Document

ವಾರ್ಡ್ ಸಭೆಯಲ್ಲಿ ಪತ್ನಿಯ ಬದಲಿಗೆ ಪತಿಯ ದರ್ಬಾರ್

ತುರುವೇಕೆರೆ: ಮಂಜುನಾಥ್

ತುರುವೇಕೆರೆ ತಾಲೂಕಿನ ಕಸಬಾ ಹೋಬಳಿ ಕೊಡಗಿಹಳ್ಳಿ ಪಂಚಾಯತಿ ವ್ಯಾಪ್ತಿಯ ಸೂಳೆಕೆರೆ ಗ್ರಾಮದ ಶ್ರೀ ಗಣಪತಿ ದೇವಾಲಯದ ಆವರಣದಲ್ಲಿ ಇಂದು ಪಂಚಾಯತಿ ಉಪಾಧ್ಯಕ್ಷ ಮುನಿಸ್ವಾಮಿಯವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಡ್ ಸಭೆಯಲ್ಲಿ ಸದಸ್ಯ ಸವಿತಾ ರವರು ಗೈರು ಹಾಜರಾಗಿದ್ದು ಈ ಸಭೆಯ ದರ್ಬಾರನ್ನು ಈಕೆಯ ಪತಿ ಯೋಗೇಶ್ ಕುಮಾರ್ ಮಾಡಿರುವ ಘಟನೆ ನಡೆದಿದೆ.

Screenshot 2022 12 15 144608

ವಾರ್ಡ್ ಗ್ರಾಮಸ್ಥರುಗಳಿಗೆ ಸರಿಯಾದ ಮಾಹಿತಿ ಇಲ್ಲದಿದ್ದರೂ ಗ್ರಾಮಸ್ಥರುಗಳ ಸಂಖ್ಯೆ ನಾಲ್ಕರಿಂದ ಐದು ಜನರಿದ್ದರು ಸಭೆ ನಡೆದಿದೆ ಸಭೆಯಲ್ಲಿ ಭಾಗವಹಿಸಿದ್ದ ಗ್ರಾಮಸ್ಥರು ತಮ್ಮ ಹವಾಲುಗಳನ್ನು ಹಾಗೂ ಕುಂದು ಕೊರತೆಗಳನ್ನು ಕೇಳಿಕೊಂಡಾಗ ಸವಿತಾ ರವರ ಪತಿ ಸಮಜಾಯಿಸಿ ಉತ್ತರಗಳನ್ನು ನೀಡುತ್ತಾ ತಾನೇ ಸದಸ್ಯ ಎಂಬ ಮನೋಭಾವದಿಂದ ವರ್ತಿಸಿರುತ್ತಾರೆ.

Screenshot 2022 12 15 144627

ಈ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದಾಗ ನಾನೇಕೆ ಈ ಜಾಗದಲ್ಲಿ ಕುಳಿತುಕೊಳ್ಳಬಾರದು ಎಂದು ಮರು ಪ್ರಶ್ನೆಯನ್ನು ಹಾಕಿರುತ್ತಾನೆ ಕ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳಿಗೆ ವಿಚಾರ ಮಾಡಲಾಗಿ ಅವರು ಕೂಡ ಹಾರಿಕೆಯ ಉತ್ತರವನ್ನು ನೀಡಿ ಮಾತನಾಡಿರುತ್ತಾರೆ ಆದುದರಿಂದ ಮತ್ತೊಮ್ಮೆ ವಾರ್ಡ್ ಸಭೆ ಕರೆಯಲು ಗ್ರಾಮಸ್ಥರು ಒತ್ತಾಯಿಸಿರುತ್ತಾರೆ.

WhatsApp Image 2022 12 15 at 2.42.30 PM

ಈ ಸಭೆಯಲ್ಲಿ ಪ್ರೋಟೋಕಾಲ್ ಉಲ್ಲಂಘನೆ ಮಾಡಿರುವ ಹಾಗೂ ಉಲ್ಲಂಘನೆ ಮಾಡುವಲ್ಲಿ ಭಾಗಿಯಾಗಿರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿಗಳ ವಿರುದ್ಧ ಕಾನೂನು ರೀತಿಯ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ

Document

Leave a Reply

Your email address will not be published. Required fields are marked *