ವರದಿ: ಕಾಂತರಾಜು -ಗುಂಡ್ಲುಪೇಟೆ
ಗುಂಡ್ಲುಪೇಟೆ: ಅಖಿಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ (AICC ) ನೂತನ ಸಾರಥಿಯಾಗಿ ಹಿರಿಯ ಮುತ್ಸದಿ ಮಲ್ಲಿಕಾರ್ಜುನ ಖರ್ಗೆ ರವರು ಆಯ್ಕೆ ಗೊಂಡಿದ್ದಾರೆ. ಮೊನ್ನೆ ಸೋಮವಾರದಂದು AICC ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದ ಮಲ್ಲಿಕಾರ್ಜುನ ಖರ್ಗೆ ಮತ್ತು ಕೇರಳ ರಾಜ್ಯದ ಶಶಿತರೂರು ನಡುವೆ ನೇರ ಹಣಾಹಣಿ ನಡೆದಿತ್ತು. ದೇಶದ ಅತ್ಯಂತ ಹಳೆಯ ಪಕ್ಷ ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷರು ಯಾರಾಗಲಿದ್ದಾರೆ ಎಂಬ ಕುತೂಹಲಕ್ಕೆ ಬುಧವಾರ ಇಂದು ಅಂತಿಮ ತೆರೆ ಬಿದ್ದಿದೆ.ಆಂತರಿಕ ಚುನಾವಣಾ ಫಲಿತಾಂಶದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ 7897 ಮತಗಳನ್ನು ಪಡೆದು ವಿಜಯದ ಮಾಲೆ ಮುಡಿಗೆರಿಸಿ ಕೊಂಡಿರುವ ಸಾಧನೆ ಸಾಮಾನ್ಯದ ವಿಚಾರವಲ್ಲ. ಇವರ ಪ್ರತಿಸ್ಪರ್ಧಿ ಕೇರಳದ ಸಂಸದ ಶಶಿ ತರೂರ್ ರವರು 1072 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ. 24 ವರ್ಷಗಳ ನಂತರ ಗಾಂಧಿಯೇತರ ಕುಟುಂಬದ ಒಬ್ಬರಿಗೆ ಅವಕಾಶ ಒದಗಿ ಬಂದಿರುವುದು ಐತಿಹಾಸಿಕ ಘಟನೆಗೆ ಸಾಕ್ಷಿಯಾಗಿದೆ ಎಂದೇ ಕರೆಯಲಾಗುತ್ತದೆ.
ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಯವರ ಸಂಪೂರ್ಣ ಬೆಂಬಲ ಇತ್ತು ಮತ್ತು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿಯನ್ನು ವಹಿಸಿಕೊಂಡು ನಡೆಸುತ್ತಾರೆಂಬ ಭರವಸೆ ಇವರ ಮೇಲೆ ಹೆಚ್ಚಿತ್ತು. ಹಾಗಾಗಿಯೇ ಮಲ್ಲಿಕಾರ್ಜುನ ಖರ್ಗೆಯವರಿಗೆ ಗೆಲುವು ಖಚಿತವಾಗಿತ್ತು ಎಂಬುದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದ್ದ ಸುದ್ದಿ. ಅದು ಈ ಫಲಿತಾಂಶದ ಮೂಲಕ ಧೃಡ ಪಟ್ಟಿದೆ. 137 ವರ್ಷಗಳ ಸುಧೀರ್ಘ ಇತಿಹಾಸವನ್ನು ಹೊಂದಿರುವ ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕ ರಾಜ್ಯದಿಂದ ಎಸ್ .ನಿಜಲಿಂಗಪ್ಪ ರವರ ನಂತರ ಮಲ್ಲಿಕಾರ್ಜುನ ಖರ್ಗೆ ರವರು ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಕನ್ನಡಿಗರೆಲ್ಲರ ಹೆಮ್ಮೆಯ ವಿಷಯ .
ಇಂದು ನಡೆದ ಮತ ಎಣಿಕೆಯು ಬಹಳ ಕುತೂಹಲವನ್ನು ಉಂಟು ಮಾಡಿತ್ತು. ಶ್ರೀಮತಿ ಇಂದಿರಾ ಗಾಂಧಿಯವರ ಕಾಲದಿಂದಲೂ ರಾಜಕೀಯ ಕ್ಷೇತ್ರದಲ್ಲಿ ಇದ್ದು, ಸುಧೀರ್ಘ ಅನುಭವದೊಂದಿಗೆ, ಕಾಂಗ್ರೆಸ್ ಪಕ್ಷದ ನಿಷ್ಠಾವಂತ ರಾಜಕಾರಣಿ ಎನಿಸಿ ಕೊಂಡಿದ್ದರು. ಅವರ 53 ವರ್ಷಗಳ ರಾಜಕೀಯ ಜೀವನದಲ್ಲಿ ಕಳಂಕ ರಹಿತ ಶುದ್ಧ ರಾಜಕೀಯ ಜೀವನ ನಡೆಸಿರುವ ಹೆಗ್ಗಳಿಕೆ ಇವರದು. ನ್ಯಾಯ ನಿಷ್ಠೆ ಮತ್ತು ಬದ್ಧತೆಯ ಪ್ರಾಮಾಣಿಕ ರಾಜಕೀಯ ಮುತ್ಸದಿ .ಹಾಗೂ ಇಂದಿರಾಗಾಂಧಿ ರವರ ಕುಟುಂಬದವರ ಪರಮಾಪ್ತ ವಲಯದಲ್ಲಿ ಗುರುತಿಸಿ ಕೊಂಡವರಲ್ಲಿ ಇವರು ಒಬ್ಬರು ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಒಂಬತ್ತು ಭಾರಿ ವಿಧಾನ ಸಭಾ ಸದಸ್ಯರಾಗಿ ,ಎರಡು ಭಾರಿ ಸಂಸದರಾಗಿ ಆಯ್ಕೆ ಆಗಿ ಸೋಲಿಲ್ಲದ ಸರದಾರ ಎನಿಸಿಕೊಂಡ ಏಕೈಕ ವ್ಯಕ್ತಿ ಮತ್ತು ಎಲ್ಲರೊಂದಿಗೂ ವಿಶ್ವಾಸವನ್ನು ಇರಿಸಿಕೊಂಡ ಅಜಾತಶತ್ರು. ರಾಜ್ಯದಲ್ಲಿ ಶಾಸಕರಾಗಿ, ಅನೇಕರ ಮಂತ್ರಿ ಮಂಡಲದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ, ಜತೆಗೆ ವಿರೋಧ ಪಕ್ಷದ ನಾಯಕರಾಗಿಯೂ ಹೆಸರು ಮಾಡಿದವರು. ರಾಜ್ಯ ಕಾರಣದಿಂದ ಕೇಂದ್ರ ರಾಜಕಾರಣಕ್ಕೆ ಬಡ್ತಿ ಪಡೆದು ಮನಮೋಹನ್ ಸಿಂಗ್ ಅವರ ಸರ್ಕಾರದಲ್ಲಿಯೂ ರೈಲ್ವೆ ಮತ್ತು ಕಾರ್ಮಿಕ ಮಂತ್ರಿ ಯಾಗಿ ಸೇವೆ ಸಲ್ಲಿಸಿದ್ದಾರೆ, ಆನಂತರ ರಾಜ್ಯ ಸಭಾ ಸದಸ್ಯರಾಗಿ ವಿರೋಧ ಪಕ್ಷದ ನಾಯಕರಾಗಿ ಕಾಂಗ್ರೆಸ್ ಪಕ್ಷಕ್ಕೆ ಒಂದು ಹೊಸ ಭರವಸೆಯನ್ನು ಹುಟ್ಟು ಹಾಕಿದರು. ಕಾನೂನು ಪದವೀಧರರಾದ ಗಳಿಸಿ ವಕೀಲರಾಗಿ ವೃತ್ತಿ ಜೀವನ ಆರಂಭಿಸಿದರು. ಅವರು ಕನ್ನಡ, ಹಿಂದಿ,ಇಂಗ್ಲೀಷ್ ಸೇರಿದಂತೆ ಏಳೆಂಟು ಭಾಷೆಯಲ್ಲಿ ಭಾಷಾ ಪ್ರೌಢಿಮೆಯನ್ನು ಬೆಳಸಿ ಕೊಂಡು ಬಂದಿದ್ದಾರೆ. ಜತೆಗೆ ರಾಜಕೀಯ ಕ್ಷೇತ್ರದಲ್ಲಿ ಎಂದೂ ಹಿಂದೆ ತಿರುಗಿ ನೋಡಿದ್ದೆ ಇಲ್ಲ ಎನ್ನಬಹುದು. ರಾಜಕಾರಣ ಮೇಲಾಟಗಳ ಎಂಬುದು ಇವರ ವಿಚಾರದಲ್ಲಿ ಅಪವಾದ ಎಂದೆ ಹೇಳಬೇಕು. ರಾಜಕೀಯ ಕ್ಷೇತ್ರ ಎಂಬುದು ಸೇವಾ ಕ್ಷೇತ್ರ ಎಂಬುದು ಇವರ ನಡೆದು ದಾರಿಯನ್ನು ಗಮನಿಸಿದರೆ ತಿಳಿದು ಬರುತ್ತದೆ. ಈ ದೇಶದ ಎಲ್ಲರ ಅಭ್ಯುದಯಕ್ಕೆ ಹಗಲಿರುಳು ಶ್ರಮಿಸಿದ್ದಾರೆ, ಹಾಗೂ ಹೈದರಾಬಾದ್ ಕರ್ನಾಟಕ ಭಾಗಕ್ಕೆ ಪ್ರಾದೇಶಿಕ ಅಸಮಾನತೆ ನಡುವೆ ನಿವಾರಣೆ ಗಾಗಿ ಪಣ ತೊಟ್ಟು ವಿಶೇಷ ಸ್ಥಾನಮಾನವನ್ನು ಕಲ್ಪಿಸಿ ಕೊಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ. ಅವರು ಎಂದೂ ಕೂಡ ಅಧಿಕಾರಕ್ಕಾಗಿ ಲಾಭಿ ಮಾಡಿದವರೇ ಅಲ್ಲ. ಅಂತಹ ಒಂದು ದುಸ್ಸಾಯಕಕ್ಕೆ ಕೈ ಹಾಕಿದ್ದರೆ ಅವರು ಎಂದೋ ಈ ರಾಜ್ಯದ ಮುಖ್ಯ ಮಂತ್ರಿ ಆಗಿರುತಿದ್ದರು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಭೌಧ್ದ ಧಮ್ಮದ ಅನುಸಾರವಾಗಿ ಇಂದು ನಡೆಯುತ್ತಿರುವ ಖರ್ಗೆ ರವರು ಬಹಳ ತೀರಾ ಬಡತನದ ಬವಣೆಯಲ್ಲಿ ಬೆಂದು ಮೇಲೆ ಬಂದಿದ್ದಾರೆ. ಶ್ರೀ ಸಾಮಾನ್ಯರ ಸುಖ ದುಃಖ ವನ್ನು ಕಣ್ಣಾರೆ ಕಂಡು ಬೆಳೆದವರು. ಹಾಗಾಗಿ ಪ್ರಸ್ತುತ ಕಾಂಗ್ರೆಸ್ ಪಕ್ಷವನ್ನು ಪುನರ್ ಚೇತನ ಗೊಳಿಸುವ ಜವಾಬ್ದಾರಿಯೊಂದಿಗೆ ಈ ದೇಶದ ಮುಂದೆ ಅನೇಕ ಸವಾಲುಗಳು ಇವೆ ಮತ್ತು ಪ್ರಜಾಪ್ರಭುತ್ವ ಕ್ಕೆ ಉಂಟಾಗಿರುವ ಅಪಾಯವನ್ನು ನಿವಾರಿಸುವ ಬಹು ದೊಡ್ಡ ಜವಾಬ್ದಾರಿ ಇವರ ಮುಂದಿದೆ.