Janataa24 NEWS DESK
ಪಾವಗಡ ಪಟ್ಟಣದಲ್ಲಿ ವಿಶ್ವಕಾರ್ಮಿಕ ದಿನಾಚರಣೆಯನ್ನು ಮೆ1.2023ರಂದು ಪಾವಗಡ(CITU) ತಾಲೊಕ್ ಸಮಿತಿ ಇಂದ ಆಚರಿಸಲಾಯಿತು .

ಉದ್ಘಾಟನೆಯನ್ನು ಕಟಡ್ಡ ಕಾರ್ಮಿಕ ಸಂಘದ ಜಿಲ್ಲಾದ್ಯಕ್ಷರಾದ ಬಿ.ಉಮೆಶ್ ಮಾತನಾಡಿ ದೇಶದಲ್ಲಿ ಕಾರ್ಪೊರೇಟ್ ಸರ್ಕಾರ ಜಾರಿಯಲ್ಲಿ ಇದ್ದು ಜನಸಾಮಾನ್ಯರ ಸೇವೆ ಗಿಂತ ಆದಾನಿ ಅಂಬಾನಿ ಸೇವೆ ಹೆಚ್ಚಾಳವಾಗಿದೆ ಬಡಜನರನ್ನು ನಿರ್ಲಕ್ಷ್ಯ ಸಲಾಗಿದೆ ಇದರಿಂದ ಸಣ್ಣ ಪುಟ್ಟ ವ್ಯಾಪಾರಿಗಳು ಕಾರ್ಮಿಕರು ಕೆಲಸ ಕಳೆದು ಕೊಳ್ಳ ಬೇಕಾದ ಪರಿಸ್ಥಿತಿ ಇದೆ .ಕಡಿಮೆ ವೇತನಕ್ಕೆ ಹೆಚ್ಚು ಕೆಲಸ ಮಾಡಬೆಕಾದ ಸ್ಥಿತಿ ಇದೆ ವಿಪರಿತವಾದ ಬೆಲೆ ಏರಿಕೆ ಇಂದ ಜನ ಬೆಸತ್ತಿದ್ದಾರೆ ರೈತ ಕಾರ್ಮಿಕರ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚಾಳವಾಗಿದೆ ಪರಿಹಾರಿಸುವ ಯಾವುದೆ ಪ್ರಯತ್ನ. ಸರ್ಕಾರಕ್ಕಿಲ್ಲಾ ಬದಲಾಗಿ ಚಳುವಳಿ ಗಳನ್ನು ದಮನ ಮಾಡುತೊಡಗಿವೆ ಜನಸಾಮಾನ್ಯರು ಸಮಸ್ಯೆ ಗಳನ್ನು ಕೆಳದಂತೆ ಜಾತಿ ಧರ್ಮದ ಆದಾರದಲ್ಲಿ ವಿಭಾಗಿಸಲಾಗುತ್ತಿದೆ ದುಡುಮೆಯ ಬಹುಪಾಲು ಆಹಾರ ಮತ್ತು ಮೊಬೈಲ್ ಫೋನ್ ಗಳಿಗೆ ರಿಚಾರ್ಜ್ ಗಾಗಿ ಮಿಸಲಿಡಾಬೆಕಾದ ಪರಿಸ್ಥಿತಿ ಜನಸಾಮಾನ್ಯರು ಕಾರ್ಮಿಕರು ಏದುರಿಸುತ್ತಿದ್ದಾರೆ.ವಿಪರಿತವಾದ ತೆರಿಗೆ ಪಾವತಿಸ ಬೇಕಾದ ಪರಿಸ್ಥಿತಿ ಇದೆ ಇವರನ್ನು ಬದಲಾಯಿಸಬೆಕಾಗಿದೆ.

ನಿರುದ್ಯೋಗ. ಬೆಲೆಏರಿಕೆ.ರೈತರ ಬೆಳೆಗಳಿಗೆ ಬೆಂಬಲ ಬೆಲೆಇಲ್ಲಾದಿರುವುದು ಇತ್ಯಾದಿ ಸಮಸ್ಯೆಗಳು ಇದ್ದು ಪ್ರಭಲವಾದ ಕಾರ್ಮಿಕ ಚಳುವಳಿ ಕಟ್ಟಬೆಕಾಗಿದೆ ಮತದಾನವು ಅತ್ಯಂತ ಶ್ರೆಷ್ಟವಾದದ್ದು ಎಲ್ಲಾರು ತಪ್ಪದೆ ಮತದಾನ ಮಾಡುವ ಮೂಲಕ ಹಕ್ಕು ಚಲಾಯಿಸ ಬೇಕು ಎಂದು ಕರೆ ನೀಡಿದರು.
ವಕೀಲರಾದ ಶಿವಣ್ಣ .ಈ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಮಿಕ ಕಾಯ್ದೆಗೆ ತಿದ್ದುಪಡಿ ತಂದು ಕಾರ್ಮಿಕರ ಹಕ್ಕುಗಳನ್ನು ಕಸಿಕೊಳ್ಳಲಾಗಿದೆ ಎಂದು ಎಸ್.ಎಫ್.ಐ ಜಿಲ್ಲಾಧ್ಯಕ್ಷ ಹಾಗೂ ಯುವ ವಕೀಲ ಈ.ಶಿವಣ್ಣ ಆರೋಪಿಸಿದ್ದಾರೆ. ಕಾರ್ಮಿಕ ಕಾಯ್ದೆ ತಿದ್ದುಪಡಿಯನ್ನು ವಾಪಸ್ ಪಡೆಯಬೇಕಾದರೆ ದೇಶದಲ್ಲಿ ಕಾರ್ಮಿಕ ಚಳವಳಿ ದೊಡ್ಡ ಮಟ್ಟದಲ್ಲಿ ಬೆಳೆಯಬೇಕಾದ ಅನಿವಾರ್ಯತೆ ಇದೆ. ಆದ್ದರಿಂದ ಕಾರ್ಮಿಕರೆಲ್ಲರೂ ಒಂದಾಗಬೇಕು ಎಂದು ಸಲಹೆ ನೀಡಿದರು.ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಮಿಕ ವಿರೋಧಿ ನೀತಿಗಳು ಮತ್ತು ಕಾರ್ಪೋರೇಟ್ ನೀತಿಗಳನ್ನು ಜಾರಿಗೊಳಿಸುತ್ತಿರುವುದರಿಂದ ಕಾರ್ಮಿಕರು ಒಗ್ಗೂಡಬೇಕಾಗಿದೆ. ಬೆಲೆ ಏರಿಕೆ ವಿರುದ್ಧ ತೀವ್ರ ಸ್ವರೂಪದ ಹೋರಾಟ ಬರಬೇಕಾಗಿದೆ ಎಂದು ಹೇಳಿದರು. ಪಾವಗಡದಲ್ಲಿ ನಿರುದ್ಯೋಗ ಪ್ರಮಾಣ ದೊಡ್ಡದಾಗಿದೆ.

ಪಾವಗಡ ತಾಲ್ಲೂಕಿನಲ್ಲಿ ನಿರುದ್ಯೋಗ ಸಮಸ್ಯೆ ದೊಡ್ಡ ಪ್ರಮಾಣದಲ್ಲಿದೆ. ತಾಲೂಕಿನ ಗ್ರಾಮಾಂತರ ಪ್ರದೇಶದ ನೂರಾರು ಮಂದಿ ರಾಜ್ಯದ ಹೊರ ಜಿಲ್ಲೆಗಳಿಗೆ ವಲಸೆ ಹೋಗುತ್ತಿದ್ದಾರೆ. ಅಧಿಕಾರಕ್ಕೆ ಬಂದ ಯಾವ ಪಕ್ಷದ ಶಾಸಕರೂ ತಾಲೂಕಿನಲ್ಲಿ ಕಾರ್ಖಾನೆಗಳ ನಿರ್ಮಾಣಕ್ಕೆ ಪ್ರಯತ್ನ ಮಾಡಲಿಲ್ಲ. ಉದ್ಯೋಗವನ್ನು ನೀಡಲು ಮುಂದಾಗಲಿಲ್ಲ ಎಂದು ಆರೋಪಿಸಿದರು.
ಕಾರ್ಖಾನೆಗಳನ್ನು ನಿರ್ಮಾಣ ಮಾಡಿದರೆ ನೂರಾರು ಯುವಕ-ಯುವತಿಯರಿಗೆ ಉದ್ಯೋಗಗಳು ಸಿಗುತ್ತವೆ. ಇದರಿಂದ ಕುಟುಂಬಗಳು ಆರ್ಥಿಕವಾಗಿ ಶಕ್ತಿಯುತವಾಗುತ್ತವೆ ಎಂದರು.ಈ ಸಂದರ್ಭದಲ್ಲಿ ಪಾವಗಡ ತಾಲ್ಲೂಕಿನ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷರಾದ ರಾಮಂಜಿನಪ್ಪ .ಸಿಪಿಐಮ್ ಕಾರ್ಯದರ್ಶಿ ನಾಗರಾಜು.ಎಪಿಯಂಸಿ ಸುಬ್ಬರಾಯಪ್ಪ .ಶಿವಗಂಗಮ್ಮ.ಅಭಿಲಾಷಾ. ಬುಲಾಕ್ಷ್ಮಮ್ಮ.ಚಾಂದ್ ಪಾಷ. ಎನ್ ಹೆಚ್.ದುಗ್ಗಪ್ಪ.ಮದ್ಲೆಟಪ್ಪ ಮುಂತಾದವರು ಹಾಜರಿದ್ದರು.
ವರದಿ
ಪಾವಗಡ: ಇಮ್ರಾನ್ ಉಲ್ಲಾ