Document

ಪಾವಗಡ: ಶ್ರಾವಣ ಮಾಸಕ್ಕೆ ವಿಶೇಷ ಅಲಂಕಾರದಿಂದ ಸಿದ್ದಗೊಂಡ ಶನೇಶ್ವರಸ್ವಾಮಿ ದೇವಾಲಯ.

Janataa24 NEWS DESK

IMG 20230818 WA0016

ಮಹಿಳೆಯರ ಫ್ರೀ ಬಸ್ ಯೋಜನೆ ಯಿಂದ ಪಾವಗಡದ ಶನಿದೇವರಿಗೂ ತಟ್ಟುವ ಸಾದ್ಯತೆ ಇದೆ.




ಪಾವಗಡ ಶ್ರಾವಣ ಮಾಸಕ್ಕೆ ಸಿದ್ದಕೂಂಡ ಶನೇಶ್ವರಸ್ವಾಮಿ ದೇವಾಲಯ.



ಪಾವಗಡ: ಪಟ್ಟಣದ ಶ್ರೀ ಶ್ರೀತಲಾಂಬ ಅಮ್ಮನವರ .ಹಾಗೂ ಜ್ಯೆಷ್ಠಾದೇವಿ ಮತ್ತು ಶ್ರೀ ಶನಿಮಹಾತ್ಮ
ದೇವಸ್ಥಾನದ ಶ್ರಾವಣ ಮಾಸದಲ್ಲಿ ನಡೆಯುವ ಪೂಜಾ ಕರ‍್ಯಕ್ರಮಗಳು ಸಕಲ ಸಿದ್ಧತೆ ದಿನಾಂಕ 17-8-2023
ಶುಕ್ರವಾರದಿಂದ 14-9-2023 ಗುರವಾರದವರೆಗೆ ವಿಶೇಷ ಪೂಜೆಗಳು ನಡೆಯಲಿವೆ ಎಂದು
ಎಸ್.ಎಸ್.ಕೆ.ಸಂಘದ ಅಧ್ಯಕ್ಷ ಆನಂದ್ ರಾವ್ ತಿಳಿಸಿದ್ದಾರೆ.



ಪಾವಗಡ ಕ್ಷೇತ್ರ ಶ್ರೀ ಮದಾದಿತ್ಯಾದಿ ನವಗ್ರಹ ಪುರಸ್ಸರ ಶ್ರೀ ಜ್ಯೇಷ್ಠದೇವಿ ಮತ್ತು ಶ್ರಿ ಶನೈಶ್ವರಸ್ವಾಮಿ ದೇವಸ್ಥಾನದಲ್ಲಿ ಸಂಪ್ರದಾಯದಂತೆ ಸ್ವಸಿ ಶ್ರೀ ಶೋಭಕೃತುನಾಮ ಸಂವತ್ಸರ
ಶ್ರಾವಣ ಮಾಸದ ಶನಿವಾರಗಳಲ್ಲಿ ದೇವರ ಸೇವೆಗಳನ್ನು ಭಕ್ತರು ಪಾವತಿ ಮಾಡಿರುವ ಮೀಸಲು
ದೇಣಿಗೆಯ ಉತ್ಪತ್ತಿಯಿಂದಲೂ.ಸಂಘದ ಕೋಶದಿಂದಲೂ.ಪೂಜಾದಿ ಕೈಂಕರ್ಯಳ
ನಡೆಸಲ್ಪಡುತ್ತದೆ.ಪ್ರತಿ ಶನಿವಾರದಂದು ರಾತ್ರಿ 7.30. ಗಂಟೆಗೆ ವಿಶೇಷ ಉತ್ಸವಗಳನ್ನು
ರ‍್ಪಡಿಸಲಾಗಿದೆ.ಭಕ್ತಾದಿಗಳು. ಸೇವಾರ‍್ತರು ಸಕಾಲಕ್ಕೆ ದೇವಸ್ಥಾನಕ್ಕೆ ಅಗಮಿಸಿ.ಸ್ವಾಮಿಯ
ರ‍್ಶನ ಸೇವಾದಿಗಳನ್ನು ನೆರವೇರಿಸಿ ಕೃತಕೃತ್ಯರಾಗಲು ಕೋರಿದೆ.

IMG 20230818 WA0017



ರಾಜ್ಯದ ವಿವಿಧ ಕಡೆಗಳಿಂದ ನಾವಿರಾರು ಭಕ್ತರು ಶ್ರಾವಣ ಮಾಸದಲ್ಲಿ ಶನೇಶ್ವರನ ದರ್ಶನಕ್ಕೆ ಬಂದು ಪೋಜೆಸಲ್ಲಿಸುವುದು ವಾಡಿಕೆ.
ರಾಜ್ಯದ ಮೂಲೆ ಮೂಲೆಗಳಿಂದ ಮತ್ತು ಆಂದ್ರದ ಬಹುತೇಕ ಕಡೆಗಳಿಂದ ಶನೇಶ್ವರನ ದರ್ಶನಕ್ಕೆ ಬರುತ್ತಾರೆ.
ದೇವಸ್ಥಾನದ ಕರ‍್ಯರ‍್ಶಿ ಸುಬ್ಬನರಸಿಂಹ ರವರು ಮಾತನಾಡಿ ಪ್ರತಿರ‍್ಷದಂತೆ ಈ ಬಾರಿಯೂ
ಶ್ರಾವಣ ಮಾಸದಲ್ಲಿ ಹಮ್ಮಿಕೂಳ್ಳವಂತಹ ಎಲ್ಲತರಹದ ಸಿದ್ದತೆಗಳು ನಡೆಸಲಾಗಿದೆ ನಾನಾ
ಕಡೆಗಳಿಂದಲೂ ಬರುವಂತಹ ಭಕ್ತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಬರುವಂತಹ ಭಕ್ತರಿಗೆ
ಯಾವುದೇ ತೊಂದರೆ ಅಗದ ರೀತಿಯಲ್ಲಿ ವ್ಯವಸ್ಥೆ ನಮ್ಮ ಸಂಘದಿಂದ ಮಾಡಲಾಗಿದೆ ಎಂದರು.



ಬೇರೊಂದು ಕಡೆಗಳಿಂದ ಬರುವ ಭಕ್ತರಿಗೆ ಐನೂರು ಕೋಟಡಿಗಳು ಸೌಕರ್ಯಗಳನ್ನು ಒದಗಿಸಿದೆ. ಹತ್ತು
ಸಾವಿರ ಭಕ್ತರು ಮಲಗುವ ದೂಡ್ಡ ಕೋಣೆಯನ್ನು ಹೊಂದಿದೆ ಎಂದರು.
ಮುಡಿ ಕೊಡುವ ಭಕ್ತಾದಿಗಳಿಗೆ ವಿಶೇಷವಾಗಿ ಸ್ಥಾನಕ್ಕಾಗಿ ಐವತ್ತು ಸ್ನಾನದ ಕೊಠಡಿಗಳು ಮತ್ತು
ಮಹಿಳೆಯರಿಗೆ 100 ಸ್ನಾನಗೃಹಗಳು ವ್ಯವಸ್ಥೆ ಕಲ್ಪಸಲಾಗಿದೆ.



ಭಕ್ತಾದಿಗಳಿಗೆ ನವಗ್ರಹ ಪೂಜೆಮಾಡಿಸಲು ದೇವರ ದರ್ಶನಕ್ಕೆ ವಿಶೇಷ ಕೌಂಟರ್ ಗಳು
ತೆರೆಯಲಾಗಿದೆ. ಶನಿವಾರ ಮುಂಜಾನೆ 3ಗಂಟೆಗಳಿಂದ ಪೂಜೆ ಪ್ರಾರಂಭವಾಗಲಿದ್ದು ಭಕ್ರರಿಗೆ
ಎಲ್ಲಾ ತರಹದ ಅನುಕೂಲ ಕಲ್ಪಿಸಲಾಗಿದೆ ಎಂದರು.



ಭಕ್ತಾದಿಗಳಿಗೆ. ಯಾವೂದೇ ಅಹಿತಕಾರ ಘಟನೆಗಳು ಸಂಭವಿಸದಂತೆ ಎಲ್ಲಾ ಕಡೆ ಸಿಸಿ ಕ್ಯಾಮರಗಳು
ಹಾಗೂ ಪೋಲಿಸ್ ಸಿಬ್ಬಂದಿಯನ್ನು ಬಂದೋಬಸ್ತು ರ‍್ಪಡಿಸಿದ್ದೆ ಹಾಗೂ ಸ್ವಯಂ ಸೇವಕ ತಂಡಗಳನ್ನು
ನೇಮಕಮಾಡಲಾಗಿದೆ.



ಶ್ರಾವಣ ಮಾಸ ಬಂತು ಎಂದರೆ ಶನೇಶ್ವರ ದೇವಾಲಯಕ್ಕೆ ಎಲ್ಲಿಲ್ಲದ ಪ್ರಾಮುಖ್ಯತೆ ಹೆಚ್ಚು ನವಗ್ರಹಗಳಲ್ಲಿ ಶನೇಶ್ವರ ಎಂದರೆ ಎಲ್ಲರಿಗೂ ಭಯ ಹಾಗೇಯೆ ಶನೇಶ್ವರ ಕುರಿತು ಕಥೆ
ಓದಿಸುವ.ನವಗ್ರಹ ಪೂಜೆ ಮಾಡಿಸುವದು ವಾಡಿಕೆ .

ಪಾವಗಡ ಶ್ರೀ ಶನಿ ಮಹಾತ್ಮ ದೇವಸ್ಥಾನಕ್ಕಾಗಿ ನೂತನವಾಗಿ ನಿರ್ಮಿಸಿರುವ ಶ್ರೀ ಶನೈಶ್ಚರ ಸ್ವಾಮಿ ಹಾಗೂ ಜ್ಯೇಶ್ಟಾದೇವಿಯವರ ಪಂಚಲೋಹದ ವಿಗ್ರಹಗಳನ್ನು ಸ್ವಾಮಿಯವರ ಸೇವೆಗೆ ಸಮರ್ಪಿಸಿದ ಕ್ಷಣ.

IMG 20230818 WA0020



ವರದಿ:

ಪಾವಗಡ: ಇಮ್ರಾನ್ ಉಲ್ಲಾ.

Document

Leave a Reply

Your email address will not be published. Required fields are marked *