮಿಕೊಳ್ಳಲಾಗಿತ್ತು.
ಎ.ಎಸ್.ಐ ಗಳಾದ ಸಿದ್ದಯ್ಯ.ಗೋವಿಂದಪ್ಪ.ರಾಮಚಂದ್ರ. ಎಲ್ಲಾ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ವರದಿ:ಇಮ್ರಾನ್ ಉಲ್ಲಾ.
ಪಾವಗಡ