Janataa24 NEWS DESK

ಐತಿಹಾಸಿಕ ಭೀಮೋತ್ಸವ ಸೋದರತ್ವ ಕಾರ್ಯಕ್ರಮಕ್ಕೆ ಸಾಕ್ಷಿಯಾದ ತುರುವೇಕೆರೆ ತಾಲೂಕು.
ತುರುವೇಕೆರೆ: ಪಟ್ಟಣದ ಹೃದಯ ಭಾಗದಲ್ಲಿರುವ ಕೆ ಈರಣ್ಣಯ್ಯ ಬಯಲು ರಂಗಮಂದಿರದಲ್ಲಿ ,ಇಂದು ನಡೆದ ಭೀಮೋತ್ಸವ ಕಾರ್ಯಕ್ರಮ ಐತಿಹಾಸಕ ಕ್ಷಣಕ್ಕೆ ಸಾಕ್ಷಿಯಾಯಿತು.

ಇನ್ನು ಈ ಕಾರ್ಯಕ್ರಮವನ್ನು ತುರುವೇಕೆರೆ ಪಟ್ಟಣದಲ್ಲಿರುವ ಶ್ರೀ ಆದಿಜಾಂಭವ ಕ್ಷೇಮಾಭಿವೃದ್ಧಿ ಸೇವಾ ಸಮಿತಿ ವತಿಯಿಂದ ಸಂಸ್ಥಾಪಕ ಅಧ್ಯಕ್ಷರಾದ ಮೂರ್ತಿ ಸಿ ಎಸ್ ರವರು ಆಯೋಜನೆ ಮಾಡಲಾಗಿದ್ದು.
ಈ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೊಮ್ಮಗ ರಾಜರತ್ನ ಅಂಬೇಡ್ಕರ್ ರವರ ಆಗಮನವಂತು, ಇಡೀ ತಾಲೂಕಿನ ಜನತೆಗೆ ಎಲ್ಲಿಲ್ಲದ ಸಂಚಲನ ಮೂಡಿಸಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ರಾಜರತ್ನ ಅಂಬೇಡ್ಕರ್, ಹಾಗೂ ಸಚಿವರಾದ ಸತೀಶ್ ಜಾರಕಿಹೊಳಿ, ಜೊತೆಗೆ ದಿವ್ಯ ಸಾನಿಧ್ಯ ವಹಿಸಿದ್ದ ಜ್ಞಾನಪ್ರಕಾಶ್ ಸ್ವಾಮೀಜಿ, ಸಂಜಯ್ ಕುಮಾರ್ ಸ್ವಾಮೀಜಿ ಅವರು, ತಮಟೆ ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಇದೇ ವೇಳೆ ಮಾತನಾಡಿದ ಕಾರ್ಯಕ್ರಮದ ರೂವಾರಿ ಹಾಗೂ ಅಧ್ಯಕ್ಷತೆಯನ್ನು ವಹಿಸಿದ್ದ ಮೂರ್ತಿ ಸಿ ಎಸ್ ಅವರು ಈ ಕಾರ್ಯಕ್ರಮದ ಉದ್ದೇಶ ಶಿಕ್ಷಣದ ಬಗ್ಗೆ ಅರಿವು, ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಸಮಾನತೆಯ ಸಂಕೇತ ಎಂದರು,
ಮುಂದುವರಿದು ಮಾತನಾಡಿದ ಅವರು ಸರ್ಕಾರಕ್ಕೆ ಜಾತಿಗಣತಿ ಮತ್ತು ಎಜೆ ಸದಾಶಿವ ಆಯೋಗ ಜಾರಿ ಮಾಡುವಂತೆ ಈ ತಾಲೂಕಿನ ಜನತೆಯ ಪರವಾಗಿ ಸರ್ಕಾರಕ್ಕೆ ಒತ್ತಾಯಿಸಿದರು.

ಒಟ್ಟಾರೆ ತುರುವೇಕೆರೆ ಪಟ್ಟಣ, ನಡೆದ ಭೀಮೋತ್ಸವ ಕಾರ್ಯಕ್ರಮದ ಜೊತೆಗೆ ಕಾರ್ಯಕ್ರಮಕ್ಕೆ ರಾಜರತ್ನಂ ಅಂಬೇಡ್ಕರ್ ಅವರ ಆಗಮನವಂತು ಕಾರ್ಯಕ್ರಮಕ್ಕೆ ಹೆಚ್ಚಿನ ಮೆರಗನ್ನು ಕೊಟ್ಟು ,ಐತಿಹಾಸಿಕ ಭೀಮೋತ್ಸವ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು.

ಈ ಕಾರ್ಯಕ್ರಮದಲ್ಲಿ ವಿವಿಧ ತಾಲೂಕುಗಳ ದಲಿತ ಮುಖಂಡರುಗಳು,ಹಲವಾರು ಸಂಘಟನೆಗಳ ಪದಾಧಿಕಾರಿಗಳು ಹಾಗೂ ತಾಲೂಕಿನ ಭೀಮ ಬಂಧುಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ಸಿನತ್ತ ಕೊಂಡೊಯ್ದರು.
ವರದಿ
ತುರುವೇಕೆರೆ: ಮಂಜುನಾಥ್