Janataa24 NEWS DESK

ಪಾವಗಡ ಆಮ್ ಆದ್ಮಿ ಪಾರ್ಟಿಗೆ 2ನೇ ಬಾರಿಗೆ ತಾಲೂಕು ಅಧ್ಯಕ್ಷರಾಗಿ ಕಡಮಲಕುಂಟೆ ಗೋಪಾಲ್ ಆಯ್ಕೆಯಾಗಿದ್ದಾರೆ ಎಂದು ಜಿಲಾ ಅಧ್ಯಕ್ಷ ಹೆಚ್.ಎ.ಜಯರಾಮಯ್ಯ ತಿಳಿಸಿದರು.

ಪಾವಗಡ: ಪಟ್ಟಣದ ಹಳೇ ಬಸ್ ನಿಲ್ದಾಣದ ಆಮ್ ಆದ್ಮಿ ಪಾರ್ಟಿ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ತಾಲೂಕಿನ ಮುಂದಿನ ರಾಜಕೀಯ ಸಂಘಟನೆಗಳ ಬಗ್ಗೆ ಚರ್ಚೆಯ ಉದ್ದೇಶಿ ಮಾತನಾಡಿದ ಅವರು ಈಗಾಗಲೇ ಕಾಂಗ್ರೆಸ್ ಪಕ್ಷದ ವಿಚಾರದಲ್ಲಿ ಜನತೆ ಬೇಸರ ಗೋಂಡಿದ್ದಾರೆ.ಜನತೆಗೆ ಮಾತು ಕೊಟ್ಟ ರೀತಿಯಲ್ಲಿ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ.ಬಹಾಳಷ್ಟು ಯೋಜನೆಗಳು ಪಡೆಯಲು ಜನತೆ ಪರಿತಪಿಸುತ್ತಿದ್ದರೆ ಎಂದರು.
ಜಿಲ್ಲಾ ಸಂಘಟನಾ ಕಾರ್ಯದರ್ಶಿ ರಾಮಾಂಜಿನಪ್ಪ ಮಾತನಾಡಿ ಪಾವಗಡ ತಾಲೂಕಿನ ಎರಡನೇ ಬಾರಿಗೆ ಗೋಪಾಲ್ ಅವರಿಗೆ ತಾಲೂಕ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದೇವೆ. ನೋಡು ವಿಚಾರವನ್ನಾಗಿ ತೆಗೆದುಕೊಂಡರೆ ಬಹಳಷ್ಟು ಜ್ವಲಂತ ಸಮಸ್ಯೆಗಳು ತುಂಬು ತುಳುಕುತ್ತಿವೆ. ಪರಿರ್ಯಾಯವಾಗಿ ಆದರೂ ಸರ್ವ ಜನಾಂಗದ ಶಾಂತಿಯ ತೋಟ ದಂತೆ ಎಲ್ಲಾ ಜನಾಂಗದವರಿಗೆ ಸರಿಸಮನಾಗಿ. ತಾಲೂಕಿನಲ್ಲಿ ನಡೆಯುತ್ತಿರುವುದು ಭ್ರಷ್ಟಾಚಾರಗಳ ಬಗ್ಗೆ ಹಾಗೂ ಸುಮಾರು 10 15 ವರ್ಷಗಳಿಂದ ಇಲ್ಲಿಯೇ ಬಿಡು ಬಿಟ್ಟ ಅಧಿಕಾರಿಗಳು ಹೊಂದಾಣಿಕೆ ಮಾಡಿಕೊಂಡು ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡು ಇಲ್ಲೇ ಇದ್ದಾರೆ. ಹಿಂದುಳಿದ ತಾಲೂಕು ಹಿಂದುಳಿದ ತಾಲೂಕು ಹಾಗೆ ಉಳಿದಿದೆ. ಮುಂದಿನ ನಮ್ಮ ಆಹಾರ ಸರಕಾರದಿಂದ ಬದಲಾವಣೆಗೆ ತರಲು ಹೆಚ್ಚಿನ ಶ್ರಮ ವಹಿಸುತ್ತಿವೆ ಎಂದು ತಿಳಿಸಿದರು.

ಆಮ್ ಆದ್ಮಿ ಪಾರ್ಟಿಯ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷ ರುಕ್ಸಾನ ಬಾನು ಮಾತನಾಡಿ ಹಲವು ವರ್ಷಗಳಿಂದ ಜೆಡಿಎಸ್ ಕಾಂಗ್ರೆಸ್ಗೆ ಬೆಂಬಲ ನೀಡಿದ್ದಿರಿ ಒಮ್ಮೆ ಒಂದು ಬಾರಿ ನಮ್ಮ ಪಕ್ಷಕ್ಕೆ ಬೆಂಬಲಿಸಿ ಎಂದರು.

ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಧುಸೂದನ್ ರೈತ ಘಟಕದ ಅಧ್ಯಕ್ಷ ಯೋಗೇಶ್ ಗೌಡ.ಪಾವಗಡ ತಾಲೂಕು ಅಧ್ಯಕ್ಷ ಗೋಪಾಲ್.ಗೋವಿಂದಪ್ಪ.ಗಂಗಧರ್.ಮತ್ತು ಅನೇಕ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಇದ್ದರು.
ವರದಿ
ಪಾವಗಡ:ಇಮ್ರಾನ್ ಉಲ್ಲಾ.