Janataa24 NEWS DESK
ಸ್ವಾಭಿಮಾನ ಇದ್ದರೆ ಮುಸ್ಲಿಮರು ಈ ಭಾರಿ ಬಿಜೆಪಿ ಪಕ್ಷಕ್ಕೆ ಮತಹಾಕಬಾರದು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ.

ಪಾವಗಡ: ಪಟ್ಟಣದ ಚಳ್ಳಕೆರೆ ಕ್ರಾಸ್ ಬಳಿ ಇರುವ ಮಾಧವ್ ನಾಯಕ ಜಮೀನಿನಲ್ಲಿ ಹಮ್ಮಿಕೊಳ್ಳಲಾಗಿದೆ ಕಾಂಗ್ರೆಸ್ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ
ಸಿದ್ದರಾಮಯ್ಯ ಉದ್ಘಾಟಿಸಿ ನಂತರ ಮಾತನಾಡಿ ಮುಸ್ಲಿಂರಿಗಿದ್ದ ನಾಲ್ಕು %ಮೀಸಲಾತಿ ಬಿಜೆಪಿ ತೆಗೆದು ಹಾಕಿದ್ದಾರೆ.

ನಲವತ್ತು ಪರ್ಸೆಂಟ್(40%) ಸರ್ಕಾರ ಮತ್ತು ಸುಳ್ಳು ಹೇಳಿಕೊಂಡ ಹೊಗುವ ಜೆಡಿಎಸ್ ಪಕ್ಷಗಳ ವಿರುದ್ಧ ಭಾಷಣದ ಉದ್ದಕ್ಕೂ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ.
ಈ ಭಾಗದ ಕಾಂಗ್ರೆಸ್ ಅಭ್ಯರ್ಥಿ ಹೆಚ್.ವಿ.ವೆಂಕಟೇಶ್ ಪರ ಮತ ಯಾಜನೆ ಮಾಡಿ.ಅಭಿವೃದ್ಧಿ ಯಾಗಬೇಕಾದರೆ ಕಾಂಗ್ರೆಸ್ ಮತಹಾಕಿ ಎಂದರು.
ವೆಂಕಟರಮಣಪ್ಪ ಬಹಳ ಸಜ್ಜನ ಸ್ವಾಭಿಮಾನಿ ರಾಜಕಾರಣಿ..
ಪಾವಗಡಕ್ಕೆ ಕುಡಿಯೋ ನೀರು ಇರಲಿಲ್ಲಾ,ವೆಂಕಟರಮಣಪ್ಪ ಹೇಳಿದ್ರು.ನಾನು ತುಂಗಭದ್ರ ಡ್ಯಾಂ ಹಿನ್ನೀರಿನಿಂದ ಕುಡ್ಲಗಿ,ಚಳ್ಳಕೆರೆ ಪಾವಗಡಕ್ಕೆ ನೀರು ಕೊಡವ ಯೋಜನೆ ಮಾಡ್ದೆ..
2200 ಕೋಟಿ ರೂಪಾಯಿಗಳ ಕುಡಿಯುವ ನೀರಿನ ಯೋಜನೆ ಮಂಜೂರು ಮಾಡಿದ್ದು ನಮ್ಮ ಕಾಂಗ್ರೆಸ್ ಸರ್ಕಾರ.

ಜೆಡಿಎಸ್ ತಿಮ್ಮರಾಯಪ್ಪ,ಕುಮಾರಸ್ವಾಮಿ ಏನು ಈ ಭಾಗದಲ್ಲಿ ಮಾಡಲಿಲ್ಲಾ..ಇಡೀ ಏಷ್ಯಾದಲ್ಲೇ 2000 ಮೆಗಾವ್ಯಾಟ್ ಸೋಲಾರ್ ಪಾರ್ಕ್ ಮಾಡಿದ್ದು ನಮ್ಮ ಸರ್ಕಾರ.ಡಿಕೆ ಶಿ ಪವರ್ ಮಿನಿಸ್ಟರ್ ಆಗಿದ್ದಾಗ ನಾನೇ ಬಂದು ಅದನ್ನ ಉದ್ಘಾಟನೆ ಮಾಡ್ದೆ..
ಆರ್ಥಿಕ ಚಟುವಟಿಕೆ ಜಾಸ್ತಿ ಆಗಿ ಉದ್ಯೋಗ ಸೃಷ್ಠಿಯಾಗಿ,ಭೂಮಿ ಬೆಲೆ ಜಾಸ್ತಿಯಾಗೋದಕ್ಕೆ ಕಾರಣ ಸೋಲಾರ್ ಪಾರ್ಕ್..
ಅಪ್ಪರ್ ಭದ್ರ ಯೋಜನೆಗೆ ಅಪ್ರೂ ಮಾಡಿ ಚಾಲನೆ ಕೊಟ್ಟಿದ್ದು ನಮ್ಮ ಸರ್ಕಾರ.ಇಲ್ಲಿನ ಕೆರೆಗಳು ತುಂಬಿದ್ರೇ ಇದು ಮಲೆನಾಡು ಆಗುತ್ತೆ.ಎತ್ತಿನಹೊಳೆ ಪ್ರಾಜೆಕ್ಟ್ ನ ಕುಮಾರಸ್ವಾಮಿ ವಿರೋಧಿಸಿದ್ರು.ನಾನು ನಿಮಗೆ ಕೇಳ್ತಿದ್ದೇನೆ,,ಎತ್ತಿನಹೊಳೆ ಯೋಜನೆ ನಿಮಗೆ ಬೇಕಾ,ಬೇಡ್ವಾ..?ಬೇಕು ಅನ್ನೋದಾದರೇ ಜೆಡಿಎಸ್ ನ ತಿರಸ್ಕಾರ ಮಾಡಿ.ನಮ್ಮ ಸರ್ಕಾರದ ಅವಧಿಯಲ್ಲಿ ಹಲವು ಬಡವರ ಪರ ಯೋಜನೆಗಳು ಬಿಜೆಪಿ ಸರ್ಕಾರ ಬಂದ ಮೇಲೆ ತೆಗೆದು ಹಾಕಿದರು.ಶಾಧಿ ಭಾಗ್ಯ.ಪಶು ಭಾಗ್ಯ.. ಇಂತಹ ಅನೇಕ ಯೋಜನೆಗಳು ತೆಗೆದು ಹಾಕಿದ್ದು ಬಿಜೆಪಿ ಸರ್ಕಾರ ಎಂದರು.
ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಮುದಾಯಕ್ಕೆ ಬಿಜೆಪಿ ಪಕ್ಷದಿಂದ 224 ಕ್ಷೇತ್ರದಲ್ಲಿ ಒಬ್ಬರಿಗೂ ಈ ಭಾರಿ ಟಿಕೆಟ್ ನೀಡಿಲ್ಲ.
ಮುಸ್ಲಿಂ ಸಮುದಾಯದವರು ಈ ಭಾರಿ ಬಿಜೆಪಿ ಗೆ ಒಬ್ಬರು ಸಹ ಮತಹಾಕ ಬಾರದು.ವೆಂಕಟೇಶ್ ಈ ಭಾಗದಿಂದ ಗೆದ್ದು ಕಳುಹಿಸಿದರೆ ನಿಮ್ಮ ತಾಲೂಕಿಗೆ ಏನೂ ಬೇಕಾದರೂ ಸಹ ಕೂಡುತ್ತೇವೆ ಎಂದರು.ಬಿಜೆಪಿ ಆಪರೇಷನ್ ಕಮಲ ಮಾಡಿ ಅನೈತಿಕ ಸರ್ಕಾರ ರಚನೆ ಮಾಡಿದ್ರು.ಶಾಸಕರಿಗೆ ಕೋಟ್ಯಾಂತರ ರೂಪಾಯಿ ಕೊಟ್ಟು ರಾಜೀನಾಮೆ ಕೊಡಿಸಿ ಅಧಿಕಾರಕ್ಕೆ ಬಂದರು..
ಕಳೆದ ಸಾರಿ ನಾವು ಕುಮಾರಸ್ವಾಮಿ ಯವರು 37 ಸ್ಥಾನ ಇದ್ದರು ಮುಖ್ಯಮಂತ್ರಿ ಮಾಡಿದ್ವಿ.ನಾವು 80 ಶಾಸಕರು ಇದ್ರೂ ಅವರನ್ನೇ ಸಿಎಂ ಮಾಡಿದ್ವಿ.ಕುಮಾರಸ್ವಾಮಿ ಬೇಜವಾಬ್ದಾರಿತನದಿಂದ ಶಾಸಕರನ್ನ ನಿರ್ಲಕ್ಷತನದಿಂದ.ಸರ್ಕಾರ ಬಿಳಿಸಲು ಕಾರಣವಾಯಿತು.ಒಂದು ವರ್ಷ ತಾಜ್ ವೆಸ್ಟ್ ಎಂಡ್ ನಲ್ಲಿ ಉಳಿಕೋಬಿಟ್ಟ ಗಿರಾಕಿ.ಯಾರನ್ನೂ ಭೇಟಿ ಮಾಡ್ತಿರಲಿಲ್ಲಾ..
ಮಜಾ ಮಾಡ್ತಿದ್ರು ಗಿರಾಕಿ.ಈಗ ಯಾವ ಪಾರ್ಟಿನೂ ಮೆಜಾರಿಟಿ ಬರಬಾರದು ಅಂತಾ ಹೋಮ ಮಾಡ್ತ್ಸಿಸುತ್ತಿದ್ದಾರೆ.
ಕಾಂಗ್ರೆಸ್ ಸಮಾವೇಶಕ್ಕೆ ಹರಿದು ಬಂದ ಜನ ಸಾಗರ.ಸಿದ್ದರಾಮಯ್ಯ ನೋಡಲು ನೂಕು ನುಗ್ಗಲು. ಸಿದ್ದರಾಮಯ್ಯ ಭಾಷಣ ಉದ್ದಕ್ಕೂ ಅಭಿಮಾನಿಗಳಿಂದ ಹೌದು ಹುಲಿಯ ಘೋಷಣೆ.
ಈ ವೇಳೆ ಮಾಜಿ ಸಚಿವ ಹಾಲಿ ಶಾಸಕ ವೆಂಕಟರಮಣಪ್ಪ.ಆಂದ್ರದ ಕಾಂಗ್ರೆಸ್ ಅಧ್ಯಕ್ಷ ರಘುವೀರ ರೆಡ್ಡಿ.
ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ವರದಿ
ಪಾವಗಡ: ಇಮ್ರಾನ್ ಉಲ್ಲಾ.