Janataa24 NEWS DESK
ಬಾದಾಮಿ
ಬಾದಾಮಿ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಭೀಮಸೇನ ಚಿಮ್ಮನಕಟ್ಟಿ ಪರ ಪ್ರಚಾರ ಮಾಡಿದ ಬಿ. ಬಿ. ಚಿಮ್ಮನಕಟ್ಟಿ ಯವರ ಪತ್ನಿ ರತ್ನಾಬಾಯಿ ಚಿಮ್ಮನಕಟ್ಟಿ.

ವಿಧಾಸಭಾ ಚುನಾವಣೆಗೆ ಕ್ಷಣಗಣನೆ ಪ್ರಾರಂಭವಾಗಿದ್ದು ಎಲ್ಲಾ ಪಕ್ಷಗಳು ಪ್ರಚಾರವನ್ನು ಭರ್ಜರಿಯಾಗಿ ಪ್ರಾರಂಭಿಸಿವೆ.
ಇತ್ತ ಬಾದಾಮಿ ರಾಜಕಾರಣದ ಕಾಂಗ್ರೆಸ್ ನ ಹುಲಿ ಎಂದೇ ಬಿಂಬಿತರಾಗಿರುವ ಮಾಜಿ ಸಚಿವ ಬಿ. ಬಿ. ಚಿಮ್ಮನಕಟ್ಟಿ ಯವರ ಪುತ್ರ ಕಾಂಗ್ರೆಸ್ ಪಕ್ಷದ ಬಾದಾಮಿ ಮತಕ್ಷೇತ್ರದ ಅಭ್ಯರ್ಥಿ ಯುವ ಮುಖಂಡ ಭೀಮಸೇನ ಚಿಮ್ಮನಕಟ್ಟಿ ಪರ ತಾಲೂಕಿನ ಬೇಲೂರಿನಲ್ಲಿ ಮಗನ ಪರ ಮಾತೋಶ್ರೀ ರತ್ನಾಬಾಯಿ ಬಿ. ಚಿಮ್ಮನ ಕಟ್ಟಿ ಭರ್ಜರಿ ಬೀರುಸಿನ ಪ್ರಚಾರ ಕೈಗೊಂಡರು.

ಬಾದಾಮಿ ತಾಲೂಕಿನ ಬೇಲೂರಿನಲ್ಲಿ ಮನೆ ಮನೆಗೆ ತೆರಳಿ ಕಾಂಗ್ರೆಸ್ ಪಕ್ಷದ ಜನಪರ ಯೋಜನೆಗಳ ಬಗ್ಗೆ ಹಾಗೂ ಕಾಂಗ್ರೆಸ್ ನ ಗ್ಯಾರಂಟಿ ಕಾರ್ಡ್ ವಿತರಿಸಿ ಮಾತಾಯಾಚನೆ ಮಾಡಿ ಮತ ಯಾಚನೆ ಮಾಡಿ ಮಗ ಭೀಮಸೇನನಿಗೆ ಆಶೀರ್ವಾದ ಮಾಡಿರಿ ಎಂದು ವಿನಂತಿಸಿಕೊಂಡರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡ ಎಂ.ಡಿ.ಯಲಿಗಾರ ಸೇರಿದಂತೆ ಅನೇಕ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.
ವರದಿ
ಬಾಗಲಕೋಟೆ :ರಾಜೇಶ್. ಎಸ್. ದೇಸಾಯಿ